Amrutadhare Serial: ಭೂಮಿಕಾಗೆ ಮಗು ಆದ ಖುಷಿಯಲ್ಲಿ ಹೀಗೆಲ್ಲಾ ಡಾನ್ಸ್​ ಮಾಡೋದಾ ಭಾಗ್ಯಮ್ಮಾ?

Published : Jul 10, 2025, 08:10 PM IST
Amrutadhare Bhagyamma

ಸಾರಾಂಶ

ಅಮೃತಧಾರೆಯಲ್ಲಿ ಭೂಮಿಕಾ ಮತ್ತು ಗೌತಮ್​ ಅಮ್ಮ-ಅಪ್ಪ ಆಗಿದ್ದಾರೆ. ಈ ಖುಷಿಯಲ್ಲಿ ಇಲ್ಲಿಯವರೆಗೆ ಮೌನವಾಗಿದ್ದ ಗೌತಮ್​ ಅಮ್ಮ ಭಾಗ್ಯಮ್ಮಾ ಹೇಗೆ ಕುಣಿದು ಕುಪ್ಪಳಿಸಿದ್ದಾಳೆ ನೋಡಿ! ನಟಿಯ ಕಾಲೆಳೆದ ನೆಟ್ಟಿಗರು 

ಅಮೃತಧಾರೆ ಸೀರಿಯಲ್​ ಇದೀಗ ಕುತೂಹಲದ ಘಟ್ಟವನ್ನು ತಲುಪಿದೆ. ಭೂಮಿಕಾಳ ಮಗುವನ್ನು ಸಾಯಿಸಬೇಕು ಎನ್ನುವ ಉದ್ದೇಶದಿಂದ ಶಕುಂತಮಾ ಮತ್ತು ಜೈದೇವ ಮಾಡಿದ ಪ್ಲ್ಯಾನ್​ಗಳೆಲ್ಲವೂ ಫ್ಲಾಪ್​ ಆಗಿವೆ. ಕಾಡಿನಲ್ಲಿ ಭೂಮಿಕಾ ಮತ್ತು ಗೌತಮ್​ ಅವರನ್ನು ಸಾಯಿಸಲು ವಿಲನ್​ಗಳು ರೌಡಿಗಳನ್ನು ಬಿಟ್ಟಿದ್ದರೆ ಇವರ ರಕ್ಷಣೆಗೆ ಬೇರೆ ಬೇರೆ ಸೀರಿಯಲ್​​ಗಳ ನಾಯಕ-ನಾಯಕಿಯರು ಬಂದು ಬಚಾವ್​ ಮಾಡಿದ್ದಾರೆ. ಅಣ್ಣಯ್ಯ ಸೀರಿಯಲ್​ ಶಿವು ಮತ್ತು ಪಾರು ಹಾಗೂ ಕರ್ಣ ಸೀರಿಯಲ್​ ಕರ್ಣ ಬಂದು ಭೂಮಿಕಾ, ಗೌತಮ್​ ಮತ್ತು ಆನಂದ್​ ಅವರನ್ನು ಬಚಾವ್​ ಮಾಡಿದ್ದಾರೆ. ಇತ್ತ ಭೂಮಿಕಾ ಮಗುವಿಗೆ ಜನ್ಮ ನೀಡಿದ್ದಾಳೆ.

ಸದ್ಯ ಧಾರಾವಾಹಿ ಈ ಹಂತ ತಲುಪಿದ್ದರೆ ಇತ್ತ ಭಾಗ್ಯಮ್ಮಾ, ಮಲ್ಲಿ ಮತ್ತು ಸುಧಾ ಸಕತ್​ ಡಾನ್ಸ್​ ಮಾಡಿದ್ದಾರೆ. ಅಷ್ಟಕ್ಕೂ ಇವರ ಈ ಡಾನ್ಸ್​ಗೂ ಸೀರಿಯಲ್​ಗೂ ಸಂಬಂಧವಿಲ್ಲ. ಆದರೆ ನೆಟ್ಟಿಗರು ತಮಾಷೆಗೆ ನಟಿಯರ ಕಾಲೆಳೆಯುತ್ತಿದ್ದಾರೆ. ಇಲ್ಲಿಯವರೆಗೂ ಮೌನವಾಗಿದ್ದ ಭಾಗ್ಯಮ್ಮ ಇದೀಗ ಈ ಪರಿಯಲ್ಲಿ ಡಾನ್ಸ್​ ಮಾಡ್ತಿರೋದನ್ನು ನೋಡಿ ನೆಟ್ಟಿಗರಿಗೆ ಫುಲ್​ ಖುಷಿಯಾಗಿದೆ. ಅಂದಹಾಗೆ ಭಾಗ್ಯಮ್ಮ ಪಾತ್ರಧಾರಿಯಾಗಿರುವ ನಟಿಯ ಎಸರು ಚಿತ್ಕಳಾ ಬಿರಾದಾರ್​. ಕನ್ನಡತಿ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಳಾ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ಅಮೃತಧಾರೆಯಲ್ಲಿ ಮೌನವಾಗಿದ್ದರಿಂದ ವೀಕ್ಷಕರು ಭಾಗ್ಯಮ್ಮಾ ಬೇಗ ಮಾತನಾಡಮ್ಮಾ ಎನ್ನುತ್ತಿದ್ದರು. ಆದರೆ ಮಾತನಾಡಲು ಬಂದರೂ, ಹಳೆಯ ನೆನಪು ಮರುಕಳಿಸಿದರೂ ಶಕುಂತಲಾ ಮೇಲಿನ ಭಯದಿಂದ ಇಂದಿಗೂ ಭಾಗ್ಯಮ್ಮಾ ಮೌನವಾಗಿಯೇ ಇದ್ದಾಳೆ.

