
ಆರ್‌ಕೆ
ಯಾವ ಹುಡುಗಿಯೂ ಸಿಗದೆ ಮದುವೆ ಆಗದಿರುವ ನಾಯಕ, ಬಂದ ಹುಡುಗರನ್ನು ರಿಜೆಕ್ಟ್ ಮಾಡುತ್ತಿರುವ ನಾಯಕಿ. ಈ ಇಬ್ಬರಿಗೂ ಆನ್‌ಲೈನ್‌ನಲ್ಲಿ ಮದುವೆ ಮಾಡಿಸುವ ನಾಯಕಿಯ ಸೋದರ. ಈ ಮೂವರ ನಡುವೆ ಸಾಗುವ ಕತೆಯೇ ‘ಆನ್‌ಲೈನ್ ಮದುವೆ ಆಫ್‌ಲೈನ್ ಶೋಭನ’. ಆನ್‌ಲೈನ್‌ನಲ್ಲಿ ಸಂಬಂಧ ಕುದುರಿಸಿಕೊಂಡು ಆಫ್‌ಲೈನ್‌ನಲ್ಲಿ ಶೋಭನ ಮಾಡಿಕೊಳ್ಳುವುದಕ್ಕೆ ನಾಯಕ ಒದ್ದಾಡುತ್ತಾನೆ. ನಾಯಕಿಗೆ ಸಂಸಾರಕ್ಕಿಂತ ಧಾರಾವಾಹಿಗಳೇ ಹೆಚ್ಚಾಗಿರುತ್ತದೆ ಎಂಬುದನ್ನು ಯಾವ ಮ್ಯಾಜಿಕ್ ಇಲ್ಲದೆ ತೆರೆ ಮೇಲೆ ನಿರೂಪಿಸಿದ್ದಾರೆ ನಿರ್ದೇಶಕ ವೇಂಪಲ್ಲಿ ಬಾವಾಜಿ.
ONTY BUNTY LOVE STORY REVIEW: ಲವಲವಿಕೆ, ವಿಷಾದ ಬೆರೆತಿರುವ ತಾರುಣ್ಯ ಕಥನ
ತಾರಾಗಣ: ಜಗ್ಗಪ್ಪ, ಸುಶ್ಮಿತಾ, ಸೀರುಂಡೆ ರಘು
ನಿರ್ದೇಶನ: ವೇಂಪಲ್ಲಿ ಬಾವಾಜಿ
ಇದೊಂದು ಹಾಸ್ಯ ಪ್ರಧಾನ ಸಿನಿಮಾ ಎಂದು ಹೇಳಿಕೊಂಡಿದ್ದರೂ ಬಿದ್ದುಬಿದ್ದು ನಗುವಂತಹ ಹಾಸ್ಯಕ್ಕಾಗಿ ಸುಮಾರು ಹೊತ್ತು ಕಾಯಬೇಕು. ಕಡೆಗೂ ಹಾಸ್ಯ ಬರುತ್ತದೆ. ಆದರೆ ಬರುವಾಗ ಕೊಂಚ ತಡವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಮಾಡಿಕೊಂಡು ಜನಪ್ರಿಯರಾಗಿದ್ದೇವೆ ಎನ್ನುವ ಭ್ರಮೆಯಲ್ಲಿದ್ದವರನ್ನು ಒಂದು ಕಡೆ ಸೇರಿಸಿ ಈ ಸಿನಿಮಾ ಮಾಡಿದಂತಿದೆ. ಹಾಗಾಗಿ ಇಲ್ಲಿ ಮಾತು ಪ್ರಧಾನವಾಗಿದೆ. ಮಾತಲ್ಲಿಯೇ ನಗಿಸಲು ಪ್ರಯತ್ನ ಪಡುತ್ತದೆ.
Darshan Kaatera Review: ಕತೆಯೆಂಬ ಬೆಂಕಿಯಲ್ಲಿ ಕಾದು ಮಿರುಗುವ ಕಾಟೇರ
ಹರಟೆ ಪ್ರಮುಖ ಪಾತ್ರ ವಹಿಸುವುದರಿಂದ ಕತೆ ಕೊಂಚ ನಗಣ್ಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.