Latest Videos

ದರ್ಶನ್-ಪವಿತ್ರಾ ಪರಿಚಯ ಆಗಿದ್ದೆಲ್ಲಿ? ಸಂಜಯ್ ಸಿಂಗ್ ಜತೆ ಡಿವೋರ್ಸ್‌ಗೆ ನಟಿ ಕೊಟ್ಟ ಕಾರಣವೇನು?

By Contributor AsianetFirst Published Jun 14, 2024, 8:39 PM IST
Highlights

'ನಾನು ಉತ್ತರ ಪ್ರದೇಶದ ಹುಡುಗ. 2002ರಲ್ಲಿ ನಾನು ಬೆಂಗಳೂರಿಗೆ ಬಂದೆ. ಆಗ ನನಗೆ ಪವಿತ್ರಾ ಪರಿಚಯ ಆಗಿ ಮದುವೆಯಾದೆ. ನಾನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪವಿತ್ರಾ ಗೌಡಗೆ ನನಗೆ ಪರಿಚಯ ಆಯ್ತು. ಮದುವೆಯಾಗಿ 3 ವರ್ಷ..

ಸದ್ಯ ಕನ್ನಡ ನಾಡನ್ನು ತಲ್ಲಣಗೊಳಿಸಿರುವ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ (Renuka Swamy Murder Case) ಪೊಲೀಸ್ ವಿಚಾರಣೆ ಎದುರಿಸುತ್ತಿರುವ ನಟಿ ಹಾಗು ದರ್ಶನ್ (Challenging Star Darshan) ಸ್ನೇಹಿತೆ ಪವಿತ್ರಾ ಗೌಡ (Pavithra Gowda) ಮಾಜಿ ಪತಿ ಸಂಜಯ್ ಸಿಂಗ್ (Sanjay Singh) ಮಾತನಾಡಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತ 12 ವರ್ಷಗಳ ಹಿಂದೆ ಬೆಂಗಳೂರು ತೊರೆದು ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿರುವ ಸಂಜಯ್ ಸಿಂಗ್, ಪವಿತ್ರಾ ಗೌಡಗೆ ಡಿವೋರ್ಸ್ ನೀಡಿ ಸದ್ಯ ಸಿಂಗಲ್ ಆಗಿರುವವರು. ಅವರು ಪವಿತ್ರಾ ಗೌಡ ಬಗ್ಗೆ ಮಾತನಾಡಿದ್ದಾರೆ.

'ಮಗು ನೋಡಿಕೊಳ್ಳುವ ವಿಷಯದಲ್ಲಿ ನನಗೂ ಪವಿತ್ರಾ ಗೌಡಗೂ ಮನಸ್ತಾಪ ಬಂತು. ನಾನು ನನ್ನ ಐಟಿ ವೃತ್ತಿಯನ್ನು ತೊರೆಯಲು ಅಥವಾ ಕಾಂಪ್ರೊಮೈಸ್ ಆಗಲು ಸಿದ್ಧನಿರಲಿಲ್ಲ. ಹಾಗೇ, ಪವಿತ್ರಾ ಗೌಡ ಕೂಡ ಅವಳ ನಟಿಯಾಗುವ ಕನಸನ್ನು ಹಾಗೂ ಪ್ರಯತ್ನವನ್ನು ಬಿಡಲು ತಯಾರಿರಲಿಲ್ಲ. ಹೀಗಾಗಿ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಹದಗೆಡುತ್ತಾ ಹೋಯ್ತು. ದಿನಾಲೂ ಅದೇ ವಿಷಯಕ್ಕೆ ಜಗಳ ಆಗತೊಡಗಿತು. ಕೊನೆಗೆ, ಅದೇ ಸಂಗತಿ ನಮ್ಮಿಬ್ಬರ ಡಿವೋರ್ಸ್‌ಗೂ ಕಾರಣವಾಯ್ತು' ಎಂದಿದ್ದಾರೆ ಸಂಜಯ್ ಸಿಂಗ್.

'ಇರುವುದೊಂದೇ ಜೀವನ, ಚೆನ್ನಾಗಿ ಬದುಕಿ' ಅಂದ್ರು ಜೂ. ಎನ್‌ಟಿಆರ್‌; ಪಕ್ಕದಲ್ಲಿದ್ದ ರಾಮ್ ಚರಣ್ ಮಾಡಿದ್ದೇನು?

