
ಸದ್ಯ ಬಿಗ್ಬಾಸ್ ಹವಾ ಜೋರಾಗಿದೆ. ಕನ್ನಡದಲ್ಲಿ ಸೀಸನ್ 12 ಬರುತ್ತಿದ್ದರೆ, ಅತ್ತ ಹಿಂದಿನಲ್ಲಿ ಸೀಸನ್ 19 ಶುರುವಾಗಲಿದೆ. ಇದಾಗಲೇ ಯಾವ್ಯಾವ ಸೆಲೆಬ್ರಿಟಿಗಳು ಷೋಗೆ ಹೋಗಬಹುದು ಎನ್ನುವ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಹಲವರು ವಿಶ್ಲೇಷಿಸುತ್ತಿದ್ದಾರೆ. ಇವರು ಇರಬಹುದಾ, ಅವರು ಇರಬಹುದಾ ಎಂಬೆಲ್ಲಾ ಲೆಕ್ಕಾಚಾರ ಪ್ರತಿಭಾಷೆಯ ಬಿಗ್ಬಾಸ್ ಶುರುವಾದಾಗಲೆಲ್ಲಾ ನಡೆಯುತ್ತಲೇ ಇರುತ್ತದೆ. ಆದರೆ ಬಿಗ್ಬಾಸ್ ರಿಯಾಲಿಟಿ ಷೋ ಇಷ್ಟಪಡುವವರು ಎಷ್ಟು ಮಂದಿ ಇದ್ದಾರೋ, ಇಷ್ಟಪಡದ ದೊಡ್ಡ ವರ್ಗವೇ ಇದೆ. ಅದಕ್ಕೆ ಅವರದ್ದೇ ಆದ ಕಾರಣಗಳು ಇವೆ. ಇದಾಗಲೇ ಕೆಲವು ಭಾಷೆಗಳ ಈ ಷೋನಲ್ಲಿ ಅಶ್ಲೀಲತೆಯ ಪರಮಾವಧಿಯನ್ನೂ ನೋಡಿಯಾಗಿದೆ. ಹೀಗೆ ಮಾಡಿದರೇನೇ ಟಿಆರ್ಪಿ ಹೆಚ್ಚು ಬರುತ್ತದೆ ಎನ್ನುವ ಕಾರಣಕ್ಕೆ, ಅದನ್ನು ಸ್ಪರ್ಧಿಗಳಿಂದ ಉದ್ದೇಶಪೂರ್ವಕವಾಗಿಯೇ ಮಾಡಿಸಲಾಗುತ್ತದೆ ಎಂಬ ಆರೋಪಗಳೂ ಇದೆ. ಇದೇ ವೇಳೆ ಹೊರಗಡೆ ಕಾಂಟ್ರವರ್ಸಿಯಲ್ಲಿ ಸಿಲುಕಿದವರಿಗೆ ಆದ್ಯತೆ ಎನ್ನುವುದು ಇದೀಗ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
ಇದೇ ಕಾರಣಕ್ಕೆ ಒಳ್ಳೆಯ ಹೆಸರು ಮಾಡಿದ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಈ ಷೋಗೆ ಹೋಗಲು ನಿರಾಕರಿಸುವುದು ಇದೆ. ಈಚೆಗಷ್ಟೇ ಖ್ಯಾತ ನಟ ರಾಮ್ಕಪೂರ್ ಅವರಿಗೆ ಹಿಂದಿಯ ಬಿಗ್ಬಾಸ್ನಿಂದ ಆಫರ್ ಬಂದಿತ್ತು. ತಮಗೆ 20 ಕೋಟಿ ರೂಪಾಯಿ ಕೊಟ್ಟರೂ ಬಿಗ್ಬಾಸ್ ಷೋಗೆ ನಾನು ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಬಹಳ ದಿನಗಳಿಂದ, ರಾಮ್ ಕಪೂರ್ ಅವರ ಹೆಸರೂ ಕಾರ್ಯಕ್ರಮದ ಸ್ಪರ್ಧಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅವರ ಜೊತೆಗೆ, ಅವರ ಪತ್ನಿ ಗೌತಮಿ ಕಪೂರ್ ಅವರ ಹೆಸರೂ ಸಹ ಕೇಳಿಬರುತ್ತಿದೆ. ಆದರೆ ವರದಿಗಳ ಪ್ರಕಾರ, ಇದಾಗಲೇ ಬಿಗ್ಬಾಸ್ನ ಆಫರ್ ಅನ್ನು ಇವರು ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ನಟ, ನನಗೆ 20 ಕೋಟಿ ಆಫರ್ ನೀಡಿದರೂ ನಾನು ಎಂದಿಗೂ ಬಿಗ್ ಬಾಸ್‌ಗೆ ಬರುವುದಿಲ್ಲ. ಅಂತಹ ಕಾರ್ಯಕ್ರಮಗಳು ನನಗಲ್ಲ. ಇದು ಯಶಸ್ವಿ ಕಾರ್ಯಕ್ರಮ ಎಂದು ನನಗೆ ತಿಳಿದಿದೆ, ಆದರೆ ನಾನು ನನ್ನನ್ನು ನಟ ಎಂದು ಪರಿಗಣಿಸುತ್ತೇನೆ ಮತ್ತು ಅಂತಹ ಕಾರ್ಯಕ್ರಮಗಳಿಗಾಗಿ ನಾನು ರಚಿಸಲ್ಪಟ್ಟಿಲ್ಲ ಎಂದು ಬಿಗ್ಬಾಸ್ ಯಾವ ರೀತಿಯ ಕಾರ್ಯಕ್ರಮ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದರು.
