2021ರ ಸಿನಿಮಾದ ಮುಂದುವರಿದ ಭಾಗ 2024ರಲ್ಲಿ ಬಿಡುಗಡೆಯಾಗಿದ್ದು, ಪ್ರತಿ ಕ್ಷಣವೂ ರೋಚಕ ತಿರುವುಗಳಿಂದ ತುಂಬಿದೆ.ಈ ಚಿತ್ರ, ತ್ರಿಕೋನ ಪ್ರೇಮಕಥೆ, ಪೊಲೀಸ್ ತನಿಖೆ ಮತ್ತು ಹೊಸ ಸಸ್ಪೆನ್ಸ್‌ಗಳನ್ನು ಒಳಗೊಂಡಿದೆ.
ಒಂದು ಕ್ಷಣ ಫಾರ್ವರ್ಡ್ ಮಾಡಿದ್ರೂ ಈ ಸಿನ್ಮಾ ಅರ್ಥ ಆಗಲ್ಲ; ಪ್ರತಿ ಸೆಕೆಂಡ್‌ಗೂ ರೋಚಕ ತಿರುವುಗಳು
ಇಂದು ಒಂದು ಸಿನಿಮಾ ರಿಲೀಸ್ ಆದರೆ ನೋಡುಗರು ಹಲವು ನಿರೀಕ್ಷೆಗಳೊಂದಿಗೆ ಚಿತ್ರಮಂದಿರಕ್ಕೆ ಬರುತ್ತಾರೆ. ಆ ನಿರೀಕ್ಷೆಗಳನ್ನು ಚಿತ್ರ ಹುಸಿಗೊಳಿಸಿದ್ರೆ ಥಿಯೇಟರ್‌ನಿಂದ ಹೊರ ಬರುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಶೈಲಿಯಲ್ಲಿಯೇ ರಿವ್ಯೂವ್ ಬರೆದುಕೊಳ್ಳುತ್ತಾರೆ. ಹಾಗಾಗಿ ಚಿತ್ರದ ನಿರ್ದೇಶಕರು ಒಳ್ಳೆಯ ಕಥೆ ಜೊತೆ ಅದನ್ನು ತೋರ್ಪಡಿಸುವ ಕಲೆಯೂ ಅಚ್ಚುಕಟ್ಟಾಗಿ ಗೊತ್ತಿರಬೇಕು. ಇಂತಹ ಅದ್ಭುತ ಕಥಾ ಹಂದರವುಳ್ಳ ಸಿನಿಮಾ 2024ರಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಇದು 2021ರಲ್ಲಿ ಬಿಡುಗಡೆಗೊಂಡ ಚಿತ್ರದ ಮುಂದುವರಿದ ಭಾಗವಾಗಿದೆ. ಮೊದಲ ಭಾಗ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದ ಜನರು, ಎರಡನೇ ಭಾಗಕ್ಕೂ ಮೆಚ್ಚುಗೆ ಸೂಚಿಸಿದ್ದರು. ಈ ಚಿತ್ರದಲ್ಲಿ ವಿಕ್ರಾಂತ್ ಮೆಸ್ಸಿ, ಹರ್ಷವರ್ಧನ್ ರಾನೆ ಮತ್ತು ತಾಪ್ಸಿ ಪನ್ನು ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಇದರ ಮುಂದುವರಿದ ಭಾಗ ಆಗಸ್ಟ್-2024ರಲ್ಲಿ ಬಿಡುಗಡೆಯಾಗಿತ್ತು.
ಹೌದು, ಫಿರ್ ಆಯಿ ಹಸಿನಾ ದಿಲ್‌ರುಬಾ ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆಯಾಗಿತ್ತು. 2021ರಲ್ಲಿ ವಿಕ್ರಾಂತ್ ಮೆಸ್ಸಿ-ತಾಪ್ಸಿ ಪನ್ನು- ಹರ್ಷವರ್ಧನ್ ರಾನೆ ನಡುವಿನ ತ್ರಿಕೋನ ಪ್ರೇಮಕಥೆಯನ್ನು ಹೊಂದಿತ್ತು. ಪತ್ನಿ ತಾಪ್ಸಿ ಪನ್ನು ಮತ್ತೊಬ್ಬನ ಪ್ರೇಮದ ಬಲೆಯಲ್ಲಿ ಸಿಲುಕಿದ್ರೂ ಆಕೆಗಾಗಿ ತನ್ನ ಕೈಯನ್ನೇ ಕತ್ತರಿಸಿಕೊಳ್ಳುತ್ತಾನೆ. ತಮ್ಮಿಬ್ಬರ ಮಧ್ಯೆ ಬಂದಂತಹ ಸೋದರನನ್ನು ಹೇಗೆ ಕೊಲೆ ಮಾಡುತ್ತಾರೆ ಮತ್ತು ಅಲ್ಲಿಂದ ಇಬ್ಬರು ಹೇಗೆ ಪೊಲೀಸರ ತನಿಖೆಯಿಂದ ತಪ್ಪಿಸಿಕೊಳ್ಳುತ್ತಾರೆ? ಪೊಲೀಸರ ತನಿಖೆಯನ್ನು ಎದುರಿಸುವ ದೃಶ್ಯಗಳು ಅತ್ಯಂತ ಕುತೂಹಲಕಾರಿಯಾಗಿ ಕಂಡು ಬರುತ್ತವೆ. ಇನ್ನು ತಾಪ್ಸಿ ಪನ್ನು ಸಹ ಚಿತ್ರದಲ್ಲಿ ಅತ್ಯಂತ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಪೊಲೀಸ್ ತನಿಖೆ ಎದುರಿಸಿ, ಎಲ್ಲವೂ ಸುಖಾಂತ್ಯ ಆಗುತ್ತಿದ್ದಂತೆ ಹೊಸ ಸ್ಥಳದಲ್ಲಿ ಇಬ್ಬರು ಹೊಸ ಜೀವನ ಆರಂಭಿಸುತ್ತಾರೆ. ಅಲ್ಲಿಗೆ ಈ ಸಿನಿಮಾ ಮುಗಿಯುತ್ತದೆ.
ಮೂರು ವರ್ಷಗಳ ಬಳಿಕ ಇದರ ಮುಂದುವರಿದ ಭಾಗ 2024ರಲ್ಲಿ ಬಿಡುಗಡೆಯಾಗಿತ್ತು. ಹೊಸ ಜೀವನ ಆರಂಭಿಸಲು ಸಿದ್ಧತೆಯಲ್ಲಿರುವಾಗಲೇ ನಾಯಕ ಮತ್ತು ನಾಯಕಿ ಜೀವನದಲ್ಲಿ ಮತ್ತೊಬ್ಬನ ಎಂಟ್ರಿಯಾಗುತ್ತದೆ. ಸೈಕೋ ಆಗಿರುವ ವೈದ್ಯನಿಗೆ ನಾಯಕಿ ತಾಪ್ಸಿ ಮೇಲೆ ಪ್ರೇಮಾಂಕುರವಾಗುತ್ತದೆ. ಆದ್ರೆ ಆತನ ಮೋಹದ ಬಲೆಯಿಂದ ನಾಯಕಿ ಹೇಗೆ ಪಾರಾಗುತ್ತಾಳೆ ಎಂಬುವುದು ಚಿತ್ರದ ಒನ್ ಲೈನ್ ಕಥೆ. ಈ ಎಲ್ಲದರ ನಡುವೆ ಹಳೆಯ ಪ್ರಕರಣವೂ ಸಹ ಮುನ್ನೆಲೆಗೆ ಬರುತ್ತದೆ.
ಇದನ್ನೂ ಓದಿ: Auron Mein Kaha Dum Tha Movie Review:ಒಂದು ಮಾಗಿದ-ತ್ಯಾಗದ ಪ್ರೇಮಕಥೆ
ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಅದು ಪುಸ್ತಕಗಳು. ಪತ್ತೆದಾರಿಕೆ ಪುಸ್ತಕಗಳನ್ನು ಓದಿಯೇ ಅದರ ರೀತಿಯಲ್ಲಿಯೇ ಕಥೆಯನ್ನು ನಾಯಕ ಮತ್ತು ನಾಯಕಿ ರಚನೆ ಮಾಡುತ್ತಾರೆ. ನಟಿಯೂ ಪೊಲೀಸರ ಮುಂದೆಯೇ ಪುಸ್ತಕ ಲೇಖಕ ಪಂಡಿತ್ ಜೀಯ ಹೇಳಿಕೆಗಳನ್ನು ಉಲ್ಲೇಖಿಸುತ್ತಾರೆ. ಯಾರು ಈ ಪಂಡಿತ್ ಜೀ ಎಂದು ನೆಟ್ಟಿಗರು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವಿಕ್ಕಿ ಕೌಶಲ್ ಸೋದರ ಸನ್ನಿ ಕೌಶನ್ ಈ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.. ಮೊಸಳೆಗಳು ತುಂಬಿರೋ ನದಿಯಲ್ಲಿ ಧುಮುಕುವ ಮೂವರು ಅಲ್ಲಿಂದ ಹೇಗೆ ಪಾರಾಗುತ್ತಾರೆ ಎಂಬುವುದೇ ಚಿತ್ರದ ಬಿಗ್ ಸಸ್ಪೆನ್ಸ್. ಫಿರ್ ಆಯಿ ದಿಲ್ ರುಬಾ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದಾಗಿದೆ. ಐಎಂಡಿಬಿಯಲ್ಲಿ ಚಿತ್ರಕ್ಕೆ 5.8 ರೇಟಿಂಗ್ ನೀಡಲಾಗಿದೆ.
ಇದನ್ನೂ ಓದಿ: Kishkindha Kaandam: ಕಾಡಿನ ಒಂಟಿ ಮನೆಯಲ್ಲಿನ ರಹಸ್ಯಗಳ ರೋಚಕ ತಿರುವಿನ ಕಣ್ಣೀರು ತರಿಸೋ ಭಾವನಾತ್ಮಕ ಕಥೆ