ಕವ್ವಾಲಿ ವೇಳೆ ಕುಸಿದ ವೇದಿಕೆ... ನಗು ಉಕ್ಕಿಸುತ್ತಿದೆ ನಂತರದ ದೃಶ್ಯ

By Suvarna NewsFirst Published Mar 1, 2022, 4:09 PM IST
Highlights

ಕವ್ವಾಲಿ ಕಾರ್ಯಕ್ರಮದ ವೇಳೆ ಕುಸಿದ ವೇದಿಕೆ
ವೇದಿಕೆ ಕುಸಿದ ನಂತರ ಆಗಿದ್ದೆ ವಿಚಿತ್ರ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಕವ್ವಾಲಿ ಕಾರ್ಯಕ್ರಮದ ವೇಳೆ ವೇದಿಕೆ ಕುಸಿದು ಬಿದ್ದಂತಹ ಘಟನೆಯೊಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮನಸ್ಸು ತುಂಬಿ ನಗಬೇಕು ಎನಿಸಿದರೆ ನಿಮಗೆ ಸಾಮಾಜಿಕ ಜಾಲತಾಣ ಉತ್ತಮವಾದ ಆಯ್ಕೆ ಅಲ್ಲಿ ನಗುವಿಗೆ ಬರಗಾಲವಿಲ್ಲ. ಸಾಕಷ್ಟು ತಮಾಷೆಯ ನಗು ಉಕ್ಕಿಸುವ ವಿಡಿಯೋವನ್ನು ನೀವು ಈಗಾಗಲೇ ಅಲ್ಲಿ ನೋಡಿರಬಹುದು. ಅಂತಹ ವಿಡಿಯೋಗಳ ಸಾಲಿನಲ್ಲಿ ಈಗ ನಾವು ಹೇಳ ಹೊರಟಿರುವ ವಿಡಿಯೋ ಕೂಡ  ಅಂತಹದೇ ಸಾಲಿಗೆ ಸೇರುವುದು. 

ವಿಡಿಯೋದಲ್ಲಿ ಕಾಣಿಸುವಂತೆ ಕವ್ವಾಲಿ (Qawwali) ಹಾಡು (ಸೂಫಿ ಭಕ್ತಿಗೀತೆಗಳು) ಹಾಡಲು ಸುಮಾರು 15ರಿಂದ 20 ಜನರಿರುವ ದೊಡ್ಡ ಗುಂಪು ವೇದಿಕೆ ಮೇಲೆ ಕುಳಿತಿರುತ್ತದೆ. ಅಷ್ಟರಲ್ಲಿ ದಿಢೀರನೇ ವೇದಿಕೆ ಕುಸಿಯುತ್ತದೆ. ವೇದಿಕೆ ಕುಸಿಯುತ್ತಿದ್ದಂತೆ ವೇದಿಕೆ ಮೇಲೆ ಕಾಲು ಮಡಚಿ ಕುಳಿತಿದ್ದ ಎಲ್ಲರೂ ಏಳಲು ಯತ್ನಿಸುತ್ತಾರೆ. ಆದರೆ ಆ ಗುಂಪಿನ ಮುಖಂಡ ಮಾತ್ರ ಅವರನ್ನು ಏಳಲು ಬಿಡದೇ ದೊಡ್ಡದಾದ ಸ್ವರ ತೆಗೆದು ಬೈಟೋ ಬೈಟೋ (ಕುಳಿತುಕೊಳ್ಳಿ ಕುಳಿತುಕೊಳ್ಳಿ) ಎಂದು ಜೋರಾಗಿ ಗದರುತ್ತಾರೆ. ಹೀಗಾಗಿ ವೇದಿಕೆ ಅಡಿಮೇಲಾಗಿದ್ದರೂ ಆಚೆ ಏಳಲು ಆಗದು ಕೂರಲೂ ಆಗದು ಎಂಬಂತಹ ಸ್ಥಿತಿಯಲ್ಲಿ ವೇದಿಕೆಯಲ್ಲಿದ್ದ ಸುಮಾರು ಜನ ಹಾಗೆಯೇ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ. 12  ಸೆಕೆಂಡ್‌ಗಳ ವಿಡಿಯೋ ನೋಡುಗರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಿದೆ. 

