ಲವ್‌ ಯು ರಚ್ಚು’ ಕಲಾವಿದ ಸಾವು : ರಚಿತಾ ರಾಮ್‌ ವಿಚಾರಣೆ

Kannadaprabha News   | Asianet News
Published : Aug 25, 2021, 10:54 AM IST
ಲವ್‌ ಯು ರಚ್ಚು’ ಕಲಾವಿದ ಸಾವು : ರಚಿತಾ ರಾಮ್‌ ವಿಚಾರಣೆ

ಸಾರಾಂಶ

ಲವ್‌ ಯು ರಚ್ಚು ಚಿತ್ರೀಕರಣ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಸಾವಿನ ಪ್ರಕ​ರ​ಣ ನ​ಟಿ​ ರಚಿತಾ ರಾಮ್‌ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆ

  ರಾಮನಗರ (ಆ.25):  ಲವ್‌ ಯು ರಚ್ಚು ಚಿತ್ರೀಕರಣ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಸಾವಿನ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನ​ಟಿ​ ರಚಿತಾ ರಾಮ್‌ ರಾಮನಗರ ಜಿಲ್ಲೆಯ ಬಿಡದಿ ಪೊಲೀಸ್‌ ಠಾಣೆಯಲ್ಲಿ ವಿಚಾ​ರ​ಣೆಗೆ ಹಾಜ​ರಾ​ದರು. ನೋಟಿಸ್‌ ನೀಡಿದ್ದರಿಂದ ನಟಿ ರಚಿತಾ ರಾಮ್‌ ಮಂಗ​ಳ​ವಾರ ಸಂಜೆ ಠಾಣೆಗೆ ಹಾಜರಾದರು. ಡಿವೈ​ಎಸ್ಪಿ ಮೋಹನ್‌ ಕುಮಾರ್‌ ದುರಂತದ ಬಗ್ಗೆ ಮಾಹಿತಿ ಪಡೆ​ದು​ಕೊಂಡರು.

ಇದೇ ವೇಳೆ ಲವ್‌ ಯು ರಚ್ಚು ಚಿತ್ರೀ​ಕ​ರ​ಣದ ವೇಳೆ ಸಹಾ​ಯಕ ಫೈಟರ್‌ ವಿವೇಕ್‌ ಮೃತ​ಪಟ್ಟಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಮೂವರ ಆರೋ​ಪಿ​ಗಳ ನ್ಯಾಯಾಂಗ ಬಂಧ​ನ​ವನ್ನು ರಾಮನಗರ ​ಸಿ​ಜೆಎಂ ನ್ಯಾಯಾ​ಲಯ ಸೆಪ್ಟೆಂಬರ್‌ 7ರವ​ರೆಗೆ ವಿಸ್ತ​ರಿ​ಸಿ​ದೆ.

ಆ ದುರ್ಘಟನೆ ನಡೆದಾಗ ನಾನು ಸೆಟ್‌ನಲ್ಲಿಇರಲಿಲ್ಲ: ನಟಿ ರಚಿತಾ ರಾಮ್

ಕಳೆದ ಆಗಸ್ಟ್‌ 9ರಂದು ಬಿಡ​ದಿ ಹೋಬಳಿ ಜೋಗ​ನ​ಪಾ​ಳ್ಯ​ದಲ್ಲಿ ಲವ್‌ ಯು ರಚ್ಚು ಚಲನಚಿತ್ರದ ಚಿತ್ರೀ​ಕ​ರ​ಣದ ವೇಳೆ ವಿದ್ಯುತ್‌ ಅವಘಡ ಸಂಭ​ವಿ​ಸಿ ಸಾಹಸ ಕಲಾ​ವಿ​ದ​ ವಿವೇಕ್‌ ಮೃತ​ಪಟ್ಟು ಮತ್ತೊಬ್ಬ ಕಲಾ​ವಿದ ತೀವ್ರ​ವಾಗಿ ಗಾಯ​ಗೊಂಡಿದ್ದ. ಈ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನಿರ್ದೇ​ಶಕ ಶಂಕರ ರಾಜ್‌, ಸಾಹಸ ನಿರ್ದೇ​ಶಕ ವಿನೋದ್‌ ಕುಮಾರ್‌, ಕ್ರೇನ್‌ ಚಾಲಕ ಮಹ​ದೇವ ವಿರುದ್ಧ ಬಿಡದಿ ಪೊಲೀ​ಸರು ಪ್ರಕ​ರಣ ದಾಖ​ಲಿ​ಸಿ​ಕೊಂಡಿದ್ದರು. ಸಿಜೆಎಂ ನ್ಯಾಯಾ​ಲಯ ಆರೋ​ಪಿ​ಗ​ಳಿಗೆ 14 ದಿನ​ಗಳ ನ್ಯಾಯಾಂಗ ಬಂಧ​ನದ ಆದೇಶ ನೀಡಿತ್ತು. ರಾಮ​ನ​ಗರ ಜಿಲ್ಲಾ ಕಾರಾ​ಗೃ​ಹ​ದಲ್ಲಿ ಆರೋ​ಪಿ​ಗ​ಳಿದ್ದು, ವಿಡಿಯೋ ಕಾನ್ಪ​ರೆನ್ಸ್‌ ಮೂಲಕ ನ್ಯಾಯಾ​ಧೀ​ಶರು ವಿಚಾ​ರಣೆ ನಡೆ​ಸಿ​ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
BBK 12: ಗಿಲ್ಲಿ ನಟನಿಗೆ ಏನ್‌ ಮಾಡೋದು ಅಂತ ನಿರ್ಧಾರ ಮಾಡಿ: ರಘು ಬಳಿ ಕಾವ್ಯ ಶೈವ ಬೇಸರ ತೋಡಿಕೊಂಡ್ರು