ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ (South Cinema Industry) ಹೆಸರು ಪಡೆದಿರುವ ಖ್ಯಾತ ಚಲನಚಿತ್ರ ನಟಿ ಪೂಜಾ ಹೆಗ್ಡೆ (Pooja Hegde)ಉಡುಪಿ (Udupi) ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು.
ಉಡುಪಿ (ಮೇ. 04): ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ (South Cinema Industry) ಹೆಸರು ಪಡೆದಿರುವ ಖ್ಯಾತ ಚಲನಚಿತ್ರ ನಟಿ ಪೂಜಾ ಹೆಗ್ಡೆ (Pooja Hegde)ಉಡುಪಿ (Udupi) ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು.
ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು. ಖ್ಯಾತ ಮಾಡೆಲ್ ಮತ್ತು ನಟಿಯಾಗಿ ಬೆಳೆದ ನಂತರವೂ ತವರಿನ ಸಂಪರ್ಕವನ್ನು ಈಕೆ ಬಿಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕಾಪುವಿಗೆ ಆಗಮಿಸಿ ಹೊಸ ಮಾರಿಗುಡಿಗೆ ಭೇಟಿಕೊಟ್ಟು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ. ಇಂದು ಕೂಡ ಕುಟುಂಬ ಸಹಿತರಾಗಿ ಬಂದು ಬಹಳ ಹೊತ್ತು ಮಾರಿಗುಡಿಯಲ್ಲಿ ಕಳೆದು ತನ್ನ ಭಕ್ತಿಯನ್ನು ನಿವೇದಿಸಿದ್ದಾರೆ.
Jothe Jotheyali Serial:ಜೊತೆ ಜೊತೆಯಲಿ ರೋಚಕ ಕತೆ, ರಾಜನಂದಿನಿಯೇ ಅನು ರೂಪದಲ್ಲಿ ಬರ್ತಿದ್ದಾಳಾ?
ಉಜ್ವಲ ಭವಿಷ್ಯ ತೋರಿಸಿ ಕೊಡುವೆ ಎಂದ ದೇವಿ
ಪ್ರತಿ ಮಂಗಳವಾರದಂದು ಕಾಪು ಮಾರಿಗುಡಿಯಲ್ಲಿ ದೇವಿಯ ದರ್ಶನ ಸೇವೆ ಇರುತ್ತೆ. ಸಾವಿರಾರು ಭಕ್ತರು ಬಂದು ತಮ್ಮ ಭಕ್ತಿಯನ್ನು ದೇವಿಯ ಮುಂದೆ ನಿವೇದಿಸುತ್ತಾರೆ. ಪೂಜಾ ಹೆಗ್ಡೆ ಕೂಡ ದರ್ಶನದ ಸಂದರ್ಭದಲ್ಲೇ ದೇವಾಲಯಕ್ಕೆ ಭೇಟಿ ಕೊಟ್ಟಿದ್ದರು. ದರ್ಶನ ಪಾತ್ರಿಯ ಮುಂದೆ ತನ್ನ ಉತ್ತಮ ಭವಿಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಅಭಯ ಕೊಟ್ಟ ದೇವಿಯ ದರ್ಶನ ಪಾತ್ರಿಯು, ತನ್ನ ಕ್ಷೇತ್ರಕ್ಕೆ ಬಂದು ಪ್ರಾರ್ಥಿಸಿದ ಭಕ್ತೆಗೆ ಉಜ್ವಲ ಭವಿಷ್ಯದ ದಾರಿ ತೋರಿಸಿಕೊಡುತ್ತೇನೆ, ನನ್ನ ಪ್ರಸಾದವನ್ನು ಹಿಡಿದು ಮುಂದಕ್ಕೆ ಹೋಗಲಿ, ಬರುವ ಎಲ್ಲಾ ಸಂಕಷ್ಟಗಳನ್ನು ನನ್ನ ಕಾಲಬುಡಕ್ಕೆ ಹಾಕಿಕೊಂಡು ಆಶೀರ್ವಾದ ಕೊಡುತ್ತೇನೆ.. ದೊಡ್ಡ ಮಟ್ಟದ ಸಾಧನೆ ಮಾಡುವ ಶಕ್ತಿ ಕೊಟ್ಟು ಹರಸುತ್ತೇನೆ ಸಾಧನೆ ಮಾಡುವ ಸಾಮರ್ಥ್ಯ ಕೊಟ್ಟು ಆಕೆಯಿಂದ ಸೇವೆಯನ್ನು ಪಡೆಯುತ್ತೇನೆ ಎಂದು ಅಭಯ ನೀಡಿದರು.
