ಪತ್ರಿಕೆಯಲ್ಲಿ ಓದಿ ಮರೆಯುವ ಸುದ್ದಿಗಳ ಹಿಂದಿನ ಭೀಕರ ಸತ್ಯವೇನು? ‘ಅನಂತ ಪಯಣ’ ಸಿನಿಮಾ ಹೇಗಿದೆ?

Published : Nov 28, 2026, 03:53 PM IST
Anantha Payana Movie

ಸಾರಾಂಶ

ಶ್ರೀ ಕಾಕಾ ನಿರ್ದೇಶನದ ‘ಅನಂತ ಪಯಣ’ ಸಿನಿಮಾ ಹೇಗಿದೆ? ನೈಜ ಘಟನೆಗಳ ಹಿನ್ನೆಲೆ, ಸಾಮಾಜಿಕ ಕಳಕಳಿ, ಪತ್ರಿಕೆಯಲ್ಲಿ ಓದಿ ಮರೆಯುವ ಮನಕಲಕುವ ಕಥೆ ಹಾಗೂ ಕಲಾವಿದರ ಅಭಿನಯದ ಸಂಪೂರ್ಣ ವಿಮರ್ಶೆ ಓದಿ.

ಕೇಶವ

‘....’ ತುತ್ತಾಗಿ ಹುಡುಗಿ ಸಾವು, ಕಾಣೆಯಾದ ಅಪ್ರಾಪ್ತೆ, ಬೆಟ್ಟದಲ್ಲಿ ಸಿಕ್ಕ ಮಹಿಳೆಯ ಶವ- ಇಂಥ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿ ಮರೆತು ಹೋಗುತ್ತೇವೆ. ಆದರೆ, ಆ ಸುದ್ದಿಯ ಕುಟುಂಬಗಳ, ಊರಿನವರ ನೋವು, ಕಣ್ಣೀರು ಮರೆಯಾಗಲು ಸಾಧ್ಯವೆ? ಅಂದಹಾಗೆ ಇಲ್ಲಿ ಬಿಟ್ಟ ಸ್ಥಳವನ್ನು ತುಂಬಿಕೊಳ್ಳುವುದಕ್ಕೆ ನೀವು ‘ಅನಂತ ಪಯಣ’ ಚಿತ್ರವನ್ನು ನೋಡಬೇಕು.

ಕತೆಯೇ ಮುಖ್ಯ ಎನ್ನುವಂತೆ ಮೂಡಿ ಬಂದಿರುವ ಈ ಚಿತ್ರವು ಒಂದು ರೀತಿಯಲ್ಲಿ ಸತ್ಯಘಟನೆಗಳ ಮರು ಸೃಷ್ಟಿ. ಸಿನಿಮಾದಂತಹ ಪ್ರಭಾವಿ ಮಾಧ್ಯಮವನ್ನು ಹೇಗೆ ಮತ್ತು ಯಾವುದಕ್ಕೆ ಬಳಸಿಕೊಳ್ಳಬೇಕು, ಅಲ್ಲಿ ಏನು ಹೇಳಬೇಕು ಎನ್ನುವ ಸ್ಪಷ್ಟತೆ ಇಟ್ಟುಕೊಂಡೇ ನಿರ್ದೇಶಕ ಶ್ರೀ ಕಾಕಾ ಈ ಚಿತ್ರವನ್ನು ರೂಪಿಸಿದಂತಿದೆ. ನಿರ್ದೇಶಕರ ಈ ಬದ್ಧತೆ ಕೂಡ ಪ್ರಶಂಸೆಗೆ ಕಾರಣವಾಗುತ್ತದೆ.

ಕತೆಯ ಪಾತ್ರಧಾರಿಗಳಿಗೆ ಬಹುತೇಕ ಬಯಲೇ ಆಲಯ. ಬಯಲು ಮತ್ತು ಪಾತ್ರಧಾರಿಗಳ ಕಸಬು ಒಂದು ವರ್ಗದ ಜನರನ್ನು ಪ್ರತಿನಿಧಿಸಿದರೂ ಎಲ್ಲಾ ವರ್ಗದ ಮನುಷ್ಯರನ್ನು ಎಚ್ಚರಿಸುವುದು ಈ ಚಿತ್ರದ ಬಹು ದೊಡ್ಡ ಶಕ್ತಿ. ಹಾಗಂತ ನಿರ್ದೇಶಕರು ಹೊಸದಾಗಿ ಕಲ್ಪಿಸಿಕೊಂಡು ಕತೆ ಕಟ್ಟಿಲ್ಲ. ಇಲ್ಲಿನ ಕತೆಯಲ್ಲಿ ಸಾದಾ ಸೀದಾ ಜೀವಗಳು ಇವೆ, ಅವರ ಸಂಸ್ಕೃತಿ, ಆಚಾರ- ವಿಚಾರಗಳು ಇವೆ. ಅವರು ಎದುರಿಸುವ ಹೃದಯವಿದ್ರಾವಕ ಘಟನೆ ಇದೆ. ಯಾವುದೇ ಆಡಂಬರ ಇಲ್ಲದೆ ನೈಜವಾಗಿ ಮೂಡಿ ಬಂದಿರುವ ಚಿತ್ರವಿದು.

ಚಿತ್ರ: ಅನಂತ ಪಯಣ

ತಾರಾಗಣ: ಶ್ರೀ ಕಾಕಾ, ನಿವಿಷ್ಕಾ ಪಾಟೀಲ್‌, ಲಕ್ಷ್ಮಿ ಸಿದ್ದಯ್ಯ, ಅಪೂರ್ವ, ಪ್ರಶಾಂತ್‌ ಸಿದ್ದಿ, ಮಂಜುನಾಥ್‌ ಹೆಗಡೆ, ಸಂದೀಪ್‌ ನೀನಾಸಂ, ಅನನ್ಯ ನಿಹಾರಿಕ.

ನಿರ್ದೇಶನ: ಶ್ರೀ ಕಾಕಾ

ರೇಟಿಂಗ್‌: 3

ಇಲ್ಲಿನ ಪ್ರತಿ ಪಾತ್ರವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದ್ದು, ಶ್ರೀ ಕಾಕಾ ಹಾಗೂ ಅನನ್ಯ ನಿಹಾರಿಕ ಪಾತ್ರಗಳು ಮಾತ್ರ ಸಿನಿಮಾ ಮುಗಿದರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತವೆ. ಇದು ಬರೀ ನೋಡುವ ಚಿತ್ರವಲ್ಲ, ನೋಡಿದ ಮೇಲೆ ಪ್ರಶ್ನಿಸುವ ಮನಸ್ಥಿತಿ ಹುಟ್ಟಿಗೆ ಕಾರಣವಾಗುವ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೋಮಲ್ ಮತ್ತೆ ಕಾಮಿಡಿ ಟ್ರ್ಯಾಕ್‌ಗೆ; ‘ರಿಲ್ಯಾಕ್ಸ್‌’ನಲ್ಲಿ ನಗುವಿನ ಗ್ಯಾರಂಟಿ ಇದೆಯಾ?
100 ಕೋಟಿಯ 'ಕ್ರಿಶ್-3'ಗೆ ಮಣ್ಣು ಮುಕ್ಕಿಸಿದ್ದ 3 ಕೋಟಿಯ ಕನ್ನಡ ಸಿನಿಮಾ; ಪಕ್ಕಾ ಹಳ್ಳಿ ಸೊಗಡಿನ ಕಥೆ