ಅತ್ತೆ ಅತ್ತೆ ಎನ್ನುತ್ತಾ ಬಿಗ್​ಬಾಸ್​ ನಮ್ರತಾ ಗೌಡ ಅಮ್ಮನನ್ನು ಸುಸ್ತು ಮಾಡಿದ 'ಒಳ್ಳೆ ಹುಡುಗ' ಪ್ರಥಮ್​!

Published : Jul 31, 2025, 12:58 PM ISTUpdated : Jul 31, 2025, 01:17 PM IST
Pratham and Namruta Gowda

ಸಾರಾಂಶ

ನಮ್ರತಾ ಗೌಡ ಅವರ ಅಮ್ಮನನ್ನು ಅತ್ತೆ ಅತ್ತೆ ಎನ್ನುತ್ತಲೇ ಸುಸ್ತು ಮಾಡಿದ್ದಾರೆ ಬಿಗ್​ಬಾಸ್​ ಪ್ರಥಮ್​. ಅದರ ವಿಡಿಯೋ ವೈರಲ್​ ಆಗಿದೆ ನೋಡಿ... 

ನಟ ದರ್ಶನ್ ಅಂಡ್ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಕೇಸಿಗೆ ಸಂಬಂಧಿಸಿದಂತೆ ಸದ್ಯ ನಟ ಒಳ್ಳೆ ಹುಡುಗ ಖ್ಯಾತಿಯ ಪ್ರಥಮ್​ ಸಕತ್​ ಸದ್ದು ಮಾಡುತ್ತಿದ್ದಾರೆ. ಪ್ರಥಮ್ ಅವರು ದರ್ಶನ್ ಮತ್ತು ಅವರ ಅಭಿಮಾನಿಗಳ ಬಗ್ಗ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ದೇವಸ್ಥಾನಕ್ಕೆ ತೆರಳಿದ್ದ ನಟ ಪ್ರಥಮ್‌ನನ್ನು ಎಳೆದೊಯ್ದು, ಇನ್ನೊಮ್ಮೆ ಡಿ ಬಾಸ್ ಬಗ್ಗೆ ಮಾತನಾಡದಂತೆ ಬೇಕರಿ ರಘು ಎನ್ನುವಾತ ಡ್ರ್ಯಾಗರ್ ಹಿಡಿದು ಕೊಲೆ ಬೆದರಿಕೆಯನ್ನು ಹಾಕಿರುವುದಾಗಿ ವರದಿಯಾಗಿದೆ.

ಎರಡು ದಿನಗಳ ಹಿಂದೆ ನಟ ದರ್ಶನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ದೊಡ್ಡಬಳ್ಳಾಪುರ ಬಳಿಯ ರಾಮಯ್ಯನಪಾಳ್ಯ ಬಳಿಯ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ರಾಮಯ್ಯನ ಪಾಳ್ಯದ ದೇವಸ್ಥಾನದ ಅನತಿ ದೂರದಲ್ಲಿ ದರ್ಶನ್ ಸಹಚರ ಬೇಕರಿ ರಘು ಬರ್ತಡೇ ಕಾರ್ಯಕ್ರಮ ಆಯೋಜನೆ ಮಾಡಿದ್ದನು. ಅಲ್ಲಿ ಗುಂಡು-ತುಂಡು ಎಲ್ಲವನ್ನೂ ಆಯೋಜನೆ ಮಾಡಲಾಗಿತ್ತು. ರಕ್ಷಕ್ ಬುಲೆಟ್ ಈ ಪಾರ್ಟಿಗೆ ಹೋಗಿದ್ದರು. ಈ ವೇಳೆ ನಟ ಪ್ರಥಮ್ ಕೂಡ ದೇವಸ್ಥಾನಕ್ಕೆ ಬಂದಿದ್ದ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ದರ್ಶನ್​ ಫ್ಯಾನ್ಸ್​ ನಟ ಪ್ರಥಮ್‌ಗೆ ಡ್ರ್ಯಾಗರ್ ಇಟ್ಟು ಚುಚ್ಚೋದಾಗಿ ಬೆದರಿಕೆ ಹಾಕಿದ್ದಾರೆ. ಇನ್ನೊಮ್ಮೆ ಬಾಸ್ ಬಗ್ಗೆ ಮಾತಾಡಿದರೆ ಸರಿ ಇರಲ್ಲ ಎಂದು ವಾರ್ನ್ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ.

