Bhagyalakshmi Shresta: ಕ್ವಾಟ್ಲೆ ಕಿಚನ್​ಗಾಗಿ ಸೀರಿಯಲ್​ ಬಿಟ್ರಾ ನಟಿ? ಏಕಾಏಕಿ ನೇರಪ್ರಸಾರದಲ್ಲಿ ಬಂದಿದ್ಯಾಕೆ?

Published : Jul 13, 2025, 01:17 PM IST
Kavya Gowda

ಸಾರಾಂಶ

ಭಾಗ್ಯಲಕ್ಷ್ಮಿಯಲ್ಲಿ ಶ್ರೇಷ್ಠಾಳ ರೋಲ್​ ಮೂಲಕ ಮನೆಮಾತಾಗಿರೋ ನಟಿ ಕಾವ್ಯಾ ಗೌಡ ಸೀರಿಯಲ್​ ಬಿಟ್ರಾ? ನೇರಪ್ರಸಾರದಲ್ಲಿ ಬಂದ ನಟಿ ಹೇಳಿದ್ದೇನು? 

ಸದ್ಯ ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಪೂಜಾಳ ಮದುವೆಯ ಗಡಿಬಿಡಿ ನಡೆಯುತ್ತಿದೆ. ಪೂಜಾ ಮತ್ತು ಕಿಶನ್​ ಮದುವೆಯ ಗೋಜಲು ಇದು. ಇದನ್ನು ಸಂಭ್ರಮ ಎನ್ನಬೇಕೋ, ಆತಂಕ ಎನ್ನಬೇಕೋ ಗೊತ್ತಿಲ್ಲ. ಏಕೆಂದ್ರೆ ಇಲ್ಲಿ ಇವರಿಬ್ಬರ ಮದುವೆಯನ್ನು ತಪ್ಪಿಸಲು ಒಬ್ಬರಲ್ಲ, ಇಬ್ಬರಲ್ಲ ನಾಲ್ಕು ಮಂದಿ ಕಿತಾಪತಿ ಮಾಡುತ್ತಿದ್ದಾರೆ. ಕಿಶನ್​ ಅಣ್ಣ ಆದಿ, ಅತ್ತೆ, ಕನ್ನಿಕಾ ಸಾಲದು ಎನ್ನುವುದಕ್ಕೆ ಈಗ ತಾಂಡವ್​ ಪ್ರವೇಶ ಕೂಡ ಆಗಿದೆ! ಏನಾದರೂ ಕಿತಾಪತಿ ಮಾಡಿ ಮದುವೆ ನಿಲ್ಲಿಸಲು ಹರಸಾಹಸ ಮಾಡುತ್ತಲೇ ಇದ್ದಾರೆ. ಭಾಗ್ಯಳ ಮನೆಯವರನ್ನು ಪರೀಕ್ಷಿಸುವ ಸಲುವಾಗಿ ಕಿಶನ್​ಗೆ ಆಸ್ತಿಯಲ್ಲಿ ಬಿಡಿಗಾಸೂ ಕೊಡುವುದಿಲ್ಲ ಎಂದು ತಾತ ಹೇಳಿದ್ದ. ಆದರೆ ತಮಗೆ ಬೇಕಿರುವುದು ಆಸ್ತಿಯಲ್ಲ, ಕಿಶನ್​ ಮತ್ತು ಪೂಜಾಳ ಪ್ರೀತಿ ಎನ್ನುವ ಮೂಲಕ ಮದುವೆ ನಿಲ್ಲಿಸುವ ಪ್ಲ್ಯಾನ್​ ಉಲ್ಟಾ ಮಾಡಿ ಮದುವೆ ನಡೆಯುತ್ತಿದೆ. ಇದೇ ವೇಳೆ ಒಂದು ವೇಳೆ ಮದುವೆಯಾದರೂ ಪೂಜಾಳಿಗೆ ಹಿಂಸೆ ಕೊಡುವುದಾಗಿ ಕನ್ನಿಕಾ ಮತ್ತು ಅತ್ತೆ ಮಾತನಾಡುತ್ತಿರುವುದನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಮುಂದೇನು ಎನ್ನುವ ಆತಂಕ ಅವಳದ್ದು.

