Harikathe Alla Girikathe Film Review: ನವಿಲುಗರಿಯಂತಿರುವ ನವಿರಾದ ಸಿನಿಮಾ

Published : Jun 24, 2022, 09:43 AM IST
Harikathe Alla Girikathe Film Review: ನವಿಲುಗರಿಯಂತಿರುವ ನವಿರಾದ ಸಿನಿಮಾ

ಸಾರಾಂಶ

ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಡಿಫರೆಂಟ್ ಕಥೆ ಮೂಲಕ ಸಿನಿ ರಸಿಕರನ್ನು ಮನೋರಂಜಿಸಲು ಮುಂದಾಗಿದ್ದಾರೆ. ಅದೇ ಹರಿಕಥೆ ಅಲ್ಲ ಗಿರಿಕಥೆ

ರಾಜೇಶ್‌ ಶೆಟ್ಟಿ

ಅನಿರುದ್‌್ಧ ಮಹೇಶ್‌ ಮತ್ತು ಕರಣ್‌ ಅನಂತ್‌ ಎಂಬಿಬ್ಬರು ಹೊಸ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದು ಈ ಸಿನಿಮಾದ ಹೆಗ್ಗಳಿಕೆ. ಅಷ್ಟರ ಮಟ್ಟಿಗೆ ತಾಂತ್ರಿಕವಾಗಿ ಶ್ರೀಮಂತವಾಗಿರುವ ಮತ್ತು ನೋಡಿಸಿಕೊಂಡು ಹೋಗುವಂತೆ ಕಟ್ಟಿರುವ ಸಿನಿಮಾ ಇದು. ಸಿನಿಮಾ ಮಾಡಲು ಹೆಣಗಿ ಕೊನೆಗೂ ಸಿನಿಮಾ ನಿರ್ದೇಶಿಸುವ ಕನಸು ನನಸು ಮಾಡಲು ಸಾಧ್ಯವಾಗದೇ ಹೋದವರಿಗೆ ಈ ಸಿನಿಮಾ ಒಂದು ಸೊಗಸಾದ ಅರ್ಪಣೆ.

ಎರಡು ಜನರೇಷನ್ನಿನ ಕತೆ. ಸಿನಿಮಾ ನಿರ್ದೇಶನ ಮಾಡಲು ಸಾಧ್ಯವಾಗದೇ ಹೋದ ಅಪ್ಪ, ಸಿನಿಮಾ ನಿರ್ದೇಶನ ಮಾಡಲು ಹೆಣಗಾಡುತ್ತಿರುವ ಮಗ. ಇವರಿಬ್ಬರ ಕನಸು ಸಾಕಾರದಲ್ಲಿ ಜೊತೆಯಾಗುವ ಮಂದಿ ಈ ಸಿನಿಮಾ ಮುಂದೆ ತೆಗೆದುಕೊಂಡು ಹೋಗುತ್ತಾರೆ. ಕತೆ ಸ್ವಲ್ಪ ಸರಳವಾಗಿದೆ ಅನ್ನಿಸಿದರೂ ಸಂಕೀರ್ಣ ಬದುಕುಗಳು ಸಿನಿಮಾದಲ್ಲಿ ಅಡಗಿಕೊಂಡಿದೆ. ಚಿತ್ರಕತೆ ಕಟ್ಟಿರುವ ರೀತಿ ಮಜವಾಗಿದೆ. ಆರಂಭದಿಂದಲೇ ವಿಡಂಬನೆ ಮತ್ತು ಹಾಸ್ಯದ ಜಾಡು ಹಿಡಿದೇ ಸಾಗುವ ಸಿನಿಮಾ ಅಲ್ಲಲ್ಲಿ ಸಿನಿಮಾ ವ್ಯಾಮೋಹಿಗಳ ಬದುಕನ್ನು ಹೇಳುವಾಗ ವಿಷಾದಮಯವಾಗುತ್ತದೆ.

