ದರ್ಶನ್ ರಾಬರ್ಟ್‌ಗೆ ಭದ್ರಾವತಿ ಚೆಲುವೆ.. ಎಲ್ಲರಿಗೂ ಗೊತ್ತಿರುವವಳೆ!

By Web Desk  |  First Published Sep 4, 2019, 11:28 PM IST

ರಾಬರ್ಟ್ ಸಿನಿಮಾದಲ್ಲಿ ಭದ್ರಾವತಿಯ ಚೆಲುವೆ/ ಶಿವಮೊಗ್ಗ ಭದ್ರಾವತಿಯ ಆಶಾ ಭಟ್ ಗೆ ಸುಸ್ವಾಗತ/ ದರ್ಶನ್ ಸಿನಿಮಾದಲ್ಲಿ 2014ರ ಮಿಸ್ ಸೂಪರ್ ನ್ಯಾಶನಲ್/


ಬೆಂಗಳೂರು[ಸೆ. 04]  ರಾಬರ್ಟ್ ಚಿತ್ರದ ನಾಯಕಿಯಾರು ಎಂದು ಈ ಮೊದಲೇ ತಿಳಿಸುತ್ತೇವೆ ಎಂದು ತರುಣ್ ಸುಧೀರ್  ಹೇಳಿದ್ದರು. ನಿರ್ದೇಶಕ ತರುಣ್ ಸುಧೀರ್ ಚಿತ್ರದಲ್ಲಿ ಭದ್ರಾವತಿಯ ಹುಡುಗಿ ಆಶಾ ಭಟ್ ಕಾಣಿಸಿಕೊಳ್ಳಲಿದ್ದು ಸ್ಯಾಂಡಲ್ ವುಡ್ ಗೆ ಸುಸ್ವಾಗತ ಎಂದು ಬರಮಾಡಿಕೊಂಡಿದ್ದಾರೆ.

2014ರ ಮಿಸ್ ಸೂಪರ್ ನ್ಯಾಶನಲ್ ಪಟ್ಟ ಮುಡಿಗೇರಿಸಿಕೊಂಡ ಆಶಾ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ.  ಹಿಂದಿಯ 'ಜಂಗ್ಲಿ' ಯಲ್ಲಿಯೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸಾಮಾಜಿಕ ಕೆಲಸ ಮಾಡುವುದರಲ್ಲಿಯೂ ಆಶಾ ಭಟ್ ಮುಂಚೂಣಿಯಲ್ಲಿದ್ದಾರೆ.

Tap to resize

Latest Videos

'ಪರಿಮಳ ಲಾಡ್ಜ್'ನಲ್ಲಿ ಸಿಕ್ತು ದರ್ಶನ್ ತಂದೆಯ ಫೋಟೋ!

ಬೈಕ್ ಏರಿ ಕುಳಿತಿರುವ ರಾಬರ್ಟ್ ಸಿನಿಮಾದ ಮೊದಲ ಲುಕ್ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿತ್ತು. ಇದೀಗ ಆಶಾ ಭಟ್ ಸಹ ಚಿತ್ರಕ್ಕೆ ಜತೆಯಾಗುತ್ತಿದ್ದಾರೆ.  ಮಾಡೆಲಿಂಗ್ ಲೋಕದಲ್ಲಿ ಹೆಸರು ಮಾಡಿದ್ದ ಚೆಲುವೆ ಇದೀಗ ಕನ್ನಡಕ್ಕೆ ಅಧಿಕೃತ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.

 

Finally here it is...the big surprise..Welcome our Kannadathi, Miss SupraNational to the Family Of *ing . Produced under Banner 😊 pic.twitter.com/Z1aSSUWf0r

— Tharun Sudhir (@TharunSudhir)
click me!