Toss Movie Review: ಅಮ್ಮನ ಸೆಂಟಿಮೆಂಟ್, ರಂಗಭೂಮಿ ಸಂಬಂಧ, ಅಪ್ಪನ ಪ್ರೀತಿಯಲ್ಲಿ 'ಟಾಸ್'

Published : Sep 19, 2026, 03:09 PM IST
Toss Kannada Movie

ಸಾರಾಂಶ

‘ಟಾಸ್’ ಸಿನಿಮಾ ವಿಮರ್ಶೆ: ಅರ್ಜುನ್ ದೇವ್ ನಿರ್ದೇಶನದ ‘ಟಾಸ್’ ಚಿತ್ರದಲ್ಲಿ ರಂಗಭೂಮಿ ಕಲಾವಿದನ ಬದುಕು, ಅಪ್ಪ-ಮಗನ ಬಾಂಧವ್ಯ, ಅಮ್ಮನ ಸೆಂಟಿಮೆಂಟ್ ಮತ್ತು ಕಮರ್ಷಿಯಲ್ ಅಂಶಗಳನ್ನು ಪರಿಣಾಮಕಾರಿಯಾಗಿ ಬೆಸೆಲಾಗಿದೆ.

ರಾಜೇಶ್ ಶೆಟ್ಟಿ

‘ಅಪ್ಪನಿಗೆ ಯಾರಾದರೂ ತೊಂದರೆ ಕೊಟ್ಟರೆ ಬಿಡಬೇಡ ಮಗಾ’ ಎಂದು ಅಮ್ಮ ಹೇಳಿದ ಮಾತನ್ನು ಅಕ್ಷರಶಃ ಪಾಲಿಸುವ ಮಗನ ಕತೆ ಇದು. ಅದಕ್ಕಿಂತ ಹೆಚ್ಚಾಗಿ ರಂಗಭೂಮಿಗೆ ತನ್ನೆಲ್ಲವನ್ನೂ ಧಾರೆ ಎರೆದ ಒಬ್ಬ ಕಲಾವಿದನ ಮತ್ತು ಅವನ ಕುಟುಂಬದ ಕತೆ ಇದು.

ರಂಗಭೂಮಿ ಕಲಾವಿದ ಇಲ್ಲಿ ಕೇಂದ್ರ. ಉಳಿದ ಪಾತ್ರಗಳೆಲ್ಲಾ ಈ ಕೇಂದ್ರದ ಸುತ್ತಲೇ ಸುತ್ತುತ್ತವೆ. ರಂಗಭೂಮಿ ಕಲಾವಿದರ ಬವಣೆ ಹೇಳುತ್ತಲೇ ತಂದೆ-ಮಗನ ಬಾಂಧವ್ಯ ಕಟ್ಟಿಕೊಡುವುದು ಈ ಸಿನಿಮಾದ ಹೆಗ್ಗಳಿಕೆ. ಅಮ್ಮನ ಸೆಂಟಿಮೆಂಟ್, ರಂಗಭೂಮಿ ಸಂಬಂಧ, ಅಪ್ಪನ ಪ್ರೀತಿ ವಿಚಾರಗಳ ಜೊತೆಗೆ ಕಮರ್ಷಿಯಲ್ ಅಂಶವನ್ನು ಅತ್ಯಂತ ಸಶಕ್ತವಾಗಿ ಹೆಣೆದಿದ್ದಾರೆ. ಮತ್ತು ಈ ಕತೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಅರ್ಜುನ್ ದೇವ್.

ಇದು ಭಾವನಾ ಜಗತ್ತು ಮತ್ತು ಕುತೂಹಲಕರ ಅಂಶಗಳು ಎರಡನ್ನೂ ಸೇರಿಸಿ ರೂಪಿಸಿರುವ ಒಂದು ಅಪ್ಪಟ ಕಮರ್ಷಿಯಲ್ ಸಿನಿಮಾ. ಕಮರ್ಷಿಯಲ್ ಸಿನಿಮಾಗೆ ಏನೆಲ್ಲಾ ಅಂಶಗಳು ಬೇಕೋ ಅವನ್ನೆಲ್ಲಾ ಅತ್ಯಂತ ಶ್ರದ್ಧೆಯಿಂದ ಪೋಣಿಸಿರುವ ನಾಯಕ, ನಿರ್ದೇಶಕ ಅರ್ಜುನ್ ದೇವ್‌ಗೆ ಎರಡೂ ವಿಭಾಗಗಳಲ್ಲಿ ಮೆಚ್ಚುಗೆ ಸಲ್ಲಬೇಕು. ಸಾಮಾನ್ಯವಾಗಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನವೀನ್ ಡಿ. ಪಡೀಲ್ ಇಲ್ಲಿ ಅತ್ಯಂತ ಭಾವನಾತ್ಮಕವಾಗಿ ನಟಿಸಿ ಹೃದಯ ಗೆಲ್ಲುತ್ತಾರೆ.

ಚಿತ್ರ: ಟಾಸ್

ನಿರ್ದೇಶನ: ಅರ್ಜುನ್ ದೇವ್

ತಾರಾಗಣ: ಅರ್ಜುನ್ ದೇವ್, ಸುತೇಜ್ ಶೆಟ್ಟಿ, ನವೀನ್‌ ಡಿ. ಪಡೀಲ್, ಗರುಡರಾಮ್, ಬಾಲಾಜಿ ಮನೋಹರ್

ರೇಟಿಂಗ್: 3

ನಾಯಕಿ ಸುತೇಜ್ ಶೆಟ್ಟಿ, ಖಳ ನಟ ಗರುಡಾರಾಮ್, ಪೋಷಕ ಪಾತ್ರಧಾರಿಗಳಾದ ಬಾಲಾಜಿ ಮನೋಹರ್, ದೇವದಾಸ್ ಕಾಪಿಕಾಡ್, ಶೋಭರಾಜ್, ಚೈತ್ರಾ ಶೆಟ್ಟಿ, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ ಚಿತ್ರದ ಘನತೆ ಹೆಚ್ಚಿಸಿದ್ದಾರೆ. ಮಣಿಕಾಂತ್‌ ಕದ್ರಿಯವರ ಸಂಗೀತ ಈ ಚಿತ್ರದ ಸೊಗಸನ್ನು ಮತ್ತಷ್ಟು ಹೆಚ್ಚು ಮಾಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

City Lights review: ಆ್ಯಕ್ಷನ್‌ಗೆ ಕೊರತೆಯಿಲ್ಲ… ಆದ್ರೆ ಕಥೆಯಲ್ಲಿ ಹೊಸತನವಿಲ್ಲ! ದುನಿಯಾ ವಿಜಯ್ ಈ ಬಾರಿ ಎಡವಿದ್ದೆಲ್ಲಿ?
ಬಿಡುಗಡೆಯಾಗಿ 6 ವರ್ಷದ ನಂತ್ರ ಸದ್ದು ಮಾಡ್ತಿದೆ ಮಲಯಾಳಂ ಕ್ರೈಮ್ ಥ್ರಿಲ್ಲರ್ ಸಿನಿಮಾ