'ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾಗಳು ಮಿಂಚೋದನ್ನು ಹಿಂದಿವಾಲಗಳು ಸಹಿಸುತ್ತಿಲ್ಲ'

By Suvarna NewsFirst Published Apr 28, 2022, 7:10 PM IST
Highlights

* ಭಾಷೆ ವಿಚಾರವಾಗಿ ಸುದೀರ್ ಅಜಯ್ ದೇವಗನ್ ಚರ್ಚೆ
* ರಾಷ್ಟ್ರಮಟ್ಟದಲ್ಲಿ ಕನ್ನಡ ಸಿನಿಮಾಗಳು ಮಿಂಚೋದನ್ನು ಹಿಂದಿವಾಲಗಳು ಸಹಿಸುತ್ತಿಲ್ಲ
* ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ  ಹೇಳಿಕೆ

ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ, (ಏ.28):
ಕನ್ನಡ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವುದನ್ನು ಹಿಂದಿವಾಲಾಗಳಿಗೆ ಸಹಿಸಲಾಗುತ್ತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. 

ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವೆ ನಡೆದಿರುವ ಟ್ವಿಟ್ ವಾರ್ ಹಿನ್ನೆಲೆಯಲ್ಲಿ ಅವರು ಇಂದು(ಗುರುವಾರ) ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದು,  ಕನ್ನಡದ ಬಗ್ಗೆ ಸುದೀಪ್ ಅವರು ಗಟ್ಟಿಯಾದ ನಿಲುವು ಪ್ರಕಟಿಸಿದ್ದಾರೆ. ಎಲ್ಲ ಕನ್ನಡಿಗರು ಅವರನ್ನು ಬೆಂಬಲಿಸಬೇಕು ಎಂದರು.

Latest Videos

ಹಿಂದಿ ರಾಷ್ಟ್ರ ಭಾಷೆಯೇ ಅಲ್ಲ. ಎಂದು ಸುದೀಪ್ ಹೇಳಿದ್ದಾರೆ ಇಡೀ ಕನ್ನಡಿಗರು ಅವರ ಬೆಂಬಲಕ್ಕೆ ನಿಂತಿದ್ದೆವೆ.ಅಜಯ್ ದೇವಗನ್ ಪ್ರತಿಕ್ರಿಯೆ ನೀಡುವ ಮೊದಲು ಆಲೋಚನೆ ಮಾಡಬೇಕು.22 ಭಾಷೆಗಳಿಗೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ.ಅದರಲ್ಲಿ ಹಿಂದಿಯೂ ಕೂಡ ಒಂದು ಅಷ್ಟೇ ಎಂದು ಪ್ರವೀಣ್ ಶೆಟ್ಟಿ ಹೇಳಿದರು.

ಸುದೀಪ್-ಅಜಯ್ ದೇವಗನ್ ಭಾಷೆ ವಾರ್ ಮಧ್ಯೆ ಸಿಟಿ ರವಿ ಎಂಟ್ರಿ

ಯಾವುದೇ ಕಾರಣಕ್ಕೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಲು ಸಾಧ್ಯವಿಲ್ಲ.ಕನ್ನಡಕ್ಕೂ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಇದೆ.ನಮಗೆ ಕನ್ನಡವೇ ರಾಷ್ಟ್ರೀಯ ಭಾಷೆ.ಅಜಯ್ ದೇವಗನ್ ಗೆ ನಾವು ಎಚ್ಚರಿಕೆ ಕೊಡುತ್ತೇವೆ. ಕನ್ನಡ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಬಿಡ್ತೀರಾ ಎಂದು ಅಜಯ್ ದೇವಗನ್ ಕೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳು ರಾಷ್ಟ್ರವನ್ನು ಮೀರಿ ಬೆಳೆಯುತ್ತಿರುವುದು ಇವರಿಗೆ ಸಹಿಸಲಾಗುತ್ತಿಲ್ಲ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದ ಕೊಡುಗೆ ಅಪಾರ ಕರ್ನಾಟಕ- ಕನ್ನಡಿಗರನ್ನು ಬಿಟ್ಟು ಯಾವತ್ತೂ ಭಾರತದೇಶ ಆಗಿಲ್ಲ ಕನ್ನಡಿಗರನ್ನು ಕೆಣಕಲು ಬಂದರೆ ರಕ್ಷಣಾ ವೇದಿಕೆ ಕೈಕಟ್ಟಿ ಕೊರಲ್ಲ. ಅಜಯ್ ದೇವಗನ್ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ.
ಅಜಯ್ ದೇವಗನ್ ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇಲ್ಲವಾದರೆ ಅಜಯ್ ದೇವಗನ್ ಸಿನಿಮಾ ಕರ್ನಾಟಕಕ್ಕೆ ಕಾಲಿಡಲು ಬಿಡಲ್ಲ.ಸರಕಾರ ಕನ್ನಡಿಗರ ಪರವಾಗಿ ಗಮನಹರಿಸಬೇಕು. ನಾವೆಲ್ಲ ಕನ್ನಡಿಗರು ಒಗ್ಗಟಾಗಿ ಹಿಂದಿಯನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದೇವೆ. ಹಿಂದಿಯನ್ಬು ನಮ್ಮ ಮೇಲೆ ಹೇರಿ ಉದ್ಯೋಗ ಬದುಕು ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದು ತಿಳಿಸಿದರು.

ಈ ಬಗ್ಗೆ ಎಲ್ಲಾ ರಾಜಕೀಯ ಮುಖಂಡರು, ನಟರು ಧ್ವನಿ ಎತ್ತಬೇಕು.ಕನ್ನಡಕ್ಕೆ ತೊಂದರೆಯಾದಾಗ, ದಬ್ಬಾಳಿಕೆ ನಡೆದಾಗ ನಮ್ಮ ರಾಜ್ಯ ಸರಕಾರ ನಮ್ಮ ಪರವಾಗಿ ನಿಲ್ಲಬೇಕು.ಸರಕಾರ ಕನ್ನಡಿಗರ ಪರವಾಗಿರಬೇಕೆಂಬ ಕಾರಣಕ್ಕೆ ಮತ ಹಾಕಿದ್ದೇವೆ.ಭಾರತವನ್ನು ನೋಡಲು ಮೋದಿ ಇದ್ದಾರೆ.ಹೈಕಮಾಂಡ್ ಅನ್ನು ಮೀರಿ ಕರ್ನಾಟಕದ ಪರ ನಿಲುವು ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಿಗರ ಮುಖ್ಯಮಂತ್ರಿ ಕನ್ನಡಿಗರ ಪರವೇ ಇರಬೇಕು.ಕನ್ನಡದ ವಿಷಯ ಬಂದಾಗ ಮೋದಿ, ಅಮಿತ್ ಷಾ ಹೇಳಿದ ಹಾಗೇ ಕೇಳುತ್ತೆನೆಂದರೆ ಆಗುವುದಿಲ್ಲ.ಸರಕಾರ ಯಾವತ್ತು ಕನ್ನಡಿಗರ ಪರ ಇರಬೇಕು ಎಂದು ಆಗ್ರಹಿಸಿದರು.

click me!