ಎಲ್ಲರಿಗೂ ಒಳಿತಾಗಲಿ. ರನ್ನರ್ ಆಫ್ ಆಗಿರೋದು ಖುಷಿ ತಂದಿದೆ. ನನಗೆ ಎರಡೂವರೆ ಕೋಟಿಯಷ್ಟು ವೋಟ್ ಬಂದಿದೆ. ಗೆದ್ದಿದ್ದೇನೆ ಅನಿಸುತ್ತಿದೆ. ನನಗೆ ವಿನ್ನರ್ ಆಗಬೇಕು ಎಂಬ ಆಸೆ ಇತ್ತು ಆದ್ರೂ ರನ್ನರ್ ಆಫ್ ಆಗಿರೋದು ಕೂಡ ಬಹಳ ಖುಷಿ ಕೊಟ್ಟಿದೆ. ಬಂದಿರೋ ಹಣವನ್ನು ಬಡವರಿಗೆ ಕೊಡ್ತಿನಿ. ಮಕ್ಕಳ ಆಪರೇಷನ್ ಗೆ ಕೊಡ್ತಿನಿ ಎಂದ ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್
ಬಿಗ್‌ಬಾಸ್‌ಕನ್ನಡ 10ನೇ ಸೀಸನ್‌ನಲ್ಲಿ ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ದೊಡ್ಡಮನೆಗೆ ಪ್ರವೇಶ ಪಡೆದಾಗಿನಿಂದ ಹೆಜ್ಜೆ ಹೆಜ್ಜೆಗೂ ಅವಮಾನ, ಟ್ರೋಲ್‌ಗೆ ಒಳಗಾಗಿದ್ದ ಪ್ರತಾಪ್. ಹೆಚ್ಚು ಟ್ರೋಲ್, ಟೀಕೆಗಳೇ ಪ್ರತಾಪ್ ಬಗ್ಗೆ ಜನರು ಅಯ್ಯೋ ಪಾಪ ಎಷ್ಟೂಂತ ಗೋಳಾಡಿಸ್ತಿರಾ ಅಂತಾ ಬೆನ್ನಿಗೆ ನಿಂತಿದ್ದು ಸುಳ್ಳಲ್ಲ. ಇದೀಗ ಪ್ರತಾಪ್ ಎಲ್ಲ ಅವಮಾನ, ಟ್ರೋಲ್, ಅಡೆತಡೆಗಳನ್ನ ಘಟಾನುಘಟಿಗಳ ನಡುವೆ ರನ್ನರ್ ಆಫ್ ಆಗಿ ಹೊರಹೊಮ್ಮಿರೋದು ಸಣ್ಣ ಮಾತೇನಲ್ಲ.
ಬಿಗ್‌ಬಾಸ್ ರನ್ನರ್ ಆಫ್ ಆಗಿರೋ ಬಗ್ಗೆ ಪ್ರತಾಪ್ ಮಾತನಾಡಿದ್ದಾರೆ. ನನ್ನ ಕನಸು ಮನಸಿನಲ್ಲೂ ರನ್ನರ್ ಆಫ್ ಆಗತ್ತೇನೆಂದು ಎಣಿಸಿರಲಿಲ್ಲ. ಕಿಚ್ಚ ಸುದೀಪ್ ನನ್ನ ಮತ್ತು ಕಾರ್ತಿಕ್ ಹಿಡಿದು ವಿನ್ನರ್ ಯಾರೆಂದು ಘೋಷಿಸುವಾಗಿನ ಕ್ಷಣ ಇದೆಯಲ್ಲ ಅದನ್ನು, ಆಗಿನ ಟೆನ್ಷನ್ ಮಾತುಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಇಡೀ ಕರ್ನಾಟಕವೇ ಉಸಿರು ಬಿಗಿಹಿಡಿದು ಕಾಯುತ್ತಿದ್ದ ಗಳಿಗೆ ಅದು. ಸುದೀಪ್ ಅವರು ಕಾರ್ತಿಕ್ ಅವರ ಕೈಯನ್ನು ಎತ್ತಿ ಹಿಡಿದಾಗ ನಾನು ರನ್ನರ್ ಆಫ್ ಎಂಬುದು ಖಚಿತವಾಯ್ತು. ವಿನ್ನರ್ ಆಗಬೇಕೆಂಬ ಆಸೆಯಿತ್ತು. ಆದರೆ ರನ್ನರ್ ಆಫ್ ಆಗಿದ್ದಕ್ಕೂ ಖುಷಿ ಇದೆ.
ಮತ್ತೊಂದು ಸಂಕಷ್ಟದಲ್ಲಿ ಡ್ರೋನ್ ಪ್ರತಾಪ್; ಸುಳ್ಳು ಮಾಹಿತಿ ನೀಡಿ ರೈತರಿಗೆ ಲಕ್ಷಾಂತರ ವಂಚನೆ ದೂರು ದಾಖಲು!
ಡ್ರೋನ್ ಪ್ರತಾಪ್ ಗೆ ಹತ್ತು ಲಕ್ಷ ರೂ ಬಹುಮಾನ:
ಡ್ರೋನ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿರೋದ್ರಿಂದ ಅವರಿಗೆ ಹತ್ತು ಲಕ್ಷ ರೂಪಾಯಿಗಳ ಬಹುಮಾನ ಪಡೆಯಲಿದ್ದಾರೆ.
ಬಂದಿರೋ ಹಣ ಬಡವರಿಗೆ ಕೊಡ್ತೀನಿ:
ಎಲ್ಲರಿಗೂ ಒಳಿತಾಗಲಿ. ರನ್ನರ್ ಆಫ್ ಆಗಿರೋದು ಖುಷಿ ತಂದಿದೆ. ನನಗೆ ಎರಡೂವರೆ ಕೋಟಿಯಷ್ಟು ವೋಟ್ ಬಂದಿದೆ. ಗೆದ್ದಿದ್ದೇನೆ ಅನಿಸುತ್ತಿದೆ. ನನಗೆ ವಿನ್ನರ್ ಆಗಬೇಕು ಎಂಬ ಆಸೆ ಇತ್ತು ಆದ್ರೂ ರನ್ನರ್ ಆಫ್ ಆಗಿರೋದು ಕೂಡ ಬಹಳ ಖುಷಿ ಕೊಟ್ಟಿದೆ. ಬಂದಿರೋ ಹಣವನ್ನು ಬಡವರಿಗೆ ಕೊಡ್ತಿನಿ. ಮಕ್ಕಳ ಆಪರೇಷನ್ ಗೆ ಕೊಡ್ತಿನಿ. ಫುಡ್ ಡೆಲಿವರಿ ಮಾಡೋರು ಯಾರು ಕಷ್ಟದಲ್ಲಿದ್ದಾರೆ ಅಂಥವರಿಗೆ ಬೈಕ್ ಕೊಡಿಸ್ತಿನಿ ಅಂತಾ ಹೇಳಿರುವ ಪ್ರತಾಪ್. ನಾನು ಬಿಗ್ ಬಾಸ್ ರನ್ನರ್ ಆಫ್ ಜೊತೆಗೆ ನಿಮ್ಮೆಲ್ಲರ ಮನಸನ್ನು ಗೆದ್ದಿದ್ದೇನೆ ಎಂದು ರನ್ನರ್ ಆಫ್ ಡ್ರೋಣ್ ಖುಷಿ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ ಸೀಸನ್ 10 ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ: ಹಲವು ಸ್ವರಗಳ ಏರಿಳಿತ ಸೇರಿ ಆದ ಬ್ಯಾಂಗಲ್ ಕ್ವೀನ್!