ಯೇ ಹರಿ ಹರಿ ಕಚ್ಚಿ ಕಚ್ಚಿ ಪೀಲಿ ಪೀಲಿ... ಕಚ್ಚಾಬಾದಮ್ ಬಳಿಕ ವೈರಲ್‌ ಆಗ್ತಿದೆ ಮತ್ತೊಂದು ಸಾಂಗ್‌

Suvarna News   | Asianet News
Published : Mar 03, 2022, 12:10 PM IST
ಯೇ ಹರಿ ಹರಿ ಕಚ್ಚಿ ಕಚ್ಚಿ ಪೀಲಿ ಪೀಲಿ... ಕಚ್ಚಾಬಾದಮ್ ಬಳಿಕ ವೈರಲ್‌ ಆಗ್ತಿದೆ ಮತ್ತೊಂದು ಸಾಂಗ್‌

ಸಾರಾಂಶ

ಭುವನ್ ಬಡ್ಯಾಕರ್‌ ತರ ಫೇಮಸ್‌ ಆಗ್ತಾರ ಈ ಹಣ್ಣಿನ ವ್ಯಾಪಾರಿ ವೈರಲ್‌ ಆಗ್ತಿದೆ ಹಣ್ಣು ಮಾರುವ ವೇಳೆ ಗ್ರಾಹಕರ ಸೆಳೆಯುವ ಹಾಡು ಪೇರಳೆ ಹಣ್ಣು ಮಾರುವ ಬೀದಿ ಬದಿ ವ್ಯಾಪಾರಿ

ಬೀದಿ ಬದಿ ಕಡಲೆಕಾಯಿ ವ್ಯಾಪಾರಿಯ ಕಚ್ಚಾ ಬಾದಮ್‌ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ... ಸಾಮಾಜಿಕ ಮಾಧ್ಯಮಗಳಲ್ಲಿ ಕಚ್ಚಾಬಾದಮ್‌  ಹಾಡು ಸೃಷ್ಟಿಸಿದ ಹವಾ ಅಷ್ಟಿಷ್ಟಲ್ಲ. ಆದರೆ ಈಗ ಅಂತಹದ್ದೇ ರೀತಿಯ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗ ನಿಧಾನವಾಗಿ ವೈರಲ್‌ ಆಗ್ತಿರುವ ಈ ಹಾಡನ್ನು ಬೀದಿ ಬದಿಯಲ್ಲಿ ಪೇರಳೆ ಹಣ್ಣು ಮಾರುತ್ತಿರುವ ವ್ಯಾಪಾರಿಯೊಬ್ಬರು ತಮ್ಮ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹಾಡುತ್ತಿದ್ದಾರೆ. ಈ ಹಾಡು ಕೂಡ ಸುಂದರವಾದ ಟ್ಯೂನ್‌ ಹೊಂದಿದ್ದು, ಕಚ್ಚಾಬಾದಮ್‌ ರೀತಿ ಖ್ಯಾತಿ ಗಳಿಸಬಹುದು ಎನ್ನಲಾಗುತ್ತಿದೆ. ಅಲ್ಲದೇ ಸೋಶಿಯಲ್‌ ಮೀಡಿಯಾ ನೋಡುಗರು ಇವರನ್ನು ಭುವನ್‌ ಬಡ್ಯಾಕರ್‌ಗೆ ಹೋಲಿಕೆ ಮಾಡುತ್ತಿದ್ದಾರೆ. 

ಕಚ್ಚಾಬಾದಮ್‌ ಹಾಡನ್ನು ಪಶ್ಚಿಮ ಬಂಗಾಳದ ಕಡ್ಲೆಕಾಯಿ ವ್ಯಾಪಾರಿಯಾದ ಭುವನ್‌ ಬಡ್ಯಾಕರ್‌ ತಮ್ಮ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಹಾಡುತ್ತಿದ್ದರು. ಪ್ರಸ್ತುತ ಭುವನ್ ಬಡ್ಯಾಕರ್ ದೇಶದೆಲ್ಲೆಡೆ ತಮ್ಮ ಈ ಕ್ಯಾಚಿ ರೈಮ್‌ನಿಂದ ಮನೆಮಾತಾಗಿದ್ದು, ಕಡ್ಲೆಕಾಯಿ ಮಾರಾಟ ಮಾಡುವುದನ್ನು ಬಿಟ್ಟಿದ್ದಾರೆ. 

ಆಗ ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ: ಈಗ ಕಚ್ಚಾಬಾದಮ್‌ ಹಾಡುಗಾರನ ಲೈಫ್‌ಸ್ಟೈಲ್‌ ಹೇಗಿದೆ ನೋಡಿ


