ನೈಜ ಘಟನೆಯ ಆಧಾರಿತ 'ಲವ್ ಯೂ ಮುದ್ದು': ದಾಂಪತ್ಯ ಪ್ರೇಮಕ್ಕೆ ಭಾವನೆಯ ಭಾಷ್ಯ

Published : Nov 08, 2025, 05:12 PM IST
Love You Muddu

ಸಾರಾಂಶ

ನಾಯಕ ಕರ್ಣ ಬ್ಯುಸಿನೆಸ್‌ ಮ್ಯಾನ್‌ ಪುತ್ರನಾಗಿದ್ದರೂ ಫ್ಯಾಶನ್‌ ಅರಸಿ ಹೊರಟ ಪ್ರತಿಭಾವಂತ. ಗತಿಸಿದ ಅಮ್ಮನ ನೆನಪಲ್ಲಿ ಅಮ್ಮನ ಊರು ಕಾರ್ಕಳಕ್ಕೆ ಬರುವ ನಾಯಕನ ಬದುಕಿನಲ್ಲಿ ಇಲ್ಲಿಂದಲೇ ಘಾಟಿರಸ್ತೆಯ ತಿರುವುಗಳು ಎದುರಾಗುತ್ತದೆ.

ಪ್ರಿಯಾ ಕೆರ್ವಾಶೆ

ಈ ಸಿನಿಮಾದ ಆರಂಭದಲ್ಲೇ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ದಾರುಣ ಸನ್ನಿವೇಶ ಇದೆ. ಬದುಕಿನಲ್ಲಿ ಒಂದಾಗುವ ಭರವಸೆ ಕಳೆದುಕೊಂಡವರು ಸಾವಿನ ಮೂಲಕ ಒಂದಾಗುವ ಪಣ ತೊಡುತ್ತಾರೆ. ಇದು ಜಗತ್ತಿನಲ್ಲಿ ಚಾಲ್ತಿಯಲ್ಲಿರುವ ಪ್ರೇಮಕಥೆಯ ಒಂದು ಮುಖವನ್ನು ಪ್ರತಿನಿಧಿಸುತ್ತದೆ. ಇದಕ್ಕೆ ವಿರುದ್ಧ ನೆಲೆಯಲ್ಲಿ ಇಡೀ ಸಿನಿಮಾವಿದೆ. ಪ್ರೇಮಕ್ಕಾಗಿ ಕ್ಷಣ ಕ್ಷಣವೂ ಹೋರಾಡುವ ಗಟ್ಟಿತನವದು. ಪ್ರೇಮಕ್ಕಿರಬೇಕಾದ ಈ ಶಕ್ತಿಯನ್ನೇ ತಳಹದಿ ಮಾಡಿಕೊಂಡು ನಿರ್ದೇಶಕ ಕುಮಾರ್‌ ಇಡೀ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ನಾಯಕ ಕರ್ಣ ಬ್ಯುಸಿನೆಸ್‌ ಮ್ಯಾನ್‌ ಪುತ್ರನಾಗಿದ್ದರೂ ಪ್ಯಾಶನ್‌ ಅರಸಿ ಹೊರಟ ಪ್ರತಿಭಾವಂತ. ಗತಿಸಿದ ಅಮ್ಮನ ನೆನಪಲ್ಲಿ ಅಮ್ಮನ ಊರು ಕಾರ್ಕಳಕ್ಕೆ ಬರುವ ನಾಯಕನ ಬದುಕಿನಲ್ಲಿ ಇಲ್ಲಿಂದಲೇ ಘಾಟಿರಸ್ತೆಯ ತಿರುವುಗಳು ಎದುರಾಗುತ್ತದೆ. ಮೊದಲ ತಿರುವಲ್ಲಿ ಸಿಗುವ ಸುಮತಿ ಟೀಚರ್‌ ಮತ್ತವಳ ಜೊತೆಗಿನ ಜರ್ನಿಯ ಕಡಿದಾದ ಹಾದಿಯ ಕಥನವೇ ಸಿನಿಮಾದ ಒನ್‌ಲೈನ್‌. ಈ ಸಿನಿಮಾ ನೈಜ ಘಟನೆ ಆಧರಿಸಿದ್ದು. ನಿತ್ಯ ಬದುಕಿನಲ್ಲಿ ಸಾಂಗತ್ಯ ಅನ್ನುವುದು ಕ್ರಮೇಣ ಯಾಂತ್ರಿಕವಾಗುತ್ತದೆ.

ಚಿತ್ರ: ಲವ್‌ ಯೂ ಮುದ್ದು

ನಿರ್ದೇಶನ: ಕುಮಾರ್‌ ಎಲ್‌
ತಾರಾಗಣ: ಸಿದ್ದು ಎನ್‌, ರೇಷ್ಮಾ ಎಲ್‌, ರಾಜೇಶ್ ನಟರಂಗ
ರೇಟಿಂಗ್‌: 3.5

ಆದರೆ ಪ್ರೇಮ ಅಥವಾ ದಾಂಪತ್ಯ ಎಂಥಾ ಉತ್ಕಟ ಅನುಭೂತಿ ಅನ್ನುವುದನ್ನು ಕರ್ಣನ ಪಾತ್ರ ಹೇಳುತ್ತದೆ. ಸಿದ್ದು ಮೂಲಿಮನಿ ಈ ಪಾತ್ರದ ಭಾವನೆಗಳನ್ನು ಪರಿಣಾಮಕಾರಿಯಾಗಿ ದಾಟಿಸಿದ್ದಾರೆ. ಹೊಸ ಕಲಾವಿದೆ ರೇಷ್ಮಾ ಭರವಸೆ ಮೂಡಿಸುತ್ತಾರೆ. ರಾಜೇಶ್‌ ನಟರಂಗ, ತಬಲಾ ನಾಣಿ, ಗಿರೀಶ್‌ ಶಿವಣ್ಣ, ಶ್ರೀವತ್ಸ ಮೊದಲಾದವರದು ಲವಲವಿಕೆಯ ನಟನೆ. ಕೆಲವೊಂದು ಹಾಡು, ಸನ್ನಿವೇಶಗಳು ಅನಗತ್ಯ ಅನಿಸುತ್ತವೆ. ಸಣ್ಣ ಪುಟ್ಟ ಕೊರತೆಗಳ ನಡುವೆಯೂ ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ ಮಾಡುವ ಚಿತ್ರವಿದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