ಬಾಲಿವುಡ್‌ನಲ್ಲಿ ಇವೆರಡೇ ಮುಖ್ಯ, ಸತ್ವವೇ ಇಲ್ಲ : ಪ್ರಕಾಶ್ ರಾಜ್‌

Kannadaprabha News   | Kannada Prabha
Published : Jan 26, 2026, 06:10 AM IST
Prakash Raj

ಸಾರಾಂಶ

‘ಸದ್ಯಕ್ಕೆ ಮಲಯಾಳಂ ಮತ್ತು ತಮಿಳು ಚಿತ್ರರಂಗಗಳು ಶ್ರೇಷ್ಠ ಚಿತ್ರಗಳನ್ನು ನೀಡುತ್ತಿವೆ. ಇನ್ನೊಂದೆಡೆ, ಹಿಂದಿ ಚಿತ್ರರಂಗ ಪ್ಲಾಸ್ಟಿಕ್‌ನಂತೆ ಸುಂದರವಾಗಿ, ಅದ್ಭುತವಾಗಿ ಕಾಣುತ್ತದೆ. ಆದರೆ ತನ್ನ ಬೇರುಗಳನ್ನು ಕಳೆದುಕೊಂಡಿದೆ.

ಕಲ್ಲಿಕೋಟೆ : ‘ಸದ್ಯಕ್ಕೆ ಮಲಯಾಳಂ ಮತ್ತು ತಮಿಳು ಚಿತ್ರರಂಗಗಳು ಶ್ರೇಷ್ಠ ಚಿತ್ರಗಳನ್ನು ನೀಡುತ್ತಿವೆ. ಇನ್ನೊಂದೆಡೆ, ಹಿಂದಿ ಚಿತ್ರರಂಗ ಪ್ಲಾಸ್ಟಿಕ್‌ನಂತೆ ಸುಂದರವಾಗಿ, ಅದ್ಭುತವಾಗಿ ಕಾಣುತ್ತದೆ. ಆದರೆ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಬರೀ ನಕಲಿ, ಹಣಕಾಸು ಕೇಂದ್ರಿತ ಮತ್ತು ಸ್ವಯಂ ಪ್ರಚಾರಕ್ಕೆ ಸೀಮಿತವಾಗಿದ್ದು, ಸತ್ವವನ್ನು ಕಳೆದುಕೊಂಡಿದೆ’ ಎಂದು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಶನಿವಾರ ಟೀಕಿಸಿದ್ದಾರೆ.

ಬಾಲಿವುಡ್‌ನಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ

ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಬಾಲಿವುಡ್‌ನಲ್ಲಿ ಎಲ್ಲವೂ ಸುಂದರವಾಗಿ ಕಾಣುತ್ತದೆ. ಆದರೆ ಅದರಲ್ಲಿ ಸತ್ವವಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ, ಮಲಯಾಳಂ ಮತ್ತು ತಮಿಳು ಚಿತ್ರರಂಗಗಳು ತುಂಬಾ ಬಲಿಷ್ಠವಾದ ಸಿನಿಮಾಗಳನ್ನು ನಿರ್ಮಿಸುತ್ತಿವೆ. ಮತ್ತೊಂದೆಡೆ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಂತೆ ಎಲ್ಲವೂ ಸುಂದರವಾಗಿ, ಅದ್ಭುತವಾಗಿ ಪ್ಲಾಸ್ಟಿಕ್‌ನಂತೆ ಕಾಣುತ್ತದೆ’ ಎಂದರು.

ತಮಿಳಿನಲ್ಲಿ ದಲಿತ ಸಮಸ್ಯೆಗೆ ಧ್ವನಿ:

‘ನಾವು ದಕ್ಷಿಣದವರು ಹೇಳಲು ಇನ್ನೂ ಒಳ್ಳೆಯ ಕಥೆಗಳನ್ನು ಹೊಂದಿದ್ದೇವೆ. ತಮಿಳಿನ ಯುವ ನಿರ್ದೇಶಕರು ದಲಿತ ಸಮಸ್ಯೆಗಳ ಬಗ್ಗೆ ಮಾತಾಡುತ್ತಿದ್ದಾರೆ. ಅದು ಬಹಳ ಭರವಸೆಯನ್ನು ನೀಡುತ್ತದೆ. ಆದರೆ ಬಾಲಿವುಡ್‌ ಗ್ಲಾಮರ್ ಮತ್ತು ಮೇಲುಮೇಲಿನ ಸೌಂದರ್ಯದ ಮೇಲೆ ಗಮನ ಕೇಂದ್ರೀಕರಿಸಿದೆ. ಇದು ವೀಕ್ಷಕರೊಂದಿಗಿನ ಅದರ ಭಾವನಾತ್ಮಕ ಸಂಪರ್ಕವನ್ನು ದುರ್ಬಲಗೊಳಿಸಿದೆ. ದುಡ್ಡು, ಬಾಹ್ಯ ತೋರಿಕೆ ಮತ್ತು ಸ್ವಯಂ ಪ್ರಚಾರವೇ ಮುಖ್ಯವಾಗಿದೆ’ ಎಂದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟಿಯರು ಬೆಳ್ಳಿತೆರೆಯ ಮಿಂಚಲು ಸೀಕ್ರೆಟ್ ಹೇಳಿದ ರಶ್ಮಿಕಾ ಮಂದಣ್ಣ.. ನೇರ ಮಾತು ಹೊಸ ವಿವಾದ ಹುಟ್ಟುಹಾಕುತ್ತಾ?
'ಈ ಪ್ರಶಸ್ತಿ ಅವರಿಗೆ ಬಹಳ ವರ್ಷಗಳ ಹಿಂದೆಯೇ ಸಿಗಬೇಕಿತ್ತು'- ಪ್ರಶಸ್ತಿ ಬೆನ್ನಲ್ಲೇ ಹೇಮಾಮಾಲಿನಿ ರಿಯಾಕ್ಷನ್