KHADAK MOVIE REVIEW; ಡ್ರಗ್ಸ್ ಮಾಫಿಯಾ ಕಥೆ ಸುತ್ತ ಖಡಕ್ ಚಿತ್ರ

ನಿರ್ದೇಶನ: ಅನಿರುದ್‌್ಧ ಮಹೇಶ್‌, ಕರಣ್‌ ಅನಂತ್‌

ತಾರಾಗಣ: ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್‌, ತಪಸ್ವಿನಿ ಪೂಣಚ್ಚ, ದೀಪಕ್‌ ರೈ ಪಾಣಾಜೆ, ಕಿರಣ್‌, ರಘು ಪಾಂಡೇಶ್ವರ್‌

ರೇಟಿಂಗ್‌- 3

ಈ ಸಿನಿಮಾದ ಅಚ್ಚರಿ ಎಂದರೆ ಕಲಾವಿದರು. ಇನ್‌ಸ್ಪೆಕ್ಟರ್‌ ಪಾತ್ರದಲ್ಲಿ ನಟಿಸಿರುವ ಪ್ರಮೋದ್‌ ಶೆಟ್ಟಿಸಿಕ್ಕಾಪಟ್ಟೆನಗಿಸುತ್ತಾರೆ. ಅವರು ನಟನೆಯ ಪವರ್‌ ಹೌಸ್‌. ರಚನಾ ಇಂದರ್‌ ಕಣ್ಣುಗಳನ್ನು ನೋಡುವುದೇ ಖುಷಿ. ಬಹುತೇಕ ಸಿನಿಮಾ ಆವರಿಸಿರುವ ಅವರ ನಟನೆ ಚಂದ. ದೀಪಕ್‌ ರೈ, ಕಿರಣ್‌, ರಘು ಪಾಂಡೇಶ್ವರ ಕಚಗುಳಿ ಇಡುವುದಕ್ಕೆಂದೇ ಇರುವ ಪಾತ್ರಗಳು. ಆ ಪಾತ್ರಗಳನ್ನು ಅವರೆಲ್ಲರೂ ಜೀವಿಸಿದ್ದಾರೆ. ತಪಸ್ವಿನಿ ಪೂಣಚ್ಚ ಮುದ್ದಾಗಿ ಕಾಣಿಸುತ್ತಾರೆ. ಒಬ್ಬ ಹತಾಶ ನಿರ್ದೇಶಕನನ್ನು ಬಿಂಬಿಸುವಾಗ, ಅವರಿವರನ್ನು ಕಾಲೆಳೆದು ತರ್ಲೆ ಮಾಡುವಾಗ, ವಿಷಾದ ಕಣ್ಣು ತುಂಬುವಾಗ ರಿಷಬ್‌ ಶೆಟ್ಟಿಮನಸ್ಸು ಗೆಲ್ಲುತ್ತಾರೆ. ಹೊನ್ನವಳ್ಳಿ ಕೃಷ್ಣ ಈ ಸಿನಿಮಾದ ಭಾವವನ್ನು ಭಾರಗೊಳಿಸುತ್ತಾರೆ.

Virata Parvam Movie Review; ಕಾಡಿನಲ್ಲಿ ಸಾಯಿ ಪಲ್ಲವಿಯ ಹೊಸ ಅವತಾರ

ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮೆಚ್ಚುಗೆ ಅರ್ಹರು. ಎರಡು ಅದ್ಭುತವಾದ ಹಾಡು ಕೊಟ್ಟಿದ್ದಾರೆ ಮತ್ತು ಅದಕ್ಕೆ ತ್ರಿವಿಕ್ರಮ್‌ ಮತ್ತು ಯೋಗರಾಜ ಭಟ್ಟರ ಸೊಗಸಾದ ಸಾಹಿತ್ಯವಿದೆ. ಹಗುರಾಗುವಷ್ಟುನಗು, ಮೌನಕ್ಕೆ ಶರಣಾಗಲು ಬೇಕಾದಷ್ಟುಭಾವುಕತೆ, ಮೆಚ್ಚಿಕೊಳ್ಳಲೊಂದು ಗೆಲುವು ಹೀಗೆ ಈ ಸಿನಿಮಾದಲ್ಲಿ ಎಲ್ಲವೂ ಇದೆ. ಆದರೂ ಇನ್ನೇನೋ ಬೇಕಿತ್ತು ಎಂಬ ಭಾವ ಉಳಿಸಿ ಹೋಗುತ್ತದೆ. ಇದು ಸಂಕೀರ್ಣವಾಗಿಲ್ಲದ ಸಿನಿಮಾ. ನವಿಲುಗರಿಯಂತೆ ಇರುವ ನವಿರಾದ ಸಿನಿಮಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