ಹೌದು, ಸಂಜಯ್ ಸಿಂಗ್ ಹೀಗೇ ಹೇಳಿದ್ದಾರೆ. ಕಾರಣ, ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಅವರು ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಪವಿತ್ರಾ ಗೌಡ ಅವರ ಮಾಜಿ ಗಂಡ. 2013ರಲ್ಲಿ ಪವಿತ್ರಾ ಗೌಡ ಹಾಗು ಸಂಜಯ್ ಸಿಂಗ್ ಅವರಿಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ತೆಗೆದುಕೊಂಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರಿಗೆ ಖುಷಿ ಎಂಬ ಮಗಳಿದ್ದಳು. ಬಳಿಕ ಪವಿತ್ರಾ ಗೌಡ ಅವರು ನಟಿಯಾಗಿ ಬೆಳೆದು ದರ್ಶನ್ ಸ್ನೇಹಿತೆ ಕೂಡ ಆಗಿದ್ದಾರೆ. ಆಕೆ ಹೇಳುವ ಪ್ರಕಾರ, ಆಕೆ ದರ್ಶನ್ ಅವರನ್ನು ಮದುವೆಯಾಗಿದ್ದಾರೆ. 

ಗರ್ಭಿಣಿಯಿದ್ದಾಗ ವ್ಯಾಯಾಮ ಮಾಡಿದ್ದೆ, ಗರ್ಭಪಾತವಾಯ್ತು; 'ಏನ್ ವರ್ಕೌಟ್' ಅಂತ ಬಿಡಿಸಿ ಹೇಳಿ ನಮಿತಾ ಅಂತಿದಾರಲ್ಲ!

'ನಾನು ಉತ್ತರ ಪ್ರದೇಶದ ಹುಡುಗ. 2002ರಲ್ಲಿ ನಾನು ಬೆಂಗಳೂರಿಗೆ ಬಂದೆ. ಆಗ ನನಗೆ ಪವಿತ್ರಾ ಪರಿಚಯ ಆಗಿ ಮದುವೆಯಾದೆ. ನಾನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪವಿತ್ರಾ ಗೌಡಗೆ ನನಗೆ ಪರಿಚಯ ಆಯ್ತು. ಮದುವೆಯಾಗಿ 3 ವರ್ಷ ಆದ ಮೇಲೆ ನಮಗೆ ಮಗಳು ಹುಟ್ಟಿದಳು. ಆಮೇಲೆ ಪವಿತ್ರಾ ಚಿತ್ರರಂಗಕ್ಕೆ ಕಾಲಿಟ್ಟಳು.

ರಾಕಿಂಗ್ ಸ್ಟಾರ್ ಯಶ್: ಹೀಯಾಳಿಸಿದವರ ಮುಂದೆ ಬೆಳೀಬೇಕು, ಹೊಗಳಿಸಿಕೊಳ್ಳಬೇಕು!

ಆಮೇಲೆ ನಮ್ಮಿಬ್ಬರ ಮಧ್ಯೆ ಮನಸ್ತಾಪ ಆಗಿ ನಾವಿಬ್ಬರೂ 1 ವರ್ಷ ದೂರ ಇದ್ದೆವು. ಈಗ 2 ವರ್ಷಕ್ಕೊಮ್ಮೆ ನಾನು ಮಗಳು ಖುಷಿ ಜೊತೆಗೆ ಮಾತನಾಡುತ್ತೇನೆ. ನನ್ನ ಬಳಿ ಪವಿತ್ರಾ ನಂಬರ್ ಇಲ್ಲ. ಅತ್ತೆ ಮಾವಗೆ ಪೋನ್ ಮಾಡಿದಾಗ ಮಗಳು ಇದ್ದಾಗ ಆಗ ಅವಳ ಬಳಿ ಮಾತನಾಡುತ್ತೇನೆ' ಎಂದಿದ್ದಾರೆ ಸಂಜಯ್ ಸಿಂಗ್. ನಟಿ ಪವಿತ್ರಾ ಗೌಡಗೆ ದರ್ಶನ್ ಪರಿಚಯವಾಗಿದ್ದು 'ಜಗ್ಗುದಾದಾ' ಸಿನಿಮಾ ಆಡಿಶನ್‌ನಲ್ಲಿ ಎನ್ನಲಾಗಿದೆ. 

ನಾಪತ್ತೆಯಾಗಿರೋ ದರ್ಶನ್ ಮ್ಯಾನೇಜರ್ ಏನ್ ಮಾಡಿದ್ರು; ಏನ್ ಆಗಿರ್ಬಹುದು ಅವ್ರ ಕಥೆ?

