Onty Bunty Love Story Review: ಲವಲವಿಕೆ, ವಿಷಾದ ಬೆರೆತಿರುವ ತಾರುಣ್ಯ ಕಥನ

By Kannadaprabha News  |  First Published Jan 6, 2024, 9:22 AM IST

ಯತೀಶ್ ಪನ್ನಸಮುದ್ರ, ವೈಭವ್, ರಾಘವೇಂದ್ರ, ಶ್ವೇತಾ ಭಟ್, ಶ್ರುತಿ ಚಂದ್ರಶೇಖರ್ ನಟನೆಯ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? 


ಆರ್‌.ಎಸ್‌.

ತಾರುಣ್ಯ ಕಾಲದ ಸ್ನೇಹದ ತಮಾಷೆ, ಪ್ರೇಮದ ಲವಲವಿಕೆ ಮತ್ತು ವಿಷಾದ ಪೂರ್ಣ ಕ್ಷಣಗಳನ್ನು ಕಟ್ಟಿಕೊಡುವ ಹಂಬಲದ ವಿಶಿಷ್ಟ ಪ್ರಯತ್ನ ಈ ಸಿನಿಮಾ. ಇಲ್ಲಿ ಸ್ನೇಹಿತರಿದ್ದಾರೆ, ಪ್ರೇಮಿಗಳಿದ್ದಾರೆ, ಬದುಕಿನಲ್ಲಿ ಏನು ಮುಖ್ಯ ಎಂದು ತಿಳಿಯದಿರುವ ಗೊಂದಲದ ವ್ಯಕ್ತಿಗಳಿದ್ದಾರೆ ಮತ್ತು ಅವರ ಮಧ್ಯೆಯೂ ಜೀವನದ ತಿರುವಿನಲ್ಲಿ ಗಂಭೀರತೆಯನ್ನು ದಕ್ಕಿಸಿಕೊಂಡವರಿದ್ದಾರೆ.

Tap to resize

Latest Videos

ನಿರ್ದೇಶನ: ಯತೀಶ್ ಪನ್ನಸಮುದ್ರ

ತಾರಾಗಣ: ಯತೀಶ್ ಪನ್ನಸಮುದ್ರ, ವೈಭವ್, ರಾಘವೇಂದ್ರ, ಶ್ವೇತಾ ಭಟ್, ಶ್ರುತಿ ಚಂದ್ರಶೇಖರ್

Salaar Review ಹಿಂಸೆ ತುಂಬಿದ ಜಗತ್ತಿನ ಸ್ನೇಹ ಬಾಂಧವ್ಯದ ಕಥನ

ಇದು ಹೊಸ ತಂಡವೊಂದು ಸೇರಿ ಮಾಡಿರುವ ಸಿನಿಮಾ. ಹಾಗಾಗಿ ಇಲ್ಲಿ ತಾರುಣ್ಯದ ಕತೆಯನ್ನು ವಿಶಿಷ್ಟವಾಗಿ ಮತ್ತು ತಾಕುವ ರೀತಿಯಲ್ಲಿ ಹೇಳಬೇಕು ಎಂಬ ಹಂಬಲ ಕಾಣಿಸುತ್ತದೆ. ಅದೇ ಈ ಸಿನಿಮಾದ ವಿಶೇಷತೆ. ಮೊದಲಾರ್ಧದಲ್ಲಿ ತಮಾಷೆ, ಪ್ರೇಮದ ಮೂಲಕ ಕತೆ ಹೇಳುವ ನಿರ್ದೇಶಕರು ದ್ವಿತೀಯಾರ್ಧ ಬರುವ ಹೊತ್ತಿಗೆ ಚಿತ್ರಕತೆಯಲ್ಲಿ ಗಂಭೀರತೆ ತಂದಿದ್ದಾರೆ. ಜೀವನ ಪಾಠ ಹೇಳಿದ್ದಾರೆ. ಆ ಮೂಲಕ ತಮಾಷೆ ಜೊತೆ ವಿಷಾದ ಸೇರಿಸಿ ಅರ್ಥಪೂರ್ಣತೆ ಒದಗಿಸಿದ್ದಾರೆ.

ಇಲ್ಲಿ ಯುವಜನತೆಯ ತೊಳಲಾಟವಿದೆ. ಗೊಂದಲವಿದೆ. ಗುರಿಯೇ ಮುಖ್ಯ ಎಂಬ ಸಂದೇಶವೂ ಇದೆ. ಯೌವನದಲ್ಲಿ ಪ್ರೀತಿ, ಖುಷಿ ಕೊಟ್ಟರೆ ಅನಂತರದ ಬದುಕು ಕಠಿಣ ಹಾದಿಯನ್ನು ಪರಿಚಯಿಸುತ್ತದೆ ಎಂಬುದನ್ನು ನಿರ್ದೇಶಕರು ಮನರಂಜನೆ ಮೂಲಕವೇ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಇದೊಂದು ಸಂದೇಶ ಭರಿತ ಸ್ಫೂರ್ತಿದಾಯಕ ಸಿನಿಮಾ ಕೂಡ ಹೌದು.

DARSHAN KAATERA REVIEW: ಕತೆಯೆಂಬ ಬೆಂಕಿಯಲ್ಲಿ ಕಾದು ಮಿರುಗುವ ಕಾಟೇರ

ಯತೀಶ್ ಪನ್ನಸಮುದ್ರ, ವೈಭವ್, ರಾಘವೇಂದ್ರ, ಶ್ವೇತಾ ಭಟ್, ಶ್ರುತಿ ಚಂದ್ರಶೇಖರ್ ಎಂಬ ಯುವ ಪ್ರತಿಭೆಗಳು ನಟನಾ ಪ್ರತಿಭೆ ಕಾಣಿಸಿರುವುದು ಚಿತ್ರದ ಮತ್ತೊಂದು ವಿಶೇಷತೆ.

click me!