
ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಯುವ ಪತ್ರಕರ್ತ, ಅದೇ ಅನ್ಯಾಯ ಮಾಡಿದವರ ಜೊತೆಗೆ ಅನಿವಾರ್ಯವಾಗಿ ಸೇರಿಕೊಂಡಿರುವ ಒಬ್ಬ ಪೊಲೀಸ್ ಅಧಿಕಾರಿ. ಈ ಇಬ್ಬರ ನಡುವೆ ‘ನೀನಾ ನಾನಾ’ ಎಂದು ಸಾಗುವ ಕತೆಯಲ್ಲಿ ಫ್ಯಾಮಿಲಿ, ಹಣಕಾಸಿನ ಸ್ಕ್ಯಾಮ್‌ಗಳು ಬಂದು ಹೋಗುತ್ತವೆ.
ಸಹಕಾರ ಬ್ಯಾಂಕಿನ ಹಗರಣದ ತನಿಖೆಯಗೆ ಬರುವ ಪೊಲೀಸ್ ಅಧಿಕಾರಿ, ತನಿಖೆ ಪೂರ್ಣಗೊಳಿಸದೆ, ಎಷ್ಟೇ ದಿನಗಳಾದರೂ ನ್ಯಾಯಲಯಕ್ಕೆ ಸಾಕ್ಷಿಗಳನ್ನೂ ಒದಗಿಸದೆ ಇದ್ದಾಗ ಅದೇ ಪೊಲೀಸ್ ಅಧಿಕಾರಿಯ ತಂಗಿಯನ್ನು ಪ್ರೀತಿಸುವ ಯುವ ಪತ್ರಕರ್ತನ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಮುಂದಿನ ಕತೆಯು ಪೊಲೀಸ್ ಅಧಿಕಾರಿ ಹಾಗೂ ಯುವ ಪತ್ರಕರ್ತನ ನಡುವಿನ ಮುಸುಕಿನ ಗುದ್ದಾಟದಂತೆ ಸಾಗುತ್ತದೆ.
ಚಿತ್ರ: ಸ್ಪಾರ್ಕ್
ತಾರಾಗಣ: ನೆನಪಿರಲಿ ಪ್ರೇಮ್, ನಿರಂಜನ್ ಸುಧೀಂದ್ರ, ರಚನಾ ಇಂದರ್, ಭಾವನಾ, ರಮೇಶ್ ಇಂದಿರಾ, ಮೈಕೋ ನಾಗರಾಜ್
ನಿರ್ದೇಶನ: ಮಹಾಂತೇಶ್ ಹಂದ್ರಾಲ್
ಕೊನೆಗೆ ಇದರ ಹಿಂದೆ ಇರೋದು ಬೇರೊಬ್ಬರ ಕೈ ಎಂದು ಗೊತ್ತಾಗುವ ಹೊತ್ತಿಗೆ ಸಿನಿಮಾ ಮುಕ್ತಾಯದ ಹಂತಕ್ಕೆ ಬಂದಿರುತ್ತದೆ. ಒಂದೇ ಅಂಶದ ಸುತ್ತಾ, ತೀರಾ ಅನಗತ್ಯ ತಿರುವುಗಳ ಜೊತೆಗೆ ಹೊಸತನವಿನಲ್ಲದ ಕತೆ, ಕತೆಗೆ ಹಾಗೂ ಪಾತ್ರಧಾರಿಗಳಿಗೆ ಪೂರಕವಾಗಿರದ ಚಿತ್ರಕಥೆಯಿಂದ ಚಿತ್ರದ ಮೊದಲಾರ್ಧವೇ ಬೋರಾಗುತ್ತದೆ. ಇದರ ಜೊತೆಗೆ ನಿರಂಜನ್ ಸುಧೀಂದ್ರ ಆ್ಯಕ್ಷನ್, ಪ್ರೇಮ್ ಅವರ ಹೊಸ ಇಮೇಜ್ ಪಾತ್ರ ಹಾಗೂ ಭಾವನಾ ಅವರ ನಟನೆ ಚಿತ್ರದ ಪ್ಲಸ್ ಪಾಯಿಂಟ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.