Family Drama Movie Review: ಗಮನ ಸೆಳೆಯುವ ಚಿತ್ರಕಥೆ, ಅಮೋಘ ನಟನೆ, ಮುಖಾಮುಖಿಯಾಗುವ ರೌಡಿಸಂ ಜಗತ್ತು

Published : Jul 27, 2024, 10:59 AM ISTUpdated : Jul 27, 2024, 11:23 AM IST
Family Drama Movie Review: ಗಮನ ಸೆಳೆಯುವ ಚಿತ್ರಕಥೆ, ಅಮೋಘ ನಟನೆ, ಮುಖಾಮುಖಿಯಾಗುವ ರೌಡಿಸಂ ಜಗತ್ತು

ಸಾರಾಂಶ

ಯುವ ನಿರ್ದೇಶಕ ಆಕರ್ಷ್‌ ಅವರ ಚಿತ್ರಕಥೆ, ಸಿನಿಮಾ ನಿರೂಪಿಸಿದ ರೀತಿಯಲ್ಲಿ ಹೊಸತನವಿದೆ. ಹಾಸ್ಯ, ಕ್ರೈಮ್‌ಗಳೆರಡನ್ನೂ ಏಕಕಾಲದಲ್ಲಿ ಬಹಳ ಸಹಜವಾಗಿ ತರುವ ಇವರ ಚುರುಕು ಬರವಣಿಗೆ ಗಮನಸೆಳೆಯುತ್ತದೆ. 

ಪ್ರಿಯಾ ಕೆರ್ವಾಶೆ

ಒಂದೇ ಏಟಿಗೆ ವ್ಯಕ್ತಿಯನ್ನು ಹೊಡೆದು ಬಿಸಾಕೋದು ರೌಡಿಗಳಿಗೆ ಸಲೀಸು. ಆದೇ ತರಕಾರಿಯನ್ನಷ್ಟೇ ಕೊಚ್ಚಿ ಗೊತ್ತಿರುವ ಶ್ರೀಸಾಮಾನ್ಯನಿಗೆ ಇದು ಕನಸಲ್ಲೂ ಊಹಿಸಲಾಗದ ಟಾಸ್ಕ್‌. ದುಡ್ಡಿಗೆ ಆಸೆ ಪಡುವ, ಕೆಳ ಮಧ್ಯಮ ವರ್ಗದ ಕುಟುಂಬವೊಂದಕ್ಕೆ ಕೊಲೆಯಂಥಾ ಟಾಸ್ಕ್‌ ಎದುರಾದಾಗ, ಅವರಿಗೆ ಅದನ್ನು ನಿರ್ವಹಿಸಲು ಸಾಧ್ಯವಾಯಿತಾ ಅನ್ನೋದೇ ಫ್ಯಾಮಿಲಿ ಡ್ರಾಮಾದ ಒನ್‌ಲೈನ್‌. ಕೆಳ ಮಧ್ಯಮ ವರ್ಗದ ಜೀವನ ಶೈಲಿ, ಆಸೆಗಳು, ಆಸೆ ಪೂರೈಸಲು ಕಂಡುಕೊಳ್ಳುವ ಶಾರ್ಟ್‌ಕಟ್‌ಗಳು, ಇವುಗಳ ಜೊತೆಗೆ ನಾಟಕೀಯವಾಗಿ ಮುಖಾಮುಖಿಯಾಗುವ ರೌಡಿಸಂ ಜಗತ್ತು ಇವನ್ನೆಲ್ಲ ಸಿನಿಮಾ ಪ್ಯಾರಲಲ್‌ ಫ್ರೇಮ್‌ನೊಳಗೆ ಕಟ್ಟಿಕೊಡುತ್ತದೆ.

ಯುವ ನಿರ್ದೇಶಕ ಆಕರ್ಷ್‌ ಅವರ ಚಿತ್ರಕಥೆ, ಸಿನಿಮಾ ನಿರೂಪಿಸಿದ ರೀತಿಯಲ್ಲಿ ಹೊಸತನವಿದೆ. ಹಾಸ್ಯ, ಕ್ರೈಮ್‌ಗಳೆರಡನ್ನೂ ಏಕಕಾಲದಲ್ಲಿ ಬಹಳ ಸಹಜವಾಗಿ ತರುವ ಇವರ ಚುರುಕು ಬರವಣಿಗೆ ಗಮನಸೆಳೆಯುತ್ತದೆ. ಆದರೆ ಡಾರ್ಕ್‌ ಹ್ಯೂಮರ್‌ನ ಪ್ರಮುಖ ಗುಣವಾದ ವೇಗ ಸಿನಿಮಾದಲ್ಲಿ ಮಿಸ್‌ ಆಗಿದೆ. ಮನಸ್ಸಲ್ಲುಳಿಯುವ ಮತ್ತೊಂದು ಅಂಶ ಅಂದರೆ ಒಬ್ಬರನ್ನೊಬ್ಬರು ಮೀರಿಸುವಂಥಾ ನಟನೆ. ರೇಖಾ ಕೂಡ್ಲಿಗಿ ಅವರಂತೂ ಕೆಳ ಮಧ್ಯಮ ವರ್ಗದ ಅಮ್ಮನ ಸರ್ವ ಗುಣಗಳನ್ನೂ ಆವಾಹಿಸಿಕೊಂಡು ಅದ್ಭುತವಾಗಿ ಪಾತ್ರಕ್ಕೆ ಧಾರೆ ಎರೆದಿದ್ದಾರೆ. 

ಚಿತ್ರ: ಫ್ಯಾಮಿಲಿ ಡ್ರಾಮಾ
ತಾರಾಗಣ: ರೇಖಾ ಕೂಡ್ಲಿಗಿ, ಪೂರ್ಣಚಂದ್ರ ಮೈಸೂರು, ಅಭಯ್‌ ಎಸ್‌, ಮಹಾದೇವ್‌ ಹಡಪದ್‌, ಸಿಂಧೂ ಶ್ರೀನಿವಾಸ ಮೂರ್ತಿ
ನಿರ್ದೇಶನ: ಆಕರ್ಷ್‌ ಹೆಚ್‌ ಪಿ
ರೇಟಿಂಗ್‌ : 3

ವಿಲಕ್ಷಣ ಅಪ್ಪನ ಪಾತ್ರದಲ್ಲಿ ಮಹಾದೇವ್‌ ಹಡಪದ್‌ ಇವರನ್ನು ಸರಿಗಟ್ಟಿದ್ದಾರೆ. ಫ್ಯಾಮಿಲಿ ಟೀಮ್‌, ರೌಡಿ ಗ್ಯಾಂಗ್‌ಗಳಲ್ಲಿ ಪೂರ್ಣಚಂದ್ರ, ಅಭಯ್‌, ಸಿಂಧೂ, ಮಾಲತೇಶ್‌, ಅನನ್ಯಾ ಸೇರಿದಂತೆ ಎಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದೊಂದು ಎಂಟರ್‌ಟೈನಿಂಗ್‌ ಸಿನಿಮಾವಂತೂ ಹೌದು, ಆದರೆ ಪ್ರೇಕ್ಷಕನ ಮಿದುಳಿಗೂ ಸ್ವಲ್ಪ ಕೆಲಸ ಕೊಟ್ಟು, ಕಥೆಯ ವೇಗ ಹೆಚ್ಚಿಸಿದ್ದರೆ ಸಿನಿಮಾ ನೆಕ್ಷ್ಟ್ ಲೆವೆಲ್‌ ತಲುಪುತ್ತಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!
ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