
ಬೆಂಗಳೂರು(ಅ. 23) ವಿಭಿನ್ನ ಶೈಲಿಯಲ್ಲಿ ದಬಾಂಗ್ 3 ಸಿನಿಮಾ ಪ್ರಚಾರ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮ ಮತ್ತು ಅಭಿಮಾನಿಗಳ ಜೊತೆ ಸಲ್ಮಾನ್ ಖಾನ್ ಚರ್ಚೆ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬರುವುದಾಗಿ ಸಲ್ಮಾನ್‌ಖಾನ್ ತಿಳಿಸಿದ್ದಾರೆ
ಕೆಜಿಎಫ್ ಸಿನಿಮಾಬಗ್ಗೆ ಸಲ್ಮಾನ್ ಮಾತನಾಡಿದ್ದಾರೆ. ಕನ್ನಡದ ಕೆಜಿಎಫ್ ಸಿನಿಮಾ ಕೂಡ ಮುಂಬೈ ಪ್ರೇಕ್ಷಕರು ನೋಡಿದ್ದಾರೆ ಎಂದು ಬೆಂಗಳೂರಿನ ಅಭಿಮಾನಿಗಳ ಜೊತೆ ಸಲ್ಮಾನ್ ಖಾನ್ ಮಾತನಾಡುತ್ತ ಹೇಳಿದ್ದಾರೆ.
ಕಿಚ್ಚ ಸುದೀಪ್ ನನ್ನ ಸಹೋದರ ನ ರೀತಿ ಇದ್ದಾರೆ. ಸೋಹಿಲ್ ಗೆ ಸುದೀಪ್ ಮೊದಲು ಪರಿಚಯ ಈಗ ನನಗೂ ಕ್ಲೋಸ್. ಸುದೀಪ್ ಒಳ್ಳೆ ಮನುಷ್ಯ ..ಹಾರ್ಡ್ ವರ್ಕರ್ . ಕ್ಲಿಯರ್ ಹಾರ್ಟ್ ಮನುಷ್ಯ . ಸುದೀಪ್ ಸಿನಿಮಾದಲ್ಲಿ ತುಂಬಾ ಅದ್ಬುತ ಮನುಷ್ಯ. ಸೌತ್ ನಲ್ಲಿಸುದೀಪ್ ಸೂಪರ್ ಸ್ಟಾರ್ ಅದಕ್ಕಾಗಿ ಅವರನ್ನೇ ಆಯ್ಕೆ ಮಾಡಿಕೊಂಡೆವು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಕನ್ನಡದಲ್ಲಿ ನಟಿಸುವ ಬಯಕೆಯೂ ಇದೆ ಎಂದು ಅಭಿಮಾನಿಗಳ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ವಿಡಿಯೋ ಕಾನ್ಫರೆನ್ಸ್ ನಿರ್ದೇಶಕ ಅನೂಪ್ ಭಂಡಾರಿ ಸಲ್ಮಾನ್ ಬಳಿ ಕನ್ನಡದಲ್ಲಿ ಅಭಿನಯಿಸುವ ಬಗ್ಗೆ ಪ್ರಶ್ನೆ ಮಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.