
ಆರ್.ಕೇಶವಮೂರ್ತಿ
ಆನ್‌ಲೈನ್ ಗೇಮ್‌ಗೆ ಅಡಿಕ್ಟ್ ಆಗಿರುವ ಯುವಕ, ಪ್ರೀತಿ ಹೆಸರಿನಲ್ಲಿ ನಡೆಯುವ ವಂಚನೆಯ ಈ ಚಿತ್ರವನ್ನು ನಿರ್ದೇಶಕ ಗಂಗಾಧರ್ ಸಾಲಿಮಠ ಕ್ರೈಮ್ ನೆರಳಿನಲ್ಲಿ ನಿಲ್ಲಿಸುತ್ತಾರೆ. ಹೀಗಾಗಿ ‘ಗ್ರೇ ಗೇಮ್ಸ್’ ಚಿತ್ರ ಮೇಲ್ನೋಟಕ್ಕೆ ಮೇಟಾವರ್ಸ್ ಗೇಮ್ ಜಗತ್ತಿಗೆ ಅಂಟಿಕೊಂಡವನ ಕತೆ ಎನಿಸಿದರೂ ಇಲ್ಲಿ ಮಾನಸಿಕ ತಜ್ಞರೊಬ್ಬರ ಕತೆ, ಹಣದ ಆಸೆಗೆ ಬಿದ್ದ ಹುಡುಗಿಯೊಬ್ಬಳ ಅವಾಂತರ, ಸ್ಟಾರ್ ನಟಿಯ ಖಿನ್ನತೆ, ಭ್ರಮೆಯಲ್ಲಿರುವ ಯುವಕ, ಮಗನನ್ನು ರಕ್ಷಿಸಿಕೊಳ್ಳಲು ತಾಯಿಯೊಬ್ಬಳು ಕೊಡುವ ಸುಪಾರಿ ಕಿಲ್ಲಿಂಗ್... ಹೀಗೆ ಹಲವು ಆಸಕ್ತಿಕರ ವಿಷಯಗಳು ತೆರೆ ಮೇಲೆ ತೆರೆದುಕೊಳ್ಳುತ್ತವೆ.
ಹುಡುಗಿಯೊಬ್ಬಳು ಆನ್‌ಲೈನ್‌ನಲ್ಲಿ ಗೇಮ್ ಆಡುವಾಗ ರೆಡ್ ಹಂಟರ್ ಹೆಸರಿನ ಶತ್ರುನನ್ನು ಸಾಯಿಸುತ್ತಾಳೆ. ಅನಂತರ ಹಲವಾರು ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಪೊಲೀಸರು ತನಿಖೆಗೆ ಇಳಿದಾಗ ಘಟನೆಯ ಸುತ್ತ ಮತ್ತಷ್ಟು ಸಂಗತಿಗಳು ಬೆಳಕಿಗೆ ಬರುತ್ತದೆ. ಅದೇನು ಎಂಬುದನ್ನು ತೆರೆ ಮೇಲೆ ನೋಡಬೇಕು.
ಚಿತ್ರ: ಗ್ರೇ ಗೇಮ್ಸ್
ತಾರಾಗಣ: ವಿಜಯ್ ರಾಘವೇಂದ್ರ, ಭಾವನ ರಾವ್, ಶ್ರುತಿ ಪ್ರಕಾಶ್, ಜೈ, ಅಶ್ವಿನ್ ಹಾಸನ್, ಇಶಿತಾ, ಅಪರ್ಣ, ರವಿ ಭಟ್
ನಿರ್ದೇಶನ: ಗಂಗಾಧರ್ ಸಾಲಿಮಠ
ರೇಟಿಂಗ್: 3
Jog 101 Review ಜೋಗದ ಚಂದ ಕಟ್ಟಿಕೊಡುವ ಸಸ್ಪೆನ್ಸ್ ಥ್ರಿಲ್ಲರ್
ಚಿತ್ರದ ನಿರೂಪಣೆಯಲ್ಲಿ ಇನ್ನೂ ಏನೋ ಬೇಕು ಅನಿಸುತ್ತದೆ. ಮನಶಾಸ್ತ್ರಜ್ಞನ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರದ್ದು ಸ್ಥಿರ ನಟನೆ. ಅವರ ಅಕ್ಕನ ಮಗ ಜೈ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಮೊದಲ ಚಿತ್ರದಲ್ಲೇ ತಾನು ಭವಿಷ್ಯದ ನಟ ಎಂಬುದನ್ನು ನಿರೂಪಿಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಹಾಕಿದ್ದಾರೆ. ಶ್ರುತಿ ಪ್ರಕಾಶ್ ಅವರ ಪಾತ್ರ ಚಿಕ್ಕದಾದರೂ ನೆನಪಿನಲ್ಲಿ ಉಳಿಯುತ್ತದೆ. ಮಾಡ್ರನ್ ಹುಡುಗಿಯಾಗಿ ಇಶಿತಾ ಗ್ಲಾಮರ್ ಡಾಲ್ ಆಗಿ ಮಿಂಚಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.