ರೆಹಮಾನ್‌ ಗೊತ್ತಿಲ್ಲ, ಭಾರತ ರತ್ನ ತಂದೆಯ ಉಗುರಿಗೆ ಸಮ : ನಟ ಬಾಲಕೃಷ್ಣ

By Kannadaprabha NewsFirst Published Jul 23, 2021, 8:32 AM IST
Highlights
  • ಆಸ್ಕರ್‌ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಯಾರೆಂದೇ ನನಗೆ ಗೊತ್ತಿಲ್ಲ
  • ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’  ಬಗ್ಗೆ ವಿವಾದಿತ ಹೇಳಿಕೆ
  • ‘ಭಾರತ ರತ್ನ ತಂದೆಯ ಕಾಲಿನ ಉಗುರಿಗೂ ಸಮ ಎಂದು ಖ್ಯಾತ ನಟ ನಂದಮೂರಿ ಬಾಲಕೃಷ್ಣ ವಿವಾದ 

ಹೈದರಾಬಾದ್‌ (ಜು.23): ಆಸ್ಕರ್‌ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಯಾರೆಂದೇ ನನಗೆ ಗೊತ್ತಿಲ್ಲ. ಇನ್ನು ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ನಮ್ಮ ತಂದೆಯ ಕಾಲಿನ ಉಗುರಿಗೂ ಸಮ ಎಂದು ಹೇಳುವ ಮೂಲಕ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ವಿವಾದ ಸೃಷ್ಟಿಸಿದ್ದಾರೆ.

ತೆಲುಗು ಟಿವಿ ಚಾನೆಲ್‌ ಜೊತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಅವರು, ಎ.ಆರ್‌.ರೆಹಮಾನ್‌ ಯಾರು ಎಂದೇ ನನಗೆ ಗೊತ್ತಿಲ್ಲ. ಅವರು ಆಸ್ಕರ್‌ ಗೆದ್ದಿದ್ದಾರೆ ಎಂದು ಕೇಳಿದ್ದೇನೆ. ಆದರೆ ಅವರ ಬಗ್ಗೆ ನನಗೇನೂ ಗೊತ್ತಿಲ್ಲ. ಅವರ ದಶಕದಲ್ಲಿ ಒಮ್ಮೆ ಹಿಟ್‌ ಹಾಡು ಹಾಡುತ್ತಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ನಟ, ಶಾಸಕ ಬಾಲ​ಕೃಷ್ಣರಿಂದ ಛಾಯಾ​ಗ್ರಾ​ಹ​ಕಗೆ ಕಪಾ​ಳ​ಮೋ​ಕ್ಷ!

 ಇನ್ನು ‘ಭಾರತ ರತ್ನ ಪ್ರಶಸ್ತಿಯು ನನ್ನ ತಂದೆ ಎನ್‌.ಟಿ. ರಾಮರಾವ್‌ ಅವರ ಕಾಲಿನ ಬೆರಳಿಗೂ ಸಮ ಅಲ್ಲ. ಭಾರತ ರತ್ನವು ನಟ ಹಾಗೂ ಆಂಧ್ರಪ್ರದೇಶ ಸಿಎಂ ಆಗಿದ್ದ ನನ್ನ ತಂದೆಗೆ ಗೌರವ ತಂದುಕೊಡುವುದಿಲ್ಲ. ಬದಲಾಗಿ ನನ್ನ ತಂದೆಯೇ ಭಾರತ ರತ್ನಕ್ಕೆ ಗೌರವ ತಂದುಕೊಡಲಿದ್ದಾರೆ. ಟಾಲಿವುಡ್‌ಗೆ ನನ್ನ ಕುಟುಂಬ ನೀಡಿದ ಕೊಡುಗೆಗೆ ಯಾವ ಪ್ರಶಸ್ತಿಯೂ ಸಮ ಅಲ್ಲ. ನನ್ನ ಕುಟುಂಬ ಅಥವಾ ನನ್ನ ತಂದೆ ಈ ಬಗ್ಗೆ ಬೇಸರ ಪಡುವುದಿಲ್ಲ. ಪ್ರಶಸ್ತಿಗಳೇ ಬೇಸರ ಪಡಬೇಕು’ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

click me!