ಜುಲೈ 15ರಂದು ವಿಜಯ್ ಪ್ರಸಾದ್ ನಿರ್ದೇಶನದ, ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ಸಜ್ಜಾಗಿಯಾಗಿದೆ. ಸಿನಿಮಾ ಹೇಗಿದೆ?
ಆರ್ ಕೇಶವಮೂರ್ತಿ
ಗಂಭೀರ ಮತ್ತು ವಿಷಾದದ ಸಂಗತಿಗಳನ್ನೂ ತಮಾಷೆಯಾಗಿ ಹೇಳಬಹುದು ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ ವಿಜಯಪ್ರಸಾದ್. ಅವರ ಪೆನ್ ಒಳಗೇ ಪನ್ ಅವಿತಿದೆ. ಪೋಲಿಕಪಿ ಮತ್ತು ಫಿಲಾಸಪಿ ಲೀವಿಂಗ್ ರಿಲೇಶನ್‌ಶಿಪ್‌ನಲ್ಲಿ ಇರುವುದರಿಂದ ಇಲ್ಲಿ ಚೇಷ್ಟೆಜಾಸ್ತಿ, ಕೀಟಲೆಯೇ ಆಸ್ತಿ. ‘ಸಿದ್ಲಿಂಗು’, ‘ನೀರ್‌ದೋಸೆ’ ನಂತರ ‘ಪೆಟ್ರೋಮ್ಯಾಕ್ಸ್’ನಲ್ಲೂ ಆ ಜಾದೂ ಮುಂದುವರಿದಿದೆ.
ತಾರಾಗಣ: ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯ ರಾಮ್
ನಿರ್ದೇಶನ: ವಿಜಯ್ ಪ್ರಸಾದ್
ರೇಟಿಂಗ್: 3
ಪೆಟ್ರೋಮ್ಯಾಕ್ಸ್ ಸಿನಿಮಾ ನೋಡಿದ ಮೇಲೆ ವಿಜಯ್ ಪ್ರಸಾದ್ ಅವರ ಚಿತ್ರಗಳಲ್ಲಿ ಅದೇ ‘ಕಾಮ’ನ್ ಡೈಲಾಗ್‌ಗಳು ಇರುತ್ತವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಜೀವನ, ಪ್ರೀತಿ, ಶುದ್ಧ ಮನಸ್ಸುಗಳು, ಅದ್ಭುತ ಸಂಬಂಧಗಳು, ಸಮಾಜದ ಬಗ್ಗೆ ‘ಕಾಮ’ನ್ ಭಾಷೆಯಲ್ಲೇ ಹೇಳುತ್ತಾರೆ. ‘ಅನಾಥಮಶ್ರಮಗಳಲ್ಲಿ ಇರುವವರು ಮಾತ್ರ ಅನಾಥರಲ್ಲ. ಎಲ್ಲರು ಇದ್ದೂ ಒಂಟಿಯಾಗಿ ಇರುತ್ತಾರಲ್ಲ ಅವರು ನಿಜವಾದ ಅನಾಥರು’ ಎಂದು ಸಂಬಂಧಗಳ ಬಗ್ಗೆ ಎಚ್ಚರಿಸುತ್ತಾರೆ, ‘ಮಕ್ಕಳು ಇದ್ದರೂ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುವುದು ನಿಜವಾದ ಅಶ್ಲೀಲತೆ’ ಎನ್ನುತ್ತಾರೆ. ‘ಅಕ್ಕ, ತಂಗಿ, ಅಮ್ಮ, ಹೆಂಡತಿ, ಗೆಳತಿ, ವೇಶ್ಯೆ ಹೀಗೆ ಎಲ್ಲರಲ್ಲೂ ಇರುವ ಮಮತೆಯನ್ನು ಪದಗಳಲ್ಲಿ ಹೇಳಲಾಗದು. ಅದು ಹೆಣ್ಣಿಗೆ ಇರುವ ಶಕ್ತಿ’ ಎನ್ನುತ್ತಾ ತಿರಸ್ಕೃತ ನೋಟ- ಮಾತುಗಳನ್ನು ಎದುರಿಸುವ ವೇಶ್ಯೆಯನ್ನೂ ಪ್ರೀತಿ- ಗೌರವದಿಂದ ನೋಡುವಷ್ಟುಶುದ್ಧ ಸಿನಿಮಾ ‘ಪೆಟ್ರೋಮ್ಯಾಕ್ಸ್’. ಬಹುತೇಕರು ಡಬಲ್ ಮೀನಿಂಗ್‌ನಲ್ಲೇ ಪೆಟ್ರೋಮ್ಯಾಕ್ಸ್ ಹೆಸರು ಕೇಳುತ್ತಿದ್ದರೆ, ‘ಪೆಟ್ರೋಮ್ಯಾಕ್ಸ್ ಎಂದರೆ ಬದುಕು ಮತ್ತು ಬೆಳಕು’ ಎನ್ನುತ್ತಾರೆ ನಿರ್ದೇಶಕರು.
CHASE FILM REVIEW: ಕಥೆಗೆ ಹೊಸ ಸ್ವರೂಪ, ಅಭಿನಯವೇ ದೀಪ
ಮೂವರು ಬ್ರಹ್ಮಚಾರಿಗಳೂ ಒಬ್ಬಳು ಕನ್ಯೆಯೂ ಜತೆಗಿರಲು ಬಾಡಿಗೆ ಮನೆ ಹುಡುಕುವುದು ಕತೆ. ಬ್ರೋಕರ್ ಮೀನಾಕ್ಷಿ ಅವರಿಗೆ ಮನೆ ಕೊಡಿಸುವ ಸಾಹಸದಲ್ಲೇ ಬದುಕು ಬೆಳಕೂ ಎರಡೂ ಕಾಣಿಸುತ್ತಾಳೆ. ಇಲ್ಲಿ ಮನೆ-ರಂಜನೆಗೆ ಮೋಸವಿಲ್ಲ.
Sugarless Film Review: ನವಿರು ಹಾಸ್ಯ, ಮಧುಮೇಹದ ಪಾಠ
ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್, ನಾಗಭೂಷಣ್, ಅರುಣ್, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಕಾರುಣ್ಯ ರಾಮ್ ಅವರ ಪಾತ್ರದಿಂದ ಹೊರಡುವ ಪಂಚ್ ಮಾತುಗಳು ತುರಿಕೆಯಷ್ಟೇ ಹಿತವಾದ ಮಜಕೊಡುತ್ತವೆ. ಹಿನ್ನೆಲೆ ಸಂಗೀತದಲ್ಲಿ ಅನೂಪ್ ಸೀಳಿನ್ ಅವರು ನಿರ್ದೇಶಕರ ಶ್ರಮಕ್ಕೆ ಸಾಥ್ ನೀಡುತ್ತಾರೆ.