ಒಂದು ಪಾಳು ಬಿದ್ದ ಮಾಲ್ ಇದೆ. ಅಲ್ಲಿ ಜನರೇ ಬರುತ್ತಿಲ್ಲ. ಇಷ್ಟು ದೊಡ್ಡ ಮಾಲು ಜನ ಇಲ್ಲದೆ ಬಿಕೋ ಎನ್ನುತ್ತಿರುವುದು ಯಾಕೆ ಎಂಬುದರ ಹಿಂದೆ ಒಬ್ಬನ ನೋವು, ಅಸಹಾಯಕನ ನೋವು, ಕಣ್ಣೀರು ಅಡಗಿರುತ್ತದೆ.
ಆರ್.ಕೆ
ನಂಬಿಕೆ, ಭಯ ಮತ್ತು ಅಸಹಾಯಕತೆ ಇವುಗಳ ಸುತ್ತ ಸಾಗುವ ‘ಮಾಂತ್ರಿಕ’ ಸಿನಿಮಾ ದೆವ್ವದ ಜಗತ್ತಿನೊಳಗೆ ಒಂದು ಸುತ್ತು ಹಾಕುತ್ತದೆ. ಇಲ್ಲಿ ದೆವ್ವ ಯಾರು, ಚಿತ್ರದ ನಾಯಕ ದೆವ್ವಗಳನ್ನು ಹುಡುಕಿಕೊಂಡು ಹೋಗುವುದು ಯಾಕೆ, ಇಷ್ಟಕ್ಕೂ ದೆವ್ವ ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ‘ಮಾಂತ್ರಿಕ’ ದರ್ಶನ ಮಾಡಿಕೊಳ್ಳಬಹುದು. ಕಾಣದೆ ಇರುವ ಆತ್ಮ ಮತ್ತು ದೆವ್ವಗಳ ಇರುವಿಕೆಯ ಸುತ್ತ ಒಂದು ತಾತ್ವಿಕ ಚರ್ಚೆಯನ್ನು ಮಾಡುವ ಚಿತ್ರವಿದು.
undefined
ಒಂದು ಪಾಳು ಬಿದ್ದ ಮಾಲ್ ಇದೆ. ಅಲ್ಲಿ ಜನರೇ ಬರುತ್ತಿಲ್ಲ. ಇಷ್ಟು ದೊಡ್ಡ ಮಾಲು ಜನ ಇಲ್ಲದೆ ಬಿಕೋ ಎನ್ನುತ್ತಿರುವುದು ಯಾಕೆ ಎಂಬುದರ ಹಿಂದೆ ಒಬ್ಬನ ನೋವು, ಅಸಹಾಯಕನ ನೋವು, ಕಣ್ಣೀರು ಅಡಗಿರುತ್ತದೆ. ಅದು ಏನು ಎಂಬುದು ಚಿತ್ರದ ತಿರುವಿನ ಪಾಯಿಂಟ್. ಬಹುತೇಕ ಚಿತ್ರವನ್ನು ಕಪ್ಪು ಬಿಳುಪಿನಲ್ಲಿ ಕಟ್ಟಿಕೊಟ್ಟಿರುವುದು, ಎಲ್ಲೂ ಅದ್ದೂರಿ ಮೇಕಿಂಗ್‌ನ ಮೊರೆ ಹೋಗದೆ ತುಂಬಾ ಸಹಜವಾಗಿ ಕತೆಯನ್ನು ತೆರೆ ಮೇಲೆ ತಂದಿರುವುದು ನಿರ್ದೇಶಕ ವ್ಯಾನ ವರ್ಣ ಜಮ್ಮುಲ ಹೆಗ್ಗಳಿಕೆ.
ಚಿತ್ರ : ಮಾಂತ್ರಿಕ
ತಾರಾಗಣ: ವ್ಯಾನ ವರ್ಣ ಜಮ್ಮುಲ, ರಾಧಿಕಾ ಮಾಲಿಪಾಟೀಲ, ಮೈಥಿಲಿ
ನಿರ್ದೇಶನ: ವ್ಯಾನ ವರ್ಣ ಜಮ್ಮುಲ
ರೇಟಿಂಗ್: 3
ಕೆಲವೇ ಪಾತ್ರಧಾರಿಗಳು, ತೀರಾ ಸಹಜ ಎನಿಸುವ ಸಂಭಾಷೆಗಳೇ ಚಿತ್ರದ ಜೀವಾಳವಾಗಿಸಿಕೊಂಡಿದ್ದು, ದೆವ್ವ, ಆತ್ಮ ಮತ್ತು ನಿಗೂಢ ಜಗತ್ತಿನ ಬಗ್ಗೆ ಅಥವಾ ಗೋಸ್ಟ್ ಹಂಟಿಂಗ್ ಕುರಿತು ಕುತೂಹಲ ಇರುವವರಿಗೆ ಆಸಕ್ತಿ ಮೂಡಿಸುವ ಸಿನಿಮಾ ಇದು. ಹಿನ್ನೆಲೆ ಸಂಗೀತ ಮತ್ತಷ್ಟು ತೀವ್ರವಾಗಿದ್ದರೆ ಸೊಗಸಾಗಿರುತ್ತಿತ್ತು. ಅನಿಲ್ ಆಂಟೋನಿ ಹಾಗೂ ರಮೇಶ್ ಮರ‍್ರಿಪಲ್ಲಿ ನೈಜತೆಯ ಛಾಯಾಗ್ರಾಹಣ ಕತೆಗೆ ಪೂರಕವಾಗಿ ಮೂಡಿಬಂದಿದೆ.