ಬಳಗಂ ಸಿನಿಮಾದ ಜನಪ್ರಿಯ ಗೀತೆಯ ಗಾಯಕ, ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ನಿಧನರಾಗಿದ್ದಾರೆ. 67 ವರ್ಷದ ಮೊಗಿಲಯ್ಯ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
ಹೈದರಾಬಾದ್ (ಡಿ.19): ತೆಲುಗು ಸಿನಿಮಾರಂಗದ ಸೂಪರ್‌ಹಿಟ್ ಬಳಗಂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಭಾವನಾತ್ಮಕ ಗೀತೆಯನ್ನು ಹಾಡಿದ್ದ ಪದ್ಮಶ್ರಿ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಬಳಗಂ ಸಿನಿಮಾದ ಮೂಲಕ ದೊಡ್ಡಮಟ್ಟದಲ್ಲಿ ಜನಮನ್ನಣೆ ಗಳಿಸಿದ್ದ, ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ತಮ್ಮ 67ನೇ ವಯಸ್ಸಿನಲ್ಲಿ ಡಿಸೆಂಬರ್ 18ರಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಕಿನ್ನೇರ ಮೊಗಿಲಯ್ಯ ಎಂದೇ ಗುರುತಿಸಿಕೊಂಡಿದ್ದ ಇವರು ಕಳೆದ ಕೆಲವು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ವಾರಂಗಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದುಕೊಳ್ಳುತ್ತಿದ್ದರು.
ಬಳಗಂ ಸಿನಿಮಾದ ಕ್ಲೈಮಾಕ್ಸ್‌ನ ಭಾವನಾತ್ಮಕ ಗೀತೆಯನ್ನು ನೋಡಿದಾಗ, ಕೇಳಿದಾಗಲೆಲ್ಲಾ ಜನರು ಇವರನ್ನು ನೆನಪಿಸಿಕೊಳ್ಳುತ್ತಿದ್ದರು. ಸಿನಿಮಾದಲ್ಲಿಯೂ ಅಷ್ಟೇ ಮನೋಜ್ಞವಾಗಿ ಹಾಡಿದ್ದರು. ಆ ಮೂಲಕ ಅವರು ತೆಲುಗು ಸಿನಿಮಾ ಮಂದಿಗೆ ಆಪ್ತರಾಗಿದ್ದರು. ತೆಲಂಗಾಣ ಮೂಲದ ಜನಪದ ಕಲಾವಿದರಾಗಿದ್ದ ಮೊಗಿಲಯ್ಯ ಕಿನ್ನಾರ ಬಾರಿಸುವುದರಲ್ಲೇ ಜನಪ್ರಿಯತೆ ಗಳಿಸಿದ್ದರು.
undefined
ಸಂಗೀತ ಪರಿಕರಗಳಲ್ಲಿಯೇ ಅತ್ಯಂತ ಅಪರೂಪವಾದ ಕಿನ್ನಾರಕ್ಕೆ ಮರುಜೀವ ಕೊಟ್ಟವರಲ್ಲಿ ಮೊಗಿಲಯ್ಯ ಹೆಸರೇ ಮುಂಚೂಣಿಯಲ್ಲಿ ಬರುತ್ತದೆ. ಇದಕ್ಕೆ ರಾಷ್ಟ್ರೀಯ ಸ್ಥಾನಮಾನ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬುಡಕಟ್ಟು ಸಂಗೀತ ವಾದ್ಯವನ್ನು ಜನಪ್ರಿಯ ಮಾಡಿದ ಕಾರಣಕ್ಕೆ 2022ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬಿಜೆಪಿ ಸಂಸದ ಪ್ರತಾಪ್ ಸಾರಂಗಿಯ ತಳ್ಳಿದ ರಾಹುಲ್ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್ ಮಂಜುನಾಥ್!
ವಾರಂಗಲ್ ಜಿಲ್ಲೆಯ ದೊಗ್ಗೊಂಡಿ ಮಂಡಲ್‌ನ ಮೊಗಿಲಯ್ಯ ಹಾಗೂ ಕೊಮೊರಮ್ಮ ದಂಪತಿಗಳನ್ನು ಕಿನ್ನಾರವನ್ನು ಬಾರಿಸುವ ಮೂಲಕ ಗಮನಸೆಳೆದಿದ್ದರು. ಹಾಡಿನ ಮೂಲಕ ಕಥೆಯನ್ನು ಹೇಳುವ ಅವರ ಕಲೆಯನ್ನು ಜನರೂ ಮೆಚ್ಚಿದ್ದರು. ಇವರ ಪುತ್ರ ಸುದರ್ಶನ್ ಸ್ಟೀಲ್ ಗೂಡ್ಸ್‌ನ ಟ್ರೇಡರ್ ಆಗಿದ್ದಾರೆ. ಮೊಗಿಲಯ್ಯ ಅವರ ಹಾಡನ್ನು ಇಷ್ಟಪಟ್ಟಿದ್ದ ಬಳಗಂ ಸಿನಿಮಾದ ನಿರ್ದೇಶಕ ವೇಣು ಯೆಲ್ದಂಡಿ, ಸಿನಿಮಾದಲ್ಲಿ ಅವರ ಹಾಡನ್ನು ಬಳಸಿಕೊಂಡಿದ್ದರು. ಆ ಬಳಿಕ ಅವರು ಭೀಮ್ಲಾ ನಾಯಕ್ ಸಿನಿಮಾದಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಮೊಗಿಲಯ್ಯ ಅವರಿಗೆ ಚಿರಂಜೀವಿ, ನಿರ್ಮಾಪಕ ದಿಲ್ ರಾಜು, ನಿರ್ದೇಶಕ ವೇಣು ಯೇಲ್ದಂಡಿ ಹಣಕಾಸು ನೆರವು ಕೂಡ ನೀಡಿದ್ದರು.