ಈಗ ಪೇರಳೆ ಹಣ್ಣು ಮಾರಾಟ ಮಾಡುವ  ವ್ಯಾಪಾರಿಯ ಹೊಸ ಹಾಡು ಇಂಟರ್‌ನೆಟ್‌ನಲ್ಲಿ ನೋಡುಗರನ್ನು ರಂಜಿಸುತ್ತಿದೆ. ಇದರಲ್ಲಿ ಪೇರಳೆ ಮಾರಾಟಗಾರನು ಹಣ್ಣುಗಳನ್ನು ಮಾರಾಟ ಮಾಡಲು ಈ ಹಾಡನ್ನು  ಬಳಸುತ್ತಾನೆ. 'ಯೇ ಹರಿ ಹರಿ, ಕಚ್ಚಿ ಕಚ್ಚಿ, ಪೀಲಿ ಪೀಲಿ, ಪಾಕಿ ಪಾಕಿ, ಮೀಠಿ ಮೀಠಿ, ಗದ್ದರ್ ಗದ್ದರ್, ತಾಜಾ ತಾಜಾ, ನಮಕ್ ಲಗಾ ಕೆ ಖಾಜ್ ಖಾಜಾ ಎಂದು ಹಿಂದಿಯಲ್ಲಿ ಈತ ಹಾಡುತ್ತಿದ್ದು, ಖರೀದಿದಾರರನ್ನು ಆಕರ್ಷಿಸುತ್ತಿದೆ. 27 ಸೆಕೆಂಡುಗಳ ವೀಡಿಯೊವನ್ನು ಮೊದಲು ಯೂಟ್ಯೂಬ್‌ನಲ್ಲಿ (YouTube)  ಪೋಸ್ಟ್ ಮಾಡಲಾಯಿತು ಮತ್ತು ನಂತರ ಟ್ವಿಟರ್ (Twitter) ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದನ್ನು ನೋಡುಗರು ಶೇರ್ ಮಾಡಿದ್ದಾರೆ. ಬಳಕೆದಾರರು ಪೇರಳೆ ಮಾರುವವರನ್ನು ಪ್ರೀತಿಯಿಂದ ದಾದಾಜಿ (ಅಜ್ಜ) ಎಂದು ಕರೆಯುತ್ತಿದ್ದಾರೆ. ಆದರೆ, ವಿಡಿಯೋವನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ ವಿಡಿಯೋ ನೋಡುಗರು ಈ ವ್ಯಕ್ತಿಯನ್ನು ಕಚ್ಚಾ ಬಾದಮ್‌ ಹಾಡುಗಾರ ಭುವನ್‌ ಬಡ್ಯಾಕರ್ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ.  

ವೈರಲ್‌ ಹಾಡು ಕಚ್ಚಾಬಾದಾಮ್ ಗಾಯಕನಿಗೆ ಮೂರು ಲಕ್ಷ ನೀಡಿದ ಮ್ಯೂಸಿಕ್ ಕಂಪನಿ
 

ಭುವನ್‌ ಬಡ್ಯಾಕರ್‌ ಅವರ ಕಚ್ಚಾಬಾದಾಮ್ ಹಾಡು ಸೃಷ್ಟಿ ಮಾಡಿದ ಹುಚ್ಚು ಅಷ್ಟಿಷ್ಟಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ರೀಲ್ಸ್‌, ಮೋಜ್, ವಾಟ್ಸಾಪ್ ಎಲ್ಲಿ ನೋಡಿದರಲ್ಲಿ ಈ ಹಾಡಿನದ್ದೇ ಹವಾ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಅಲ್ಲದೇ ಇತ್ತೀಚೆಗೆ ಇನ್ಸ್ಟಾಗ್ರಾಮ್‌( Instagram) ರೀಲ್‌ನಲ್ಲಿ ಸ್ವತಃ ಭುವನ್ ಬಡ್ಯಾಕರ್ ತಮ್ಮದೇ ಆದ ವೈರಲ್ ಹಾಡು ಕಚಾ ಬದಮ್‌ಗೆ ನೃತ್ಯ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಭುವನ್‌ ಬಡ್ಯಾಕರ್‌ ಅವರಿಗೆ ಕಾರು ಚಾಲನಾ ತರಬೇತಿ ಪಡೆಯುತ್ತಿದ್ದ ವೇಳೆ ಕಾರು ಗುದ್ದಿ ಅಪಘಾತವಾಗಿತ್ತು.  ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ (Birbhum) ಕಾರು ಅಪಘಾತವಾಗಿದ್ದು,  ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ (Suri Super Speciality Hospital) ದಾಖಲಿಸಲಾಗಿತ್ತು.

 

ಭುವನ್ ಬದ್ಯಕರ್ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಲಕ್ಷ್ಮೀನಾರಾಯಣಪುರ ಪಂಚಾಯತ್‌ನ (Lakshminarayanpur Panchayat) ಕುರಲ್ಜುರಿ ( Kuraljuri)ಗ್ರಾಮದ ದುಬ್ರಾಜ್‌ಪುರ ಬ್ಲಾಕ್‌ನ (Dubrajpur block) ನಿವಾಸಿ. ಪತ್ನಿ ಇಬ್ಬರು ಪುತ್ರರು ಒಬ್ಬ ಪುತ್ರಿಯೊಂದಿಗೆ ಅವರು ಜೀವಿಸುತ್ತಿದ್ದಾರೆ. ಅವರು ಗುಜರಿ ಸಾಮಾನುಗಳು ಮತ್ತು ಮುರಿದ ಗೃಹೋಪಯೋಗಿ ವಸ್ತುಗಳನ್ನು ಪಡೆದು ಅವುಗಳಿಗೆ ಪ್ರತಿಯಾಗಿ ಕಡಲೆ ಕಾಯಿಯನ್ನು ಮಾರಾಟ ಮಾಡುತ್ತಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು