ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟ ಸಿಂಬು..?!

Published : May 02, 2025, 06:52 PM ISTUpdated : May 02, 2025, 07:09 PM IST
ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ನಟ ಸಿಂಬು..?!

ಸಾರಾಂಶ

ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ ಹಾಡು "ನೀ ಸಿಂಗಮ್ ಧಾನ" ಎಂದು ಬಹಿರಂಗಪಡಿಸಿದ್ದಾರೆ. ಈ ಹಾಡು ಸಿಂಬು ಅಭಿನಯದ "ಪಾತು ಥಾಲಾ" ಚಿತ್ರದ್ದು. ಇದರಿಂದಾಗಿ, ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು ನಟಿಸಲು ಸೂಕ್ತ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇಬ್ಬರ ನಡುವಿನ ಹೋಲಿಕೆಗಳು ಈ ಊಹಾಪೋಹಗಳಿಗೆ ಇಂಬು ನೀಡಿದೆ.

ವಿರಾಟ್‌ ಕೊಹ್ಲಿಯನ್ನು (Virat Kohli) ಅಭಿಮಾನಿಗಳು ಕಿಂಗ್‌ ಕೊಹ್ಲಿ ಅಂತಾ ಸುಮ್‌ ಸುಮ್ಮನೇ ಕರೆಯೋದಿಲ್ಲ. ವಿರಾಟ್‌ ಬ್ಯಾಡ್‌ ಹಿಡಿದು ಫೀಲ್ಡ್‌ಗಿಳಿದ್ರೆ ರನ್‌ ಮಳೆಯನ್ನೇ ಹರಿಸ್ತಾರೆ. ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಬೌಲರ್ಸ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದಾರೆ. ಆರ್‌ಸಿಬಿಯ ಸ್ಟಾರ್‌ ಬ್ಯಾಟರ್‌ ಆಗಿರುವ ಕಿಂಗ್‌ ಕೊಹ್ಲಿ ಇತ್ತೀಚೆಗೆ ಆರ್‌ಸಿಬಿ ಚಾಟ್‌ ಶೋನಲ್ಲಿ ತಾವು ಪದೇ ಪದೇ ಕೇಳುವ ತಮ್ಮಿಷ್ಟದ ಹಾಡನ್ನು ರಿವೀಲ್‌ ಮಾಡಿದ್ದಾರೆ.

ವಿರಾಟ್‌ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ಏರ್ಪೋರ್ಟ್, ವಿಮಾನದಲ್ಲಿ ಪ್ರಯಾಣ ಮಾಡುವಾಗ ನೀ ಸಿಂಗಮ್ ಧಾನ ಸಾಂಗ್ ಅನ್ನು ಪದೇ ಪದೇ ಕೇಳುತ್ತಿರುತ್ತಾರೆ. ಆ ಹಾಡು ಎಂದರೆ ವಿರಾಟ್ಗೆ ತುಂಬಾ ಇಷ್ಟವಂತೆ. ಹೀಗಾಗಿಯೇ ಏರ್ಫೋನ್ ಹಾಕೊಂಡು ಒಂದೇ ಹಾಡನ್ನು ಪದೇ ಪದೇ ಕೇಳುತ್ತಿರುತ್ತಾರೆ.

ಅಬ್ಬಬ್ಬಾ! ವಿರುಷ್ಕಾ ಜೋಡಿಯ ಒಟ್ಟು ಸಂಪತ್ತು ಇಷ್ಟೊಂದಾ?

ನೀ ಸಿಂಗಮ್ ಧಾನ, ನಟ ಸಿಲಂಬರಸನ್ ಊರೂಫ್ ಸಿಂಬು ಅಭಿನಯದ ಪಾಥು ಥಾಲಾ ಚಿತ್ರದ ಹಾಡು. 2023ರಲ್ಲಿ ರಿಲೀಸ್ ಆಗಿ ಸಕ್ಸಸ್‌ ಕಂಡಿರುವ ಈ ಚಿತ್ರದ ನೀ ಸಿಂಗಮ್ ಧಾನ ವಿರಾಟ್ ಫೇವರೇಟ್‌ ಗೀತೆ. ಸಿದ್‌ ಶ್ರೀರಾಮ್‌ ಕಂಠದಲ್ಲಿ, ರೆಹಮಾನ್‌ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿತ್ತು. ನೀ ಸಿಂಗಮ್ ಧಾನ ಅಂದ್ರೆ 'ನೀವು ನಿಜವಾಗಿಯೂ ಸಿಂಹ' ಅಂದರ್ಥ. ಕೊಹ್ಲಿ ತಮ್ಮ ನೆಚ್ಚಿನ ಹಾಡನ್ನು ರಿವೀಲ್‌ ಮಾಡುತ್ತಿದ್ದಂತೆ ಫ್ಯಾನ್ಸ್‌ ಸಿಂಬು ತಮ್ಮ ಬಯೋಪಿಕ್‌ ಮಾಡೋದಿಕ್ಕೆ ಉತ್ತಮ ಎನ್ನುತ್ತಿದ್ದಾರೆ. 

ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸೂಕ್ತ ಎಂಬ ಚರ್ಚೆ ಶುರುವಾಗಿದೆ. 

