
ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ. ಇದರ ಜೊತೆ ನಂದಗೋಕುಲ ಕಥೆಯನ್ನು ಸೇರಿಸಲಾಗಿದ್ದು, ಇವೆರಡೂ ಸೀರಿಯಲ್ಗಳ ಮಹಾಸಂಗಮ ಸದ್ಯ ನಡೆಯುತ್ತಿದೆ. ವಕೀಲಿಕೆ ಮೂಲಕ ಅನ್ಯಾಯದ ವಿರುದ್ಧ ಹೋರಾಡುವ ಛಲಗಾತಿ ಭಾರ್ಗವಿಯ ಕಥೆಯಿರುವ ಭಾರ್ಗವಿ ಎಲ್ಎಲ್ಬಿ ಸೀರಿಯಲ್ ಕುತೂಹಲ ಕೆರಳಿಸುತ್ತಿದ್ದರೆ, ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕತೆ’ಯನ್ನು ಹೇಳುತ್ತದೆ ನಂದ ಗೋಕುಲ. ಇವೆರಡು ಸೀರಿಯಲ್ಗಳ ಮಹಾಸಂಗಮ ನಡೆಯುತ್ತಿರುವ ನಡುವೆಯೇ ಭಾರ್ಗವಿ ಪಾತ್ರಧಾರಿ ರಾಧಾ ಭಗವತಿ ಅವರು ನೇರಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಸಂವಾದ ನಡೆಸಿದ್ದಾರೆ.
ಅಷ್ಟಕ್ಕೂ ಭಾರ್ಗವಿ ಪ್ರತಿಯೊಬ್ಬ ಹೆಣ್ಣಿಗೆ ಮಾದರಿ. ನ್ಯಾಯಕ್ಕಾಗಿ ಬಲಿಷ್ಠ ವಕೀಲ ಜಯಪ್ರಕಾಶ್ ಪಾಟೀಲ್ನನ್ನೇ ಮಣಿಸುತ್ತಿದ್ದಾಳೆ ಈಕೆ. ಸಾಮಾನ್ಯ ಹೆಣ್ಣು ಭಾರ್ಗವಿ ಮತ್ತು ಬಲಿಷ್ಠ ವಕೀಲ ನಡುವಿನ ಸಮರದ ಈ ಕಥೆ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಈಕೆಯ ತಂದೆ ಕೂಡ ವಕೀಲನೇ ಆಗಿದ್ದ. ಆದರೆ ಕೋರ್ಟಿನಲ್ಲಿ ಆತನನ್ನು ಇದೇ ಪಾಟೀಲ ಹೀನಾಯವಾಗಿ ಅವಮಾನಿಸಿ ವಕೀಲಿಕೆಯನ್ನೇ ತ್ಯಜಿಸುವಂತೆ ಮಾಡಿದ್ದ. ವಕೀಲಿಕೆ ಎಂದರೆ ಅಧಿಕಾರ, ಪ್ರಭಾವ ಮತ್ತು ನಿಯಂತ್ರಕ ಶಕ್ತಿ ಎಂದುಕೊಂಡಿರೋ ಪಾಟೀಲನಿಗೆ ಸವಾಲಾಗಿದ್ದಾಳೆ ನ್ಯಾಯದ ಹಾದಿಯಲ್ಲಿ ನಡೆಯುತ್ತಿರುವ ಭಾರ್ಗವಿ. ರೇ*ಪ್ ಸಂತ್ರಸ್ತೆಯೊಬ್ಬಳಿಗೆ ನ್ಯಾಯ ಕೊಡಿಸಲು ಹೋಗಿ ಪಾಟೀಲ್ನಿಂದ ಇನ್ನಿಲ್ಲದಂತೆ ನೋವು ಅನುಭವಿಸುತ್ತಿದ್ದರೂ ಮುನ್ನುಗ್ಗುತ್ತಿರುವ ಛಲಗಾತಿ ಭಾರ್ಗವಿ.
ಇದೀಗ ಲೈವ್ನಲ್ಲಿ ಇದರ ಬಗ್ಗೆ ಮಾತನಾಡಿರುವ ನಟಿ ರಾಧಾ ಭಗವತಿ ಮುಂದೆ ಸೀರಿಯಲ್ನಲ್ಲಿ ಸಕತ್ ಟ್ವಿಸ್ಟ್ ಇದೆ ಎಂದಿದ್ದಾರೆ. ತನ್ನ ಅಪ್ಪನ ಮೇಲೆ ಕೈ ಮಾಡಿರುವ ವಿಕ್ಕಿಗೆ ಹೇಗೆ ತಿರುಗೇಟು ಕೊಡುತ್ತೇನೆ ಎನ್ನುವುದನ್ನು ಎಲ್ಲರೂ ನೋಡಬೇಕಿದೆ ಎಂದಿದ್ದಾರೆ. ಆತನ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎನ್ನುವ ಮೂಲಕ ಮುಂದಿನ ಕಥೆಯನ್ನು ಹೇಳಿದ್ದಾರೆ. ಅದೇ ವೇಳೆ ವಿಲನ್ ಆಗಿರೋ ಈಕೆಯ ಅಕ್ಕ ಬೃಂದಾಳಿಗೆ ಕಪಾಳಮೋಕ್ಷ ಮಾಡಿದಾಗ, ವೀಕ್ಷಕರು ಅದೆಷ್ಟು ಸಂತೋಷ ಪಟ್ಟರು ಎನ್ನುವ ಬಗ್ಗೆ ನಟಿ ಮಾತನಾಡಿ, ಇಷ್ಟು ಸಪೋರ್ಟ್ ಮಾಡ್ತಿರೋದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.