The Kerala Story Twitter Review: ವಿವಾದಾತ್ಮಕ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಹೇಳಿದ್ದೇನು?

Published : May 05, 2023, 10:50 AM ISTUpdated : May 05, 2023, 10:55 AM IST
The Kerala Story Twitter Review: ವಿವಾದಾತ್ಮಕ ಸಿನಿಮಾ ವೀಕ್ಷಿಸಿ ಪ್ರೇಕ್ಷಕರು ಹೇಳಿದ್ದೇನು?

ಸಾರಾಂಶ

The Kerala Story Twitter Review: ವಿವಾದಾತ್ಮಕ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಮರ್ಶೆ ತಿಳಿಸಿದ್ದಾರೆ. 

ಭಾರಿ ವಿವಾದ ಸೃಷ್ಟಿಮಾಡಿದ್ದ ದಿ ಕೇರಳ ಸ್ಟೋರಿ ಸಿನಿಮಾ ಕೊನೆಗೂ ರಿಲೀಸ್ ಆಗಿದೆ. ದೇಶದಾದ್ಯಂತ ದಿ ಕೇರಳ ಸ್ಟೋರಿ ಸಿನಿಮಾ ತೆರೆಗೆ ಬಂದಿದ್ದಾರೆ. ಸಿನಿಮಾ ರಿಲೀಸ್‌ಗೆ ಕೇರಳದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್‌ಗೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಕೋರ್ಟ್ ನಿರಾಕರಿಸುವ ಮೂಲಕ ‘ದಿ ಕೇರಳ ಸ್ಟೋರಿ’ ಸಿನಿಮಾ ರಿಲೀಸ್‌ಗೆ ಅಸ್ತು ಎಂದಿತ್ತು. ಒಂದಿಷ್ಟು ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ದಿ ಕೇರಳ ಸ್ಟೋರಿ ತೆರೆಗೆ ಬಂದಿದೆ. ಆದರೆ ಕೇರಳದಲ್ಲಿ ಅನೇಕ ಶೋಗಳು ರದ್ದಾಗಿವೆ ಎನ್ನುವ ಮಾಹಿತಿ ಕೂಡ ಇದೆ. ಇನ್ನೂ ಕರ್ನಾಟಕದಲ್ಲೂ ಕೇೇರಳ ಸ್ಟೋರಿ ಅನೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. 

ಸಿನಿಮಾದಲ್ಲಿ ಬಾಲಿವುಡ್ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆಲಸ ಹುಡುಕಿ ಬೇರೆ ದೇಶಗಳಿಗೆ ಹೋಗುವ ಕೇರಳದ ಅನೇಕ ಯುವತಿಯರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಬ್ರೈನ್ ವಾಶ್ ಮಾಡಲಾಗುತ್ತದೆ ಹಾಗೂ ಮತಾಂತರದ ಬಗ್ಗೆ ಈ ಸಿನಿಮಾದಲ್ಲಿ ತೋರಸಲಾಗಿದೆ ಎಂದು ಅನೇಕರು ವಿರೋಧ ವ್ಯಕ್ತ ಪಡಿಸಿದ್ದರು. ವಿರೋಧದ ನಡುವೆಯೂ ತೆರೆಗೆ ಬಂದ ಸಿನಿಮಾ ನೋಡಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿದ್ದಾರೆ. ಕೆಲವರು ಇದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಹಾಗೆ ಇದೆ ಎಂದು ಹೇಳುತ್ತಿದ್ದಾರೆ. 

'ದಿ ಕೇರಳ ಸ್ಟೋರಿ ವಿಮರ್ಶೆ, ತುಂಬಾ ಪ್ರಭಾವ ಬೀರುವ ಸಿನಿಮಾ. ಆದರೆ ಎಷ್ಟು ನಿಜ ಮತ್ತು ಎಷ್ಟು ಅಜೆಂಡ ಎನ್ನುವುದು ಗೊತ್ತಿಲ್ಲ'  ಎಂದು ಹೇಳಿದ್ದಾರೆ.

'ದಿ ಕೇರಳ ಸ್ಟೋರಿ ತುಂಬಾ ಚೆನ್ನಾಗಿದೆ.  ಪ್ರತಿಯೊಬ್ಬ ವಿದ್ಯಾರ್ಥಿಗಳು ನೋಡಬೇಕಾದ ಸಿನಿಮಾ. ಎಲ್ಲಾ ಶಾಲೆ ಮತ್ತು ಕಾಲೇಜುಗಳಲ್ಲಿ ಈ ಸಿನಿಮಾ ತೋರಿಸಬೇಕು' ಎಂದು ಮತ್ತೋರ್ವರು ಹೇಳಿದ್ದಾರೆ.  

The Kerala Story: ಮಸೀದಿಯಲ್ಲಿ ಹಿಂದೂ ವಿವಾಹ ವಿಡಿಯೋ ಶೇರ್​ ಮಾಡಿದ A.R. Rahman

'ಕೇರಳ ಸ್ಟೋರಿ ಧಾರ್ಮಿಕ ಉಪದೇಶದ ಅಪಾಯಗಳ ಕುರಿತಾದ ಚಲನಚಿತ್ರ. ಅದರ ಪ್ರತಿಯೊಂದು ದೃಶ್ಯವನ್ನು ತನ್ನ ಪ್ರೇಕ್ಷಕರ ಬ್ರೈನ್ ವಾಶ್ ಮಾಡಲು ಮೀಸಲಿಡುತ್ತದೆ' ಎಂದು ಹೇಳಿದ್ದಾರೆ.

The Kerala Story ಮನಸ್ಸನ್ನು ಕದಡುವ ಸಿನಿಮಾ. ಇದು ದ್ವೇಷ ಮತ್ತು ಅಸಂಗತತೆಯನ್ನು ಹರಡುತ್ತಿದೆ. ಇದು ಅಪಾಯಕಾರಿ ಹಿಂಸಾತ್ಮಕ, ದೇಶದಲ್ಲಿ ಕ್ರೌರ್ಯವನ್ನು ಹರಡುವ ಉದ್ದೇಶದಿಂದ ಪ್ರಚೋದನಕಾರಿ ದೃಶ್ಯಗಳು ತುಂಬಿದೆ. ಸೆನ್ಸಾರ್‌ ಬೋರ್ಡ್‌ ಆಫ್‌ ಫಿಲ್ಮ್‌ ಸರ್ಟಿಫಿಕೇಶನ್‌ ಎ ಸರ್ಟಿಫಿಕೇಟ್‌ ಸಹಿತ ಇದನ್ನು ಪಾಸು ಮಾಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಬೇಜವಾಬ್ದಾರಿ' ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