Paramvah Film Review: ದಾರಿ ತಪ್ಪಿದ ವೀರಗಾಸೆ ಹುಡುಗನ ಕತೆ

By Kannadaprabha News  |  First Published Jul 24, 2023, 9:17 AM IST

ಪ್ರೇಮ್ ಸಿಡೇಗಲ್, ಮೈತ್ರಿ, ಗಣೇಶ್ ಹೆಗ್ಗೊಡು, ನಾಜರ್, ಶ್ರುತಿ, ಮುಕುಂದ್‌ ಮೈಗೂರ್, ಅವಿನಾಶ್‌, ಶಬರೀಶ್‌ ನಟಿಸಿರುವ ಸಿನಿಮಾ ಹೇಗಿದೆ? 


ಆರ್ ಕೇಶವಮೂರ್ತಿ

ಹಳ್ಳಿ ಹುಡುಗನ ಜೀವನದಲ್ಲಿ ನಡೆಯುವ ಸಾದಾ ಸೀದಾ ದೃಶ್ಯಗಳ ಒಟ್ಟು ಮೊತ್ತವೇ ‘ಪರಂವಃ’ ಸಿನಿಮಾ. ಬಡತನದಿಂದ ಹಿನ್ನೆಲೆಯ ನಾಯಕ, ಕಷ್ಟ ಪಡುವ ಅಪ್ಪ, ಕಾಲೇಜು ಓದುವ ಹಂತಕ್ಕೆ ಬಂದ ಮೇಲೆ ನಾಯಕ ಏನಾಗುತ್ತಾನೆ, ಇದರ ನಡುವೆ ಹುಟ್ಟಿಕೊಂಡು ಪ್ರೀತಿಗೆ ಜಯ ಸಿಗುತ್ತದೆಯೇ ಎಂಬುದು ಚಿತ್ರದ ಒಂದು ದಾರಿ. ಮತ್ತೊಂದು ದಾರಿ ಅಪ್ಪನ ಆಸೆಯಂತೆ ಹೀರೋ ದಸರಾ ಸಂಭ್ರಮದಲ್ಲಿ ವೀರಗಾಸೆ ನೃತ್ಯ ಪ್ರದರ್ಶಿಸಿ ಅಪ್ಪನ ಆಸೆಯನ್ನು ಈಡೇರಿಸುತ್ತಾನೆಯೇ ಎಂಬುದು ಚಿತ್ರದ ಮತ್ತೊಂದು ತಿರುವು.

Tap to resize

Latest Videos

undefined

HOSTEL HUDUGARU BEKAGIDDARE REVIEW: ಕ್ಷಣವನ್ನು ಹಿಡಿಯಲೆತ್ನಿಸುವ ಹೊಸ ಕಾಲದ ಸಿನಿಮಾ

ಯಾವುದೇ ಮೇಕಿಂಗ್‌ ಆಡಂಬರ ಇಲ್ಲದೆ ಕತೆಗೆ ತಕ್ಕಂತೆ ಸರಳನಾಗಿ ಚಿತ್ರವನ್ನು ನಿರೂಪಿಸಿರುವುದು ಹಾಗೂ ಬಹುತೇಕ ರಂಗಭೂಮಿ ಹಿನ್ನೆಲೆಯ ಕಲಾವಿದರೇ ಚಿತ್ರದಲ್ಲಿ ನಟಿಸಿರುವುದು ಚಿತ್ರದ ಗುಣಾತ್ಮಕ ಅಂಶ. ನಿರ್ದೇಶಕ ಸಂತೋಷ್‌ ಕೈದಾಳ ಮೊದಲ ಹೆಜ್ಜೆಯಲ್ಲೇ ಒಂದು ಅಪ್ಪಟ ದೇಸಿ ಹಿನ್ನೆಲೆಯ ಕಲಾ ಪ್ರಕಾರದ ಕತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಇಲ್ಲಿ ದೊಡ್ಡ ಸವಾಲನ್ನೇ ಸ್ವೀಕರಿಸಿದ್ದಾರೆ.

ತಾರಾಗಣ: ಪ್ರೇಮ್ ಸಿಡೇಗಲ್, ಮೈತ್ರಿ, ಗಣೇಶ್ ಹೆಗ್ಗೊಡು, ನಾಜರ್, ಶ್ರುತಿ, ಮುಕುಂದ್‌ ಮೈಗೂರ್, ಅವಿನಾಶ್‌, ಶಬರೀಶ್‌

ನಿರ್ದೇಶನ: ಸಂತೋಷ್‌ ಕೈದಾಳ

ರೇಟಿಂಗ್‌: 3

O Manase: ಕಾಲೇಜು, ಪ್ರೇಮದ ಮಧ್ಯೆ ಕೊಲೆಗಿಲೆ ಇತ್ಯಾದಿ

ಪರಮ್‌ ಪಾತ್ರದಲ್ಲಿ ಚಿತ್ರದ ನಾಯಕ ಪ್ರೇಮ್, ಅವನಿ ಪಾತ್ರದಲ್ಲಿ ನಾಯಕಿ ಮೈತ್ರಿ, ತಂದೆಯ ಪಾತ್ರಧಾರಿ ಗಣೇಶ್ ಹೆಗ್ಗೋಡು ಚೆನ್ನಾಗಿ ನಟಿಸಿದ್ದಾರೆ. ಕಾಲೇಜು, ಪ್ರೀತಿ ಸುತ್ತ ಹುಡುಕಾಟಿಕೆಯ ತಿರುಳಿನ ಜತೆಗೆ ಅಪ್ಪನ ಕನಸಿನ ಎಮೋಷನ್‌, ವೀರಗಾಸೆ ಕಲೆಯನ್ನು ಮತ್ತಷ್ಟು ಚಿತ್ರಕಥೆಗೆ ಬಳಸಿಕೊಂಡಿದ್ದರೆ ಕತೆ ಮತ್ತು ಪಾತ್ರಧಾರಿಗಳು ಪ್ರೇಕ್ಷಕರಿಗೆ ಇನ್ನಷ್ಟು ಆಪ್ತವಾಗುತ್ತಿದ್ದರು.

click me!