Sugarless Film Review: ನವಿರು ಹಾಸ್ಯ, ಮಧುಮೇಹದ ಪಾಠ

By Suvarna NewsFirst Published Jul 9, 2022, 10:37 AM IST
Highlights

ಪೃಥ್ವಿ ಆಂಬರ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಿ ಅಭಿನಯಿಸಿರುವ ಶುಗರ್‌ಲೆಸ್‌ ಸಿನಿಮಾ ಹೇಗಿದೆ?

ಪ್ರಿಯಾ ಕೆರ್ವಾಶೆ

ಬೆಳಗಾದ್ರೆ ಪಿಜ್ಜಾ, ಬರ್ಗರ್‌, ಸ್ವೀಟು, ರಾತ್ರಿ ಎಣ್ಣೆ ಪಾರ್ಟಿ ಇವುಗಳಿಂದ ಸಮೃದ್ಧವಾಗಿದ್ದ ವೆಂಕಿ ಲೈಫು ಒನ್‌ ಫೈನ್‌ ಡೇ ಕಂಪ್ಲೀಟ್‌ ಬುಡಮೇಲಾಗುತ್ತದೆ. ಇದಕ್ಕೆ ಕಾರಣ ಡಯಾಬಿಟೀಸ್‌. ಶುಗರ್‌ ಬರೋದಕ್ಕಿಂತ ಮೊದಲ ಅವನ ಲೈಫು, ಬಂದ ನಂತರದ ಫಜೀತಿಯ ಕಥೆಯೇ ‘ಶುಗರ್‌ಲೆಸ್‌’. ಈ ಸಿನಿಮಾ ಕಥೆ, ನಿರೂಪಣೆಗಿಂತಲೂ ಇಲ್ಲಿರುವ ಪಾತ್ರಗಳು ಹೆಚ್ಚು ಗಮನಸೆಳೆಯುತ್ತವೆ. ಹೀರೋ ವೆಂಕಿಯಲ್ಲಿ 20 ದಿನದಲ್ಲಿ 200 ಸೈಟು ಮಾರುವಷ್ಟುಸ್ಮಾರ್ಚ್‌ನೆಸ್‌, ಆತನ ಗೆಳೆಯ ಚಿನ್ನನದು ಗುಟ್ಟನ್ನೆಲ್ಲ ರಟ್ಟು ಮಾಡುವ ಕಾಮಿಡಿ ಪಾತ್ರ (ಈ ಪಾತ್ರದ ಎಂಟ್ರಿ ಸೀನ್‌ ಹೀರೋ ಎಂಟ್ರಿಗಿಂತಲೂ ಮಜಬೂತಾಗಿದೆ), ಸಂಸಾರದಿಂದ ಆಚೆಗಿದ್ದೂ ಜೀವನಪ್ರೀತಿಯ ಪಾಠ ಹೇಳುವ ದತ್ತಣ್ಣ, ಹಾಸ್ಯವನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯುವ ನವೀನ್‌ ಡಿ ಪಡೀಲ್‌.. ಇವರದೆಲ್ಲ ಒಂದು ಲೆವೆಲ್‌ ಆದರೆ 28ರಲ್ಲೇ ಶುಗರ್‌ ಬರಿಸಿಕೊಂಡ ನಾಯಕ ಪ್ರೀತಿಸುವ ಹುಡುಗಿ ಮನೆ ಹೆಸರು ಸಕ್ಕರೆ. ಅಲ್ಲಿರುವವರ ಸಕ್ಕರೆ ಪ್ರೀತಿಯೂ ಸಿನಿಮಾದ ಪ್ರಮುಖ ಅಂಶ.

GIRKI FILM REVIEW: ಹಳೆಯ ಕತೆಯ ಹಿಂದೆ ನಿರ್ದೇಶಕನ ಗಿರ್ಕಿ

ನಿರ್ದೇಶನ: ಕೆ ಎಂ ಶಶಿಧರ್‌

ತಾರಾಗಣ: ಪೃಥ್ವಿ ಅಂಬರ್‌, ಪ್ರಿಯಾಂಕಾ ತಿಮ್ಮೇಶ್‌

ರೇಟಿಂಗ್‌: 3

ಮಾಡಬಾರದ ಕೆಲಸ ಮಾಡಿ ಬರಬಾರದ ವಯಸ್ಸಲ್ಲಿ ಡಯಾಬಿಟೀಸ್‌ ಬರಿಸಿಕೊಂಡ ನಾಯಕ, ಆರೋಗ್ಯದ ಬಗ್ಗೆ ಪಾಠ ಮಾಡುತ್ತಲೇ ನವಿರಾದ ಹಾಸ್ಯ, ಅಲ್ಲಲ್ಲಿ ಮಾಸ್‌ ಡೈಲಾಗ್‌ ಇಷ್ಟವಾಗುತ್ತದೆ. ವಿಧೇಯ ವಿದ್ಯಾರ್ಥಿಯಂತೆ ಅದನ್ನು ಕೇಳಿಸಿಕೊಳ್ಳದಿದ್ದರೆ ಕೋಣನ ಮೇಲೇರಿ ಬರುವ ಯಮನ ದರ್ಶನ ಮಾಡಿಸುತ್ತಾರೆ ಎಸ್‌ ನಾರಾಯಣ್‌.

Wedding Gift Film Review: ಮದುವೆಯ ನಂತರದ ಸಂಕಷ್ಟಗಳು

ಪೃಥ್ವಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಧರ್ಮಣ್ಣ, ನವೀನ್‌ ಪಡೀಲ್‌ ಹಾಸ್ಯ ನಿಜಕ್ಕೂ ನಗೆ ತರಿಸುತ್ತದೆ. ಲೈಟ್‌ ಆದ ಸಬ್ಜೆಕ್ಟ್. ಮನರಂಜನೆಗೆ ಮೋಸವಿಲ್ಲ.

click me!