ರಾಜಕೀಯಕ್ಕೆ ಬರ್ತಾರಾ ರಾಕಿಂಗ್ ಸ್ಟಾರ್: ಗೋವಾ ಸಿಎಂ ಭೇಟಿಯಾದ ಯಶ್ ರಾಧಿಕಾ
ದೇವಾಲಯದ ಜೀರ್ಣೋದ್ಧಾರ ವೀಕ್ಷಿಸಿದ ಪೂಜಾ ಹೆಗ್ಡೆ
ಕಾಪುವಿನ ಹೊಸ ಮಾರಿಗುಡಿ ಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, 30 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಿಸಲಾಗುತ್ತಿದೆ. ನಿರ್ಮಾಣ ಹಂತದಲ್ಲಿರುವ ದೇವಾಲಯದ ಕಟ್ಟಡವನ್ನು ಪೂಜಾ ಹೆಗ್ಡೆ ಕುಟುಂಬ ಸಮೇತ ವೀಕ್ಷಿಸಿದರು. ಬಾಲ್ಯದಿಂದಲೂ ಅನೇಕ ಬಾರಿ ದೇವಾಲಯಕ್ಕೆ ಭೇಟಿ ಕೊಡುತ್ತಿದ್ದು, ತನ್ನ ಇಷ್ಟ ದೇವರ ಗುಡಿಯ ಜೀರ್ಣೋದ್ದಾರಗೊಳ್ಳುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ದೇವೆರ್ ಉಲ್ಲೆರ್- ಶುದ್ಧ ತುಳುವಿನಲ್ಲಿ ಮಾತನಾಡಿದ ಪೂಜಾ
ತನ್ನ ದೇವಾಲಯದ ಪ್ರವಾಸದುದ್ದಕ್ಕೂ ಅಪ್ಪಟ ತುಳುವಿನಲ್ಲೇ ಪೂಜಾ ಹೆಗ್ಡೆ ಸಂಭಾಷಣೆ ನಡೆಸುತ್ತಿದ್ದರು. ಹುಟ್ಟಿಬೆಳೆದ ಊರು ಮಹಾರಾಷ್ಟ್ರ ಆದರೂ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದುನಿಂತರೂ ತನ್ನ ಮಾತೃಭಾಷೆ ತುಳುವನ್ನು ಪೂಜಾ ಮರೆತಿಲ್ಲ ಎನ್ನುವುದು ಸ್ಥಳೀಯ ಜನರಿಗೆ ಖುಷಿಯನ್ನು ಉಂಟುಮಾಡಿತ್ತು. ತನ್ನ ಸಾಧನೆಯ ಹಾದಿಗೆ ದೇವಿಯ ಅನುಗ್ರಹ ಇದೆ ಎನ್ನುವುದನ್ನು ಸ್ಮರಿಸಿಕೊಂಡ ಪೂಜಾ "ದೇವೆರ್ ಉಲ್ಲೆರ್" ಅಂದರೆ ದೇವರು ಇದ್ದಾರೆ ಎಂದು ಭಕ್ತಿಯಿಂದ ಆಡಳಿತ ಮಂಡಳಿಯವರೊಂದಿಗೆ ಹೇಳಿಕೊಂಡರು.
ಸದ್ಯ ಪೂಜಾ ಹೆಗ್ಡೆ ತಮಿಳು ನಟ ವಿಜಯ್ ಜೊತೆ ನಟಿಸಿರುವ ಬೀಸ್ಟ್ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಹತ್ತಾರು ಹಿಂದಿ ತೆಲುಗು ತಮಿಳು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದು ಮುಂದಿನ ದಿನಗಳಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಬಿ ಈದ್ ಕಬಿ ದಿವಾಲಿ ಹಾಗೂ ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ರಣವೀರ್ ಸಿಂಗ್ ಜೊತೆಗೆ ನಟಿಸಲಿರುವ ಸರ್ಕಸ್ ಸಿನಿಮಾ ತೆರೆಗೆ ಬರುವುದು ಬಾಕಿ ಇದೆ.