ಕನ್ನಡತಿಯಲ್ಲಿ ಅಮ್ಮಮ್ಮನ ಪಾತ್ರಕ್ಕೆ ಜೀವ ತುಂಬಿದ ನಟಿ ಚಿತ್ಕಳಾ ಬಿರಾದಾರ್(Chitkala Biradar). ಇದ್ರೆ ಇಂತಹ ಅತ್ತೆ ಇರಬೇಕು ಎಂದು ಕನ್ನಡತಿ ನೋಡಿದೋರೆಲ್ಲಾ ಹೇಳಿದ್ದಾರೆ. ಆದ್ರೆ ನಿಮಗೊತ್ತಾ, ನಿಜ ಜೀವನದಲ್ಲೂ ಚಿತ್ಕಳಾ ಬಿರಾದಾರ್ ಸೂಪರ್ ಅತ್ತೆ. ಸೊಸೆಗಾಗಿ ಮಿಡಿಯುವ ಅತ್ತೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ತಮ್ಮ ಸೊಸೆ, ಮಗನ ಮದುವೆ, ಸಂಬಂಧಗಳ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದರು. ಚಿತ್ಕಳಾ ಬಿರಾದಾರ್ ಅವರ ಮಗ ಸೌರಭ್, ಇವರ ಮದ್ವೆ ಆಗಿ ಈಗಾಗಲೇ ಒಂದು ವರ್ಷ ಆಗ್ತಾ ಬಂದಿದೆ. ಇವರ ಪತ್ನಿ ದೇವಾಂಶಿ ಜಾರ್ಖಂಡ್ ಮೂಲದವರು. ಸೊಸೆಯನ್ನು ಮಗಳಂತೆ ನೋಡುವ ಚಿತ್ಕಳಾ, ಅಂತರ್ ರಾಜ್ಯ ಮದುವೆ, ಲವ್ ಮ್ಯಾರೇಜ್, ಮಕ್ಕಳ ಆಸೆ, ಆಕಾಂಕ್ಷೆಗಳ್ ಬಗ್ಗೆ ಹೇಳಿದ್ದರು.

ಅಂದಹಾಗೆ ಚಿತ್ಕಳಾ ಬಿರಾದಾರ್‌ ಅವರು ಪ್ರಾಧ್ಯಾಪಕಿಯಾಗಿದ್ದವರು, ಈಗ ಚಿತ್ರರಂಗದಲ್ಲಿ ಫುಲ್‌ ಆಕ್ಟಿವ್‌ ಆಗಿದ್ದಾರೆ. ಸದ್ಯ ʼಅಮೃತಧಾರೆʼ ಧಾರಾವಾಹಿಯಲ್ಲಿ ಭಾಗ್ಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಸಿನಿಮಾ, ಸೀರಿಯಲ್‌, ಫ್ಯಾಮಿಲಿ ಎಂದು ಅವರು ಫುಲ್ ಬ್ಯುಸಿಯಿದ್ದಾರೆ. ಚಿತ್ಕಳಾ ಬಿರಾದಾರ್‌ ಅವರು ಕಳೆದ ವರ್ಷ ಹಿರಿಯ ಮಗನ ಮದುವೆ ಮಾಡಿದ್ದರು. ಇವರ ಹಿರಿ ಮಗ-ಸೊಸೆ ಅಮೆರಿಕದಲ್ಲಿ ಉನ್ನತ ಕೆಲಸದಲ್ಲಿದ್ದಾರೆ. ಚಿತ್ಕಳಾಗೆ ಇನ್ನೋರ್ವ ಮಗ ಕೂಡ ಇದ್ದಾನೆ. ಚಿತ್ಕಳಾ ಬಿರಾದಾರ್‌ ಅವರ ಸೊಸೆ ಪರರಾಜ್ಯದವಳು. ಮಗ ಪ್ರೀತಿ ಮಾಡ್ತಿದ್ದೀನಿ ಎಂದಾಗ ಚಿತ್ಕಳಾ ಅವರು ಆರಂಭದಲ್ಲಿ ಸ್ವಲ್ಪ ಚಿಂತೆ ಮಾಡಿದ್ದರು. ಸೊಸೆ ಭೇಟಿಯಾದ್ಮೇಲೆ ನಾನು ಪುಣ್ಯವಂತೆ ಎಂದು ಅವರು ಹೇಳಿಕೊಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇದು ನಿಜ.. 50 ಕೋಟಿ ಸಂಭಾವನೆಗೆ ಅರ್ಹ RGV ನಯಾಪೈಸೆ ಪಡೆಯದೇ ಹೀರೋ ಆಗ್ತಿದಾರೆ!
ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!