कलाकार को किसी भी परिस्थिति में घबराना नहीं चाहिए. pic.twitter.com/yDit4Qe6OR

— Awanish Sharan (@AwanishSharan)

Latest Videos

ಇಂತಹ ಸಂದರ್ಭಗಳಲ್ಲಿ ಬಹುತೇಕರು ಅಲ್ಲಿಂದ ಎದ್ದು ಬೇರೆಡೆ ಹೋಗಿ ತಮ್ಮ ಸುರಕ್ಷತೆಯನ್ನು ನೋಡಿಕೊಳ್ಳಲು ಬಯಸುತ್ತಾರೆ. ಆದರೆ ಇಲ್ಲಿ ತಮ್ಮ ಮುಖಂಡನ ಮಾತಿನ ಮೇಲೆ ಗೌರವ ನೀಡಿ ವೇದಿಕೆಯಲ್ಲಿದ ಜನ ವೇದಿಕೆ ಮಗುಚಿದರು ಏನೂ ಆಗದಂತೆ ಶಾಂತತೆ ಕಾಪಾಡಿರುವುದಕ್ಕೆ ವಿಡಿಯೋ ನೋಡುಗರು ಅವರ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಾರ್ಯಕ್ರಮದ ವೇಳೆ ಕುಸಿದ ವೇದಿಕೆ : ಹಲವರಿಗೆ ಗಾಯ

ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್‌ (Awanish Sharan) ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಕಲಾಕಾರ (Artist) ಎಂಥಹದ್ದೇ ಪರಿಸ್ಥಿತಿಯಲ್ಲೂ ಹೆದರಬಾರದು ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ 605 ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಈ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲಾಗಿದೆ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ.

ಕೆಟ್ಟ ಗಾಯನ: ಕೆನ್ನೆಗೆ ಬಲವಾಗಿ ಹೊಡೆದುಕೊಂಡ ಜಡ್ಜ್ ಅನು ಮಲಿಕ್!
 

ಬಾಳೆಹೊನ್ನೂರಲ್ಲಿ ಮಳೆ ಸುರಿದರೂ ಹಾಡಿದ್ದ ಎಸ್‌ಪಿಬಿ
ಹಿರಿಯ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗಾಯನ ಕೇಳದವರಿಲ್ಲ. ಪಟ್ಟಣದಲ್ಲಿ 2006ರಲ್ಲಿ ನಡೆದಿದ್ದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಅವರು ಬಂದಿದ್ದ ನೆನಪು ಜಿಲ್ಲೆ ಜನರು ಮರೆತಿಲ್ಲ. ಈ ಭಾಗದ ಸಂಗೀತಾಭಿಮಾನಿಗಳ ಮನದಲ್ಲಿ ಎಸ್‌ಪಿಬಿ ಕಾರ್ಯಕ್ರಮದ ನೆನಪು ಇನ್ನೂ ಹಚ್ಚ ಹಸುರಾಗಿದೆ. ರಂಭಾಪುರಿ ಪೀಠದ ಆವರಣದಲ್ಲಿ 2006ರ ಮೇ 28ರಂದು ಶೃಂಗೇರಿ ಕ್ಷೇತ್ರದ ಸಂಜೀವಿನಿ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸದ ಸಹಾಯಾರ್ಥ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ರಸಗಾಯನ ನೀಡಲು ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಆಗಮಿಸಿದ್ದರು.

ಆದರೆ ಆ ದಿನ ಸಂಜೆ ಧಾರಾಕಾರ ಮಳೆ ಸುರಿದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಪಿಬಿ ಅವರು ಅಂದು ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲು ಆಗಿರಲಿಲ್ಲ. ಆದರೆ, ಬಹು ದೂರದ ಊರಿನಿಂದಲೇ ಮಲೆನಾಡಿಗೆ ಬಂದು, ಹಾಗೆಯೇ ವಾಪಾಸ್ಸು ತೆರಳಲು ಮನಸ್ಸಾಗದೇ ಹಾಗೂ ನೆರೆದಿದ್ದ ಸಂಗೀತಾಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂಬ ಉದ್ದೇಶದಿಂದ ಹಾಡು ಹಾಡಿದ್ದರು. 

click me!