ಆದರೆ ಇದರ ನಡುವೆಯೇ, ನಟ ಪ್ರಥಮ್​ ಮತ್ತು ನಮ್ರತಾ ಗೌಡ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗ್ತಿದೆ. ಇದನ್ನು ನ್ಯೂಸ್ ಬೀಟ್​ ಕನ್ನಡ ಶೇರ್​ ಮಾಡಿದೆ. ಇದರಲ್ಲಿ ನಮ್ರತಾ ಗೌಡ ಅವರು ಅಮ್ಮನನ್ನು ಕರೆದುಕೊಂಡು ಶಾಪಿಂಗ್​ಗೆ ಹೋಗಿದ್ದಾರೆ. ಅಲ್ಲಿ ಪ್ರಥಮ್​ ಬಂದಿದ್ದಾರೆ. ನಮ್ರತಾ ಅವರ ತಾಯಿಯನ್ನು ನೋಡಿದ ಪ್ರಥಮ್​ ಇವರು ನಿಮ್ಮ ಅಮ್ಮ ಅಲ್ವಾ ಎಂದು ಕೇಳಿದಾಗ, ನಮ್ರತಾ ಹೌದು ಎಂದಿದ್ದಾರೆ. ಆಗ ಕೂಡಲೇ ಪ್ರಥಮ್​ ಅತ್ತೆ ಅತ್ತೆ ಎನ್ನುತ್ತಾ ಅವರ ಬಳಿ ಹೋಗಿ ಸುಸ್ತು ಮಾಡಿದ್ದಾರೆ. ಅತ್ತೆ ಅತ್ತೆ ಎಂದಾಗ ನಮ್ರತಾ ಅವರ ಅಮ್ಮನೂ ನಾಚಿಕೊಂಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದು ಬಹುಶಃ ಅವರ ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾದ ಸಮಯದಲ್ಲಿ ನಡೆದ ಘಟನೆ ಎನ್ನಲಾಗಿದೆ. ಈ ಚಿತ್ರಕ್ಕೆ ಆಗ ನಮ್ರತಾ ಗೌಡ ಅವರೂ ವಿಷ್​ ಮಾಡಿದ್ದರು. ಆ ಸಮಯದಲ್ಲಿ ನಮ್ರತಾ ಅವರು, ‘ನಾನು ಸಾಮಾನ್ಯವಾಗಿ ಈವೆಂಟ್​ಗಳಿಗೆ ಹೋಗಲ್ಲ. ನಾನು ಈ ಕಾರ್ಯಕ್ರಮಕ್ಕೆ ಬರೋಕೆ ಕಾರಣ ಪ್ರಥಮ್. ನಾನು ಬಿಗ್ ಬಾಸ್ ಮನೆ ಒಳಗೆ ಇದ್ದಾಗ ಹೊರಗೆ ಸಪೋರ್ಟ್ ಮಾಡಿದವರು ಕಡಿಮೆ. ಈ ರೀತಿ ಬೆಂಬಲಿಸಿದವರಲ್ಲಿ ಪ್ರಥಮ್ ಕೂಡ ಒಬ್ಬರು ಎಂದಿದ್ದರು.

ಹೀಗೆ ಇಬ್ಬರಲ್ಲಿಯೂ ಫ್ರೆಂಡ್​ಷಿಪ್​ ಇರೋ ಕಾರಣ ಪ್ರಥಮ್​ ತಮಾಷೆಯಿಂದ ಹೀಗೆ ಮಾಡಿದ್ದಾರೆ. ಅಷ್ಟಕ್ಕೂ ಕಳೆದ ವರ್ಷ ಪ್ರಥಮ್​ ಅವರ ಮದುವೆಯಾಗಿದೆ. ಎಂಗೇಜ್​ಮೆಂಟ್​ ಮತ್ತು ಮದುವೆ ಎಲ್ಲವನ್ನೂ ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಮಂಡ್ಯದ ಭಾನುಶ್ರೀ ಎನ್ನುವವರ ಜೊತೆ ಮದುವೆ ನಡೆದಿದೆ. ನಿಶ್ಚಿತಾರ್ಥಕ್ಕೆ ಕೆಲವರನ್ನಾದರೂ ಕರೆದು ಊಟ ಹಾಕಿಸಬೇಕಿತ್ತು ಅಂತ ಕೆಲವರು ಪ್ರಥಮ್​ ಅವರಿಗೆ ಸಜೆಷನ್​ ಕೊಟ್ಟಿದ್ರು. ಆಗ ಅವರಿಗೆ ಪ್ರಥಮ್​, ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ ಹಾಕಿಸ್ತೀವಿ. ಚಳಿಗಾಲದ ಆಸರೆಗಾಗಿ ಒಂದು ಶಾಲು ಕೊಡ್ತೀವಿ ಎಂದಿದ್ದರು. ಅದೇ ರೀತಿ ಮದುವೆಯನ್ನೂ ಸಿಂಪಲ್​ ಮಾಡಿಕೊಂಡಿದ್ರು. ಮದುವೆಯ ಸಮಯದಲ್ಲಿಯೇ ಫಸ್ಟ್​ ನೈಟ್​ ವಿಥ್​ ದೆವ್ವದ ಫೋಟೋ ಕೂಡ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ, ರಿಯಲ್​ ಪತ್ನಿ ಯಾರು, ರೀಲ್​ ಪತ್ನಿ ಯಾರು ಎಂದು ಜನರಿಗೆ ಗೊತ್ತಾಗದ ಹಾಗೆ ಕನ್​ಫ್ಯೂಸ್​ ಮಾಡಿದ್ರು. ಸಿನಿಮಾದಲ್ಲಿನ ನಾಯಕಿಯೇ ರಿಯಲ್​ ಪತ್ನಿ ಎಂದುಕೊಂಡು ಎಷ್ಟೋ ಮಂದಿ ಅವರಿಗೆ ವಿಷ್​ ಮಾಡಿದ್ದೂ ನಡೆದಿತ್ತು! ಏಕೆಂದ್ರೆ ಅವರು ಅದರಲ್ಲಿ ಫಸ್ಟ್​ ನೈಟ್​ ರೀತಿಯ ಫೋಟೋಗಳನ್ನು ನಾಯಕಿ ಜೊತೆ ಶೇರ್​ ಮಾಡಿಕೊಂಡಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