
ಮುಂಬೈ(ಏ.30): ಬರೋಬ್ಬರಿ ಎರಡು ವರ್ಷ ಮಾರಕ ಕ್ಯಾನ್ಸರ್ ಜೊತೆ ಹೋರಾಟ ನಡೆಸಿದ್ದ ಬಾಲಿವುಡ್‌ನ ದಿಗ್ಗಜ ನಟ ರಿಷಿ ಕಪೂರ್ ಏ.30, 2020ರಂದು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೀಗಿರುವಾಗ ಅವರು ಆಸ್ಪತ್ರೆಯಲ್ಲಿದ್ದಾಗ ಚಿತ್ರೀಕರಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗಿದೆ.
ರಿಷಿ ಕಪೂರ್ ನೆನಪು ಮಾತ್ರ - ಚಿಂಟುವಿನ ಬಾಲ್ಯದ ಝಲಕ್
ಉಸಿರಾಟದ ಸಮಸ್ಯೆ ಉಂಟಾದ ಪರಿಣಾಮ ರಿಷಿ ಕಪೂರ್‌ರನ್ನು ಮುಂಬೈನ ಗಿರ್‌ಗಾಂವ್‌ನಲ್ಲಿರುವ ಸರ್ ಎಚ್. ಎನ್. ರಿಲೈಯನ್ಸ್ ಫೌಂಡೇಷನ್ ಆಸ್ಪತ್ರೆಗೆ ಬುಧವಾರ ಬೆಳಗ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಬೆಳಗ್ಗೆ 8.45 ಕ್ಕೆ ನಿಧನರಾಗಿದ್ದಾರೆ. ಈ ವೇಳೆ ಅವರ ಇಡೀ ಕುಟುಂಬ ಅವರ ಜೊತೆಗಿತ್ತು ಎನ್ನಲಾಗಿದೆ.
ಸದ್ಯ ರಿಷಿ ಕಪೂರ್ ನಿಧನ ವಾರ್ತೆ ಬೆನ್ನಲ್ಲೇ ಅವರ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಆಸ್ಪತ್ರೆ ಸಿಬ್ಬಂದಿ ಅವರಿಗಾಗಿ ಅವರೇ ನಟಿಸಿದ್ದ ಸಿನಿಮಾದ ಹಾಡು ಹಾಡುತ್ತಿರುವುದನ್ನು ನೋಡಬಹುದಾಗಿದೆ. ಆಸ್ಪತ್ರೆ ಹಾಸಿಗೆಯಲ್ಲಿದ್ದರೂ ರಿಷಿ ಕಪೂರ್ ಉತ್ಸಾಹ ಕಳೆದುಕೊಳ್ಳದೇ ಸಿಬ್ಬಂದಿ ಜೊತೆ ಸೇರಿ ಹಾಡು ಹಾಡಿದ್ದಲ್ಲದೇ,, ಆ ಸಿಬ್ಬಂದಿಯನ್ನು ಆಶೀರ್ವದಿಸಿದ್ದಾರೆ. ಇದು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿ ಕಪೂರ್ ಅವರನ್ನು ಆಗಾಗ ಅನಾರೋಗ್ಯ ಕಾಡುತ್ತಿತ್ತು. ಸಹಜವಾಗಿ ಆಸ್ಪತ್ರೆಗೆ ಭೇಟಿ ನೀಡುವುದು ಅವರ ವಾಡಿಕೆಯಾಗಿತ್ತು. ಈ ಹಾಡು ಸಾಯೋ ಮುನ್ನ ದಿನ ಚಿತ್ರೀಕರಿಸಿದ್ದು ಎನ್ನಲಾಗುತ್ತಿದ್ದರೂ, ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ನಟನ ಜೀವನೋತ್ಸಾಹ, ಸ್ನೇಹಪರತೆಯನ್ನು ಈ ವೀಡಿಯೋದಲ್ಲಿ ಕಾಣಬಹುದು.
ರಿಷಿಯನ್ನು ಹೋಲುವ ಸೈಫೀನಾ ಮಗ ತೈಮೂರ್
ಬಾಲಿವುಡ್ ಎವರ್‌ಗ್ರೀನ್ ಹಾರ್ಟ್‌ಥ್ರೋಬ್ ರಿಷಿ ಕಪೂರ್ ನಟನಾಗಬೇಕೆಂದೇ ರಾಜ್ ಕಪೂರ್ ಕುಟುಂಬದಲ್ಲಿ ಜನಿಸಿದ ಕುಡಿ. ಅವರು ನಟಿಸಿದ ಪ್ರತಿಯೊಂದು ಚಿತ್ರವೂ ಭಾರತೀಯ ಚಿತ್ರ ರಸಿಕರ ಮನದಲ್ಲಿ ಅಚ್ಚಳಿಯದೇ ಉಳಿಯುವಂಥದ್ದು. ಮಾತು ಬಾರದ ಆ ಮೂಕ ಹುಡುಗಿ ಕುಣಿಯುವಾಗ ಈ ಕನಸುಗಣ್ಣಿನ ಹುಡುಗ ಢಪಲಿ ಬಡಿಯುತ್ತಾ ಜೊತೆಯಾಗಿದ್ದ. ಸರಗಂ ಚಿತ್ರದ ಹಾಡನ್ನು ಯಾರೂ ಮರೆಯಲು ಸಾಧ್ಯವೇ ಇಲ್ಲ.
ಬಾಬಿ ಚಿತ್ರದಲ್ಲಿ ಹಮ್ ತುಮ್ ಏಕ ಕಮರೇ ಮೇ ಬಂದ್ ಹೋ..ಮೂಲಕ ಸಂಚಲನ ಮೂಡಿಸಿದ್ದ ಚಿಂಟು ಭಾರತ ಕಂಡ the eternal lover boy ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಾಂದಿನಿ ಪಾತ್ರದ ಆ ಲವರ್ ಯಾರಿಗೆ ಬೇಡ ಹೇಳಿ? ಒಟ್ಟಿನಲ್ಲಿ ಭಾರತೀಯ ಕಲಾವಿದರಿಗೆ ಸದಾ ನೆನಪಲ್ಲಿ ಉಳಿಯುವ ನಟ ರಿಷಿಯ ನಗು ಮುಖ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.
ಇಂಥ ಮಹಾನ್ ನಟನಿಗೆ ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆಂಬ ಆಸೆ ಇತ್ತಂತೆ. ಮೊದಲಿಂದಲೂ ಏನಾದರೂ ಆಗಿ ತಪ್ಪಿ ಹೋಗುತ್ತಿತ್ತಂತೆ. ಕಡೆವರೆಗೂ ಕಾಶಿಗೆ ಭೇಟಿ ನೀಡಲೇ ಇಲ್ಲ ರಿಷಿ. ಇಂಥ ದೊಡ್ಡ ಕಲಾವಿದನ ಸಣ್ಣ ಆಸೆ ನೆರವೇರಿಸಲು ಮಗ ರಣ್ಬೀರ್ ಕಳೆದ ವರ್ಷ ಅಲ್ಲಿಗೆ ತೆರಳಿದಾಗ, ವೀಡಿಯೋ ಕಾಲ್ ಮಾಡಿ ಕಾಶಿ ಹಾಗೂ ಅಲ್ಲಿನ ಗಂಗಾರತಿ ದರ್ಶನ ಮಾಡಿಸಿದ್ದರಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.