ಇದೀಗ ಖ್ಯಾತ ನಟಿ, ಎಲ್ನಾಜ್ ನೊರೌಜಿ 6 ಕೋಟಿ ರೂಪಾಯಿಗಳ ಬೃಹತ್ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ಇದಾಗಲೇ ಕೈತುಂಬಾ ಕೆಲಸಗಳು ಇರುವ ಕಾರಣ ಕೊಟ್ಟಿರೋ ನಟಿ, ಮನಸ್ಸು ಮಾಡಿದ್ದರೆ 6ನ ಕೋಟಿ ಪಡೆದು ಬಿಗ್ಬಾಸ್ಗೆ ಹೋಗಬಹುದಿತ್ತು. ಆದರೆ ಈ ಷೋಗೆ ನಾನು ಬರುವುದಿಲ್ಲ ಎಂದು ಹೇಳುವ ಮೂಲಕ, ಬಿಗ್ಬಾಸ್ ಬಗ್ಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನಟಿ ಜನಪ್ರಿಯ ಹಾಸ್ಯ ಫ್ರಾಂಚೈಸಿಯ ಮುಂದಿನ ಕಂತು 'ಮಸ್ತಿ 4' ನಲ್ಲಿ ನೊರೌಜಿ ಕಾಣಿಸಿಕೊಳ್ಳಲಿದ್ದಾರೆ. ಅವರು ತಮ್ಮ ಸಿನಿಮಾ ಪ್ರಯಾಣದ ಮೇಲೆ ಗಮನಹರಿಸಿದ್ದಾರೆ. ಬಿಗ್ಬಾಸ್ನಂಥ ಷೋಗೆ ಹೋಗಿ ನನ್ನ ಸಿನಿಮಾದ ಜೀವನದ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಟಿ ಹೇಳಿರುವುದಾಗಿ ತಿಳಿದುಬಂದಿದೆ.
ಬಿಗ್ ಬಾಸ್ ಅಥವಾ ಯಾವುದೇ ರೀತಿಯ ರಿಯಾಲಿಟಿ ಶೋನಲ್ಲಿ, ನೀವು ನಿಮ್ಮ ಪ್ರತಿಭೆಯನ್ನು ತೋರಿಸುವುದಿಲ್ಲ ಆದರೆ ಪರಸ್ಪರರ ಜೀವನದಲ್ಲಿ ಇಣುಕುತ್ತೀರಿ. ನಾನು ಇದನ್ನು ಮಾಡಲು ಸಾಧ್ಯವಿಲ್ಲ. ಇದು ವೃತ್ತಿಪರವಾಗಿ ನನಗೆ ಏನನ್ನೂ ನೀಡುವುದಿಲ್ಲ ಎಂದು ಈ ಹಿಂದೆ ರಾಮ್ ಕುಮಾರ್ ಹೇಳಿದ್ದರು. ಅದರಂತೆಯೇ ಒಳ್ಳೆಯ ರೀತಿಯಲ್ಲಿ ಹೆಸರು ಮಾಡಿರುವ ಹಲವರು ಬಿಗ್ಬಾಸ್ ಆಫರ್ ತಿರಸ್ಕರಿಸುವುದು ಸರ್ವೇ ಸಾಮಾನ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.