ಇಂದು ಬೆಳಿಗ್ಗೆ ದೇವರ ದರ್ಶನದ ಜತೆ ಅರ್ಚನೆ ಹಾಗೂ ಅಭಿಷೇಕ ಮಾಡಿಸಲಾಯ್ತು. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಹೊರ ಬರುವಂತೆ ಪೂಜೆ ಸಲ್ಲಿಸಲಾಯ್ತು. ದರ್ಶನ್ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ..
ನಟ ದರ್ಶನ್ ತೂಗುದೀಪ (Actor Darshan) ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Murder Case) ಪ್ರಕರಣದಿಂದ ಮುಕ್ತರಾಗಬೇಕೆಂದು ದೇವರಿಗೆ ವಿಶೇಷ ಪೂಜೆ ಮಾಡಿಸಿದ್ದಾರೆ ದರ್ಶನ್ ಭಾವ ಮಂಜುನಾಥ್. ಕೈಗಾ ವಸತಿ ಸಂಕೀರ್ಣದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ ಭಾವ ಮಂಜುನಾಥ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಜುನಾಥ್ (Darshan Brother In Law Manjunath) ಅವರು ಶನೈಶ್ವರ ಹಾಗೂ ಆಂಜನೇಯ ದೇವರಿಗೂ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಿಶೇಷ ಎಂದರೆ, ದರ್ಶನ ಭಾವ ಮಂಜುನಾಥ
ದರ್ಶನ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೈಗಾ ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಪಾದ ಭಟ್ ಹೇಳಿಕೆ ನೀಡಿ, ದರ್ಶನ್ ಭಾವ 'ಶೀಘ್ರದಲ್ಲಿ ದರ್ಶನ್ ಆರೋಪದಿಂದ ಮುಕ್ತರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ' ಎಂದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದಲ್ಲಿ ಈ ಹೇಳಿಕೆ ನೀಡಲಾಗಿದೆ. 'ಸದ್ಯಕ್ಕೆ ಚಿತ್ರ ನಟ ದರ್ಶನ ಗ್ರಹ ಗತಿ ಸರಿಯಾಗಿಲ್ಲ, ಅಪಾಯಗಳು ಬರ್ತಾ ಇವೆ. ಹಾಗಾಗಿ ಅವರ ಭಾವ ಇಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಕೈಗಾದ ಪುರಾತನ ಮಂದಿರವಾದ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
ಕೊಲೆ ಕೇಸ್ ಆರೋಪಿ ದರ್ಶನ್ ಬಗ್ಗೆ ಬಾವ ಮಂಜುನಾಥ್ ಹೇಳಿದ್ದೇನು? ಜನ ಏನಂತ ರಿಯಾಕ್ಟ್ ಮಾಡ್ಬಹುದು?
ಇಂದು ಬೆಳಿಗ್ಗೆ ದೇವರ ದರ್ಶನದ ಜತೆ ಅರ್ಚನೆ ಹಾಗೂ ಅಭಿಷೇಕ ಮಾಡಿಸಲಾಯ್ತು. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಹೊರ ಬರುವಂತೆ ಪೂಜೆ ಸಲ್ಲಿಸಲಾಯ್ತು. ದರ್ಶನ್ ಮೇಲಿರುವ ದುಷ್ಟ ಶಕ್ತಿಗಳ ನಿವಾರಣೆ ಆದಷ್ಟು ಬೇಗ ಆಗಲಿ ಎಂದು ಪ್ರಾರ್ಥಿಸಲಾಯ್ತು. ಮನುಷ್ಯನಿಗೆ ಜೀವತಾವಧಿಯಲ್ಲಿ ಶನಿ ಪೀಡೆ ಅಂತಾ ಬರುತ್ತೆ. ಅಂತ ದೋಷಗಳಿದ್ದಾಗ ಆದಷ್ಟು ಬೇಗ ನಿವಾರಣೆ ಆಗಲೇಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.
ಚಿತ್ರರಂಗದ 'ಮರ್ಯಾದೆ ಪ್ರಶ್ನೆ' ಇಲ್ಲಿಗೆ ಬಂದು ನಿಂತಿದೆ; ಸಖತ್ ಸದ್ದು ಮಾಡ್ತಿರೋ ಆಲ್ ಓಕೆ!
ದರ್ಶನ್ ಆಗಾಗ ಕೈಗಾದಲ್ಲಿರುವ ಸಹೋದರಿಯ ಮನೆಗೆ ಬಂದು ಹೋಗುತ್ತಿದ್ದರು. ದೇವರ ಆಶೀರ್ವಾದ ಪಡೆಯಲು ನಮ್ಮ ಶ್ರೀ ಕ್ಷೇತ್ರಕ್ಕೆ ಕೂಡಾ ಬಂದಿದ್ರು. ಅವರನ್ನು ನಾನು ಬಹಳಷ್ಟು ಬಾರಿ ಕೈಗಾ ಪ್ರದೇಶದಲ್ಲಿ ನೋಡಿದ್ದೇನೆ. ದೇವಸ್ಥಾನಕ್ಕೆ ಯಾರೇ ಬಂದ್ರೂ ಅವರಿಗೆ ಆಶೀರ್ವಾದ ಮಾಡುವುದಷ್ಟೇ ನಮ್ಮ ಕೆಲಸ. ಇಲ್ಲಿ ಬರುವವರ ಯಾರ ವೈಯಕ್ತಿಕ ವಿಚಾರವಾಗಿಯೂ ನಾವು ಬಹಿರಂಗವಾಗಿ ಹೇಳುವುದಿಲ್ಲ. ದರ್ಶನ ಇವತ್ತಿನ ಪ್ರಕರಣದ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ' ಎಂದಿದ್ದಾರೆ ಅರ್ಚಕರಾದ ಶ್ರೀಪಾದ್ ಭಟ್.
ಪತ್ನಿ ವಿಜಯಲಕ್ಷ್ಮೀ ಕೊಂಡ ಕಾರೇ ಬೇಕೆಂದು ಹಠ ಹಿಡಿದಿದ್ದ ಪವಿತ್ರಾಗೂ ಸೇಮ್ ಕಾರು ಕೊಡಿಸಿದ್ರಾ ದರ್ಶನ್..?