ವಿರಾಟ್‌ ಕೊಹ್ಲಿ ಫಿಟ್ನೆಸ್‌, ಅವರ ಸ್ಟೈಲ್‌, ನೋಟವನ್ನು ಸಿಂಬು ಹೋಲುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ವಿರಾಟ್‌ ಬಯೋಪಿಕ್‌ ಪ್ಲಾನ್‌ ನಡೆದರೇ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್‌ ಎಂಬ ಮಾತು ಮುಂಬೈ ಗಲ್ಲಿಯಲ್ಲಿ ಕೇಳಿ ಬರ್ತಿದೆ. ಮುಂದೆ ವಿರಾಟ್‌ ಅನುಷ್ಕಾ ನಿರ್ಮಾಣ ಸಂಸ್ಥೆ ಆರಂಭಿಸಿ ಸಿನಿಮಾ ಶುರು ಮಾಡಿದಲ್ಲಿ ಸಿಂಬು ಅವರನ್ನು ಅಪ್ರೋಚ್‌ ಆದರು ಅಚ್ಚರಿಪಡುವ ಆಗಿಲ್ಲ.

ಪವನ್ ಕಲ್ಯಾಣ್ ಕಂಡುಕೊಂಡ ಮಹಾ ಔ‍ಷಧ..; ನೀವೂ ಪ್ರಯೋಗ ಮಾಡಿ ನೋಡ್ತೀರಾ..?!

ಕ್ರಿಕೆಟ್‌ನಲ್ಲಿ ವಿರಾಟ್‌, ಸಿನಿಮಾದಲ್ಲಿ ಸಿಂಬು ಸದ್ಯ ಮಿಂಚುತ್ತಿದ್ದಾರೆ. ಸಿಂಬು ಥಗ್ ಲೈಫ್ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ STR49, STR50 ಮತ್ತು 51 ಬ್ಯಾಕ್‌ ಟು ಬ್ಯಾಕ್‌ ಲೈನಪ್‌ ಮಾಡಿಕೊಂಡಿದ್ದಾರೆ ಸಿಂಬು. ವಿರಾಟ್ ಕೊಹ್ಲಿ ಜೀವನಚರಿತ್ರೆ ಸಿಲಂಬರಸನ್ ಮಾಡಿದರೆ ಅದು ಖಂಡಿತ ಹಬ್ಬವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ಮೊದಲು ಬಾಲಿವುಡ್‌ನಲ್ಲಿ ಅದೊಂದು ಟ್ರೆಂಡ್ ಆಗಿತ್ತು. ಕ್ರಿಕೆಟ್, ಫುಟ್‌ಬಾಲ್, ಓಲಂಪಿಕ್ ಗೋಲ್ಡ್ ಮೆಡಲಿಸ್ಟ್ ಸೇರಿದಂತೆ ಹಲವು ಖ್ಯಾತನಾಮರ ಬಯೋಪಿಕ್‌ಗಳನ್ನು ಸಿನಿಮಾ ಮಾಡುವುದು ಅಭ್ಯಾಸ ಆಗಿಹೋಗಿತ್ತು. ಆದರೆ, ಇತ್ತೀಚೆಗೆ ಆ ಟ್ರೆಂಡ್ ಸ್ವಲ್ಪ ಕಡಿಮೆ ಆಗಿದೆ. ಆದರೆ, ಇದೀಗ ಮತ್ತೆ ಅದೇ ಟ್ರೆಂಡ್ ವಾಪಸ್ ಬರುತ್ತಾ? ಈಗಲೇ ಹೇಳೋದು ಅಸಾಧ್ಯ.. ಆದರೆ, ಕ್ರಿಕೆಟ್ ಲೋಕದ ಕಿಂಗ್, ಮಹಾ ತಾರೆ ವಿರಾಟ್ ಕೊಹ್ಲಿ ಜೀವನಗಾಥೆ ತೆರೆಯ ಮೇಲೆ ಬರುತ್ತೆ ಎಂಬ ಸುದ್ದಿ ಕೇಳಿಯೇ ಹಲವಾರು ಕೊಹ್ಲಿ ಅಭಿಮಾನಿಗಳು ಪುಳಕ ಅನುಭವಿಸುತ್ತಿದ್ದಾರೆ. ಸದ್ಯವೇ ಈ ಚಿತ್ರವನ್ನು ತೆರೆಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ. 

ಕಿಚ್ಚ ಸುದೀಪ್ ಸಿನಿಮಾ ಶೂಟಿಂಗ್ ಸ್ಪಾಟ್‌ನಲ್ಲಿ ಟೈಟ್ ಸೆಕ್ಯೂರಿಟಿ..! ಯಾಕೆ ಇಷ್ಟೆಲ್ಲಾ ಬಂದೋಬಸ್ತ್..?

ಒಟ್ಟಿನಲ್ಲಿ, ವಿರಾಟ್ ಕೊಹ್ಲಿ ಇನ್ನೂ ಫಾರ್ಮ್‌ನಲ್ಲಿ ಇರುವಾಗಲೆ ಅವರ ಬಯೋಪಿಕ್ ತೆರೆಗೆ ಬರಲಿದೆ. ಈ ಸಂಗತಿ ಸ್ವತಃ 'ಕೊಹ್ಲಿ' ಸೇರಿದಂತೆ ಅವರ ಎಲ್ಲಾ ಅಭಿಮಾನಿಗಳಿಗೆ ಭಾರೀ ಖುಷಿಯ ಸಂಗತಿಯೇ ಸರಿ. ಆದರೆ, ಯಾವಾಗ ತೆರೆಗೆ ಬರಲಿದೆ ಎಂಬ ನಿಖರ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