
- ರಾಜ್
ಒಬ್ಬ ಅಸಹಾಯಕ ಮನುಷ್ಯನ ನೆರವಿಗೆ ನಿಲ್ಲುವ ಒಳ್ಳೆಯ ದೆವ್ವಗಳ ಕತೆ ಇದು. ಆ ಒಳ್ಳೆಯ ದೆವ್ವಗಳ ಆಸೆ ಪೂರೈಸಲು ನಿಲ್ಲುವ ಒಬ್ಬ ಒಳ್ಳೆಯ ಹುಡುಗನ ಕತೆ ಇದು. ಅವನ ಹೆಸರ ಲಕ್ಕಿ. ಆದರೆ ಅವನು ಹುಟ್ಟಿದ ಮೇಲೆ ನಡೆದಿದ್ದೆಲ್ಲವೂ ದುರಂತವೇ ಎಂದು ಅವನ ತಂದೆ ನಂಬಿಕೊಂಡಿರುತ್ತಾರೆ. ಆ ಕಾರಣಕ್ಕೆ ಅವನು ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುವಲ್ಲಿಗೆ ಸಿನಿಮಾ ಆರಂಭ. ನಂತರ ಅವನಿಗೆ ದೆವ್ವಗಳು ಸಿಕ್ಕಿ ಮುಂದಿನ ದಾರಿಯೇ ಬೇರೆಯಾಗುತ್ತದೆ.
ಸೃಜನ್ ಲೋಕೇಶ್ ತಮ್ಮ ಚೊಚ್ಛಲ ನಿರ್ದೇಶನದ ಚಿತ್ರಕ್ಕೆ ಮನರಂಜನೆ ಒದಗಿಸುವ ಕಾಮಿಡಿ ಎಳೆಯನ್ನು ಆರಿಸಿಕೊಂಡಿದ್ದಾರೆ. ಜೊತೆಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶವನ್ನು ಚಿತ್ರಕತೆಗೆ ಜೋಡಿಸಿದ್ದಾರೆ. ಅವೆರಡೂ ಸೇರಿಕೊಂಡು ಈ ಸಿನಿಮಾ ಆಗಿದೆ. ಸೃಜನ್ ಅವರಿಗೆ ಕಾಮಿಡಿ ಹೊಸತಲ್ಲವಾದ್ದರಿಂದ ಅವರು ಈ ವಿಭಾಗದಲ್ಲಿ ಮಿಂಚುತ್ತಾರೆ. ಅದರಲ್ಲೂ ಇಲ್ಲಿನ ತಾರಾಬಳಗ ಸೊಗಸಾಗಿದೆ. ದೆವ್ವಗಳಾಗಿ ನಟಿಸಿರುವ ಗಿರಿಜಾ ಲೋಕೇಶ್, ತಬಲಾ ನಾಣಿ, ಸುಕೃತ, ವಿನೋದ್ ಗೊಬ್ಬರಗಾಲ, ನಿವೇದಿತಾ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ದ್ವಿತೀಯಾರ್ಧದಲ್ಲಿ ಬರುವ ಶೋಭರಾಜ್ ಭಾರಿ ಮಜಾ ಕೊಡುತ್ತಾರೆ.
ನಿರ್ದೇಶನ: ಸೃಜನ್ ಲೋಕೇಶ್
ತಾರಾಗಣ: ಸೃಜನ್ ಲೋಕೇಶ್, ಶೋಭರಾಜ್, ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಸುಕೃತ, ಗಿರಿ, ತಬಲಾ ನಾಣಿ
ರೇಟಿಂಗ್: 3
ಅಸಹಾಯಕ ರೌಡಿಯ ಪಾತ್ರಕ್ಕೆ ಅವರು ಹೇಳಿ ಮಾಡಿಸಿದ ನಟರೆಂಬಂತೆ ಅಭಿನಯಿಸಿದ್ದಾರೆ. ರವಿಶಂಕರ್ ಗೌಡ ಟೈಮಿಂಗ್ ಉತ್ತಮವಾಗಿದೆ. ಸಂಪೂರ್ಣವಾಗಿ ಮನರಂಜನೆಗೆ ಒತ್ತು ನೀಡಿರುವುದು ಈ ಸಿನಿಮಾದ ಹೆಚ್ಚುಗಾರಿಕೆ. ಹಾಗಾಗಿ ಇಲ್ಲಿ ಲಾಜಿಕ್ ಹುಡುಕಲು ಹೋಗಬಾರದು. ಕೊಂಚ ಭಾವುಕತೆ, ಬಹಳಷ್ಟು ತಮಾಷೆ, ಕೊನೆಗೆ ಒಳ್ಳೆಯ ಉದ್ದೇಶವೆಲ್ಲವನ್ನೂ ಸೇರಿಸಿ ಸೃಜನ್ ಈ ಸಿನಿಮಾ ಮಾಡಿದ್ದಾರೆ. ಅವರ ಹಾಸ್ಯಪ್ರಜ್ಞೆ ಮೆಚ್ಚಿಕೊಳ್ಳುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.