ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಶ್ರೀಲೀಲಾ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ನೆಚ್ಚಿನ ನಟಿಯನ್ನು ನೋಡುವ ಉತ್ಸಾಹದಲ್ಲಿ ಈ ರೀತಿ ಅನುಚಿತವಾಗಿ...
ಸಿನಿಮಾ ತಾರೆಯರ ಮೇಲಿನ ಅಭಿಮಾನ ಕೆಲವೊಮ್ಮೆ ಎಲ್ಲೆ ಮೀರಿ, ಅಹಿತಕರ ಸನ್ನಿವೇಶಗಳನ್ನು ಸೃಷ್ಟಿಸುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇಂತಹದ್ದೇ ಒಂದು ಆತಂಕಕಾರಿ ಮತ್ತು ಖಂಡನೀಯ ಘಟನೆ ಇತ್ತೀಚೆಗೆ ಯುವ ನಟಿ, ಕನ್ನಡತಿ. ಪ್ಯಾನ್ ಇಂಡಿಯಾ ಪ್ರತಿಭೆ ಶ್ರೀಲೀಲಾ (Sreeleela) ಅವರೊಂದಿಗೆ ನಡೆದಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ, ಜನಸಂದಣಿಯ ನಡುವೆ ವ್ಯಕ್ತಿಯೊಬ್ಬರು ಶ್ರೀಲೀಲಾ ಅವರನ್ನು ಬಲವಂತವಾಗಿ ಎಳೆದ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ, ನಟಿ ಶ್ರೀಲೀಲಾ ಅವರು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಸಹಜವಾಗಿಯೇ, ಇಬ್ಬರು ಜನಪ್ರಿಯ ತಾರೆಯರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ನೂಕುನುಗ್ಗಲಿನ ಸಂದರ್ಭದಲ್ಲಿ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ಶ್ರೀಲೀಲಾ ಅವರ ಕೈ ಹಿಡಿದು, ಅಕ್ಷರಶಃ ತಮ್ಮತ್ತ ಬಲವಂತವಾಗಿ ಎಳೆಯಲು ಪ್ರಯತ್ನಿಸಿದ್ದಾರೆ.
ಸಾಲ ಮಾಡಿ, ಪುಸ್ತಕ ಮಾರಿ ಸಿನಿಮಾ ನೋಡ್ತಿದ್ದೆ- 10 ರೂ. ಕೇಳಿದ್ರೆ ಕೋಟಿ ಕೊಟ್ಟುಬಿಟ್ಟ ಎಂದ 'ನೆನಪಿರಲಿ' ಪ್ರೇಮ್
ಆ ಕ್ಷಣದಲ್ಲಿ ಶ್ರೀಲೀಲಾ ಅವರು ಆಘಾತಕ್ಕೊಳಗಾಗಿ, ಅಸಹಾಯಕತೆಯಿಂದ ಕದಲಿದಂತೆ ಕಂಡುಬಂದಿದೆ. ವಿಪರ್ಯಾಸವೆಂದರೆ, 'ಈ ಅಹಿತಕರ ಘಟನೆ ನಡೆಯುವಾಗ, ಅವರ ಪಕ್ಕದಲ್ಲೇ ಇದ್ದ ನಟ ಕಾರ್ತಿಕ್ ಆರ್ಯನ್ ಅವರ ಗಮನಕ್ಕೆ ಇದು ಬಂದಂತೆ ಕಾಣಲಿಲ್ಲ. ಅಥವಾ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿಯುವಷ್ಟರಲ್ಲಿ ಅದು ಮುಗಿದುಹೋಗಿತ್ತು' ಎಂದು ವಿಡಿಯೋ ವೀಕ್ಷಿಸಿದ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಶ್ರೀಲೀಲಾ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ನೆಚ್ಚಿನ ನಟಿಯನ್ನು ನೋಡುವ ಉತ್ಸಾಹದಲ್ಲಿ ಈ ರೀತಿ ಅನುಚಿತವಾಗಿ ವರ್ತಿಸುವುದು, ಅವರ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ತರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ. 'ಇಂತಹ ಅಮಾನವೀಯ ವರ್ತನೆ, ದೈಹಿಕವಾಗಿ ತೊಂದರೆ ಕೊಡುವ ಪ್ರಯತ್ನಗಳನ್ನು ತಕ್ಷಣವೇ ನಿಲ್ಲಿಸಬೇಕು,' 'ತಾರೆಯರು ಸಾರ್ವಜನಿಕ ಸ್ವತ್ತಲ್ಲ, ಅವರಿಗೂ ಖಾಸಗಿತನ ಮತ್ತು ಗೌರವ ಬೇಕು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಲಾವಿದರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು' ಎಂಬಂತಹ ಕಾಮೆಂಟ್‌ಗಳು ಜಾಲತಾಣಗಳಲ್ಲಿ ತುಂಬಿಹೋಗಿವೆ.
Vijay Deverakonda: ಹೋರಾಟದ ಕಥೆ ಸೀಕ್ರೆಟ್ ಬಯಲಾಯ್ತು.. 'ಎಲ್ಲಿಗೆ ಹೋಗಲಿ, ಯಾರನ್ನು ಕೇಳಲಿ'...?
ಈ ಘಟನೆಯು, ಎಷ್ಟೇ ದೊಡ್ಡ ತಾರೆಯರಾಗಿದ್ದರೂ, ಅವರು ಸಾರ್ವಜನಿಕ ಸ್ಥಳಗಳಲ್ಲಿ ಎದುರಿಸಬಹುದಾದ ಅನಿರೀಕ್ಷಿತ ಅಪಾಯಗಳು ಮತ್ತು ಭದ್ರತಾ ಲೋಪಗಳ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲೆ ಪ್ರೀತಿ, ಅಭಿಮಾನ ತೋರಿಸುವುದು ಸಹಜವಾದರೂ, ಅದು ಸಭ್ಯತೆಯ ಎಲ್ಲೆಯನ್ನು ದಾಟಬಾರದು. ವ್ಯಕ್ತಿಯ ಖಾಸಗಿತನವನ್ನು ಗೌರವಿಸುವುದು ಮತ್ತು ಅವರ ಸುರಕ್ಷತೆಗೆ ಧಕ್ಕೆ ತರದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಒತ್ತಿ ಹೇಳಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸಂಘಟಕರು ಮತ್ತು ಭದ್ರತಾ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅಗತ್ಯವಿದೆ.