'ಗಂಡ ಹೆಂಡತಿ ಮಧ್ಯೆ ಜಗಳ, ಮನಸ್ತಾಪ ಇದ್ದೇ ಇರುತ್ತದೆ. ನಾನು, ದರ್ಶನ್ ಮದುವೆ ಆಗ್ಬೇಕು ಅಂದುಕೊಂಡಿದ್ದೇವೆ ಹೀಗಾಗಿ ನಿನ್ನಿಂದ ವಿಚ್ಚೇದನ ಬೇಕು ಅಂತ ಹೇಳಿ ಪವಿತ್ರಾಳೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಆಮೇಲೆ 2013ರಲ್ಲಿ ನಮ್ಮ ವಿಚ್ಛೇದನ ಆಯ್ತು. ಪವಿತ್ರಾ, ದರ್ಶನ್ ಮದುವೆಯಾಗಿದ್ದಾರಾ, ಇಲ್ಲವಾ ಅಂತ ನನಗೆ ಗೊತ್ತಿಲ್ಲ. ಕಳೆದ 12 ವರ್ಷಗಳಲ್ಲಿ ನಾನು ಮಗಳ ಜೊತೆ ಎರಡು ಬಾರಿ ಮಾತನಾಡಿದ್ದು, 2017ರಲ್ಲಿ ಬೆಂಗಳೂರಿಗೆ ಬಂದು ಮಗಳನ್ನು ಭೇಟಿ ಮಾಡಿದ್ದೆ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. 

ದರ್ಶನ್ ಗ್ಯಾಂಗ್ ಮೇಲೆ ಮತ್ತೊಂದು ಡೌಟ್, ಮೋರಿ ಪಾಲಾದ್ರಾ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್?

ಇನ್ನು ಕೊಲೆ ಕೇಸಿನಲ್ಲಿ ಪವಿತ್ರಾ ಸಿಕ್ಕಿಹಾಕಿಕೊಂಡು ವಿಚಾರಣೆ ಎದುರಿಸುತ್ತಿರುವ ಬಗ್ಗೆ ಹೇಳಿದಾಗ, ಸಂಜಯ್ ಸಿಂಗ್ 'ನನಗೆ ಇದನ್ನು ನಂಬಲಾಗುತ್ತಿಲ್ಲ. ಪವಿತ್ರಾ ಇಲಿ ಕಂಡರೂ ಹೆದರುತ್ತಿದ್ದಳು. ಹೀಗಾಗಿ ಆಕೆ ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಜೊತೆ ಪವಿತ್ರಾ ಇದ್ದಿರಬಹುದು ಅಷ್ಟೆ. ಪವಿತ್ರಾ ತುಂಬಾ ಸಾಫ್ಟ್‌, ಆದರೆ ಧೈರ್ಯವಂತೆಯೂ ಹೌದು. ಈಗ ನಾನು ಪವಿತ್ರಾ ಬಳಿ ಏನೂ ಮಾತನಾಡಿಲ್ಲ. ಅವಳು ಯಾವ ಸ್ಥಿತಿಯಲ್ಲಿದ್ದಾಳೆ ಅಂತ ನನಗೆ ಅರ್ಥವಾಗುತ್ತಿದೆ. 

ದೊಡ್ಡ ತಪ್ಪು ಮಾಡ್ಬಿಟ್ರು ವಿಜಯಲಕ್ಷ್ಮೀ, ಆವತ್ತು ಜಾಸ್ತಿ ಜೈಲೂಟ ಮಾಡ್ಸಿದಿದ್ರೆ ಇವತ್ತು ಹೀಗಾಗ್ತಿರ್ಲಿಲ್ಲ!

ಪವಿತ್ರಾ ಗೌಡ ತುಂಬಾ ಕೋಪಿಷ್ಠೆ, ಕೋಪ ಬಂದರೆ ಅವಳು ಏನು ಮಾಡ್ತಾಳೆ ಅಂತ ಅವಳಿಗೂ ಗೊತ್ತಿಲ್ಲ. ನನ್ನ ಅಣ್ಣ ತಮ್ಮಂದಿರು ವಿದೇಶದಲ್ಲಿದ್ದಾರೆ, ನಾನು ಈಗ ಉತ್ತರ ಪ್ರದೇಶದಲ್ಲಿರುವ ನಮ್ಮದೇ ಆದ ಶಾಲೆಯನ್ನು ನಡೆಸುತ್ತಿದ್ದೇನೆ' ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸಂಜಯ್ ಸಿಂಗ್ ಮಾತನಾಡಿದ್ದಾರೆ. ಒಟ್ಟಿನಲ್ಲಿ, ಇದೀಗ ನಟಿ ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಕೊಲೆ ಕೇಸನಿಲ್ಲಿ ಪೊಲೀಸ್ ವಿಚಾರಣೆ ಎದುರಿಸುತ್ತಿರುವ ಸಂಗತಿ ಆಕೆಯ ಮಾಜಿ ಪತಿಗೆ ಕೂಡ ತಿಳಿಯುವಂತಾಗಿದೆ. 

click me!