ಅದರ ನಡುವೆಯೇ, ಶ್ರೇಷ್ಠಾ ಮಾತ್ರ ಸೀರಿಯಲ್​ನಲ್ಲಿ ಸದ್ಯ ನಾಪತ್ತೆಯಾಗಿದ್ದಾಳೆ. ಮದುವೆಯನ್ನು ನಿಲ್ಲಿಸಲು ತಾಂಡವ್​ ಬಂದರೂ ಶ್ರೇಷ್ಠಾ ಕಾಣಿಸುತ್ತಿಲ್ಲ. ಇದಕ್ಕೆ ಕಾರಣ, ಶ್ರೇಷ್ಠಾ ಸದ್ಯ ಕ್ವಾಟ್ಲೆ ಕಿಚನ್​ ರಿಯಾಲಿಟಿ ಷೋನಲ್ಲಿ ಬಿಜಿಯಾಗಿದ್ದಾರೆ. ಇದೀಗ ಏಕಾಏಕಿ ನೇರಪ್ರಸಾರದಲ್ಲಿ ಶ್ರೇಷ್ಠಾ ಉರ್ಫ್​ ಕಾವ್ಯಾ ಗೌಡ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಒಮ್ಮೆ ದಂಗಾಗಿದ್ದಾರೆ. ಕಮೆಂಟ್​ ನೋಡಿದರೆ ತಿಳಿಯುತ್ತದೆ ಫ್ಯಾನ್ಸ್​ ಶಾಕ್​ ಆಗಿರೋ ರೀತಿ. ನಟಿ ಭಾಗ್ಯಲಕ್ಷ್ಮಿ ಸೀರಿಯಲ್​ ಬಿಟ್ಟು ಕಿಚನ್​ ಷೋಗೆ ಬಂದಿರಲು ನೇರಪ್ರಸಾರದಲ್ಲಿ ಬಂದಿರಬೇಕು ಎಂದೇ ಹಲವರು ಅಂದುಕೊಂಡಿದ್ದಾರೆ. ಆದರೆ ಕಾವ್ಯಾ ಅವರು ನೇರಪ್ರಸಾರದಲ್ಲಿ ಬರಲು ಕಾರಣ, ಕ್ವಾಟ್ಲೆ ಕಿಚನ್​ ಕುರಿತು ಮಾತನಾಡಿದರು.

ಸೀರಿಯಲ್​ ಮತ್ತು ರಿಯಾಲಿಟಿ ಷೋ ಪ್ರಮೋಷನ್​ಗಾಗಿ ಹೀಗೆ ಆಗಾಗ್ಗೆ ನಟ-ನಟಿಯರು ನೇರಪ್ರಸಾರದಲ್ಲಿ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅದೇ ರೀತಿ ಕಾವ್ಯಾ ಗೌಡ ಕೂಡ ಬಂದಿದ್ದು, ಈ ರಿಯಾಲಿಟಿ ಷೋ ಬಗ್ಗೆ ಮಾತನಾಡಿದ್ದಾರೆ. ಹೇಗೆ ಕ್ವಾಟ್ಲೆಗಳು ತಮಗೆ ತೊಂದರೆ ಕೊಡುತ್ತಾರೆ ಎಂದು ಹೇಳಿದ್ದಾರೆ. ರೈಸ್​ ಬಾತ್​ ಎಂದು ತಮ್ಮನ್ನು ತಮಾಷೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಚಿಕನ್​ ಅಡುಗೆಗಳನ್ನೂ ಮಾಡುವುದಾಗಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ತಾಂಡವ್​ ಎಲ್ಲಿ ಎಂದೂ ಕೇಳಿದ್ದಾರೆ. ಅದಕ್ಕೆ ನಟಿ, ಮನೆಯಲ್ಲಿ ಇದ್ದಾರೆ ಎಂದು ಉತ್ತರಿಸಿದ್ದಾರೆ.

ಇನ್ನು ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ, ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ. 3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ. ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!