Chowkabara Review ಪ್ರೀತಿಯೂ ಬಾರ, ಕತೆಯಷ್ಟೇ ಹಗುರ

By Kannadaprabha News  |  First Published Mar 11, 2023, 10:20 AM IST

ವಿಹಾನ್‌ ಪ್ರಭಂಜನ್‌, ನಮಿತಾ ರಾವ್‌, ಕಾವ್ಯ ರಾವ್‌, ಸುಜಯ್‌ ಹೆಗಡೆ, ಸಂಜಯ್‌ ಸೂರಿ ನಟಿಸಿರುವ ಚೌಕಾಬಾರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಕಂಡಿದೆ....


ಆರ್‌ಕೆ

ಕತೆಯೇ ಇಲ್ಲದೆ ಕೇವಲ ಒಂದಿಷ್ಟುದೃಶ್ಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಸಾಧ್ಯವೇ ಎನ್ನುವ ಪ್ರಯೋಗವನ್ನು ‘ಚೌಕಾಬಾರ’ ಸಿನಿಮಾದಲ್ಲಿ ವಿಕ್ರಮ್‌ ಸೂರಿ ಮಾಡಿದ್ದಾರೆ. ರೀಲ್ಸ್‌, ಕಿರು ಚಿತ್ರಗಳು, ಸಾಕ್ಷ್ಯ ಚಿತ್ರಗಳ ಮೂಲಕವೇ ಎರಡು- ಮೂರು ನಿಮಿಷಗಳಲ್ಲಿ ಅದ್ಭುತ ವಿಡಿಯೋ- ಕತೆಗಳನ್ನು ಹೇಳುತ್ತಿರುವ ಹೊತ್ತಿನಲ್ಲಿ ದೊಡ್ಡ ಪರದೆ ಮೇಲೆ ಮೂಡುವ ಚಿತ್ರದಲ್ಲಿ ಎಂಥ ಕತೆ ಇರಬೇಕು, ಪಾತ್ರಧಾರಿಗಳ ನಟನೆ, ಕಲಾವಿದರ ಆಯ್ಕೆ ಹೇಗಿರಬೇಕು ಎಂಬುದನ್ನು ವಿಕ್ರಮ್‌ ಹುಡುಕಿರುವುದು ಕುತೂಹಲಕಾರಿ. ಸಿನಿಮಾ ಮಾಡೋದು, ನೋಡೋದು ಟೈಮ್‌ ಪಾಸ್‌ಗೆ ಎನ್ನುವ ಮಾತನ್ನು ನಿರ್ದೇಶಕ ವಿಕ್ರಮ್‌ ಸೂರಿ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇದೇ ಚಿತ್ರದ ಹೈಲೈಟ್‌.

Tap to resize

Latest Videos

ಚೌಕಾಬಾರ ಪೋಸ್ಟರ್‌ ರಿಲೀಸ್‌ ಮಾಡಿದ ಪುನೀತ್‌ ರಾಜ್‌ಕುಮಾರ್‌

ತಾರಾಗಣ: ವಿಹಾನ್‌ ಪ್ರಭಂಜನ್‌, ನಮಿತಾ ರಾವ್‌, ಕಾವ್ಯ ರಾವ್‌, ಸುಜಯ್‌ ಹೆಗಡೆ, ಸಂಜಯ್‌ ಸೂರಿ

ನಿರ್ದೇಶನ: ವಿಕ್ರಮ್‌ ಸೂರಿ

ಇಬ್ಬರು ಹುಡುಗಿಯರು, ಒಬ್ಬ ಹುಡುಗ ಸ್ನೇಹಿತರು. ಈ ಪೈಕಿ ನಾಯಕ, ನಾಯಕಿ ಮನೆಯ ಮೇಲೆ ಬಾಡಿಗೆಗೆ ಇದ್ದಾನೆ. ನಾಯಕಿಯರ ಪೈಕಿ ಒಬ್ಬಳಿಗೆ ನಾಯಕ ತನ್ನ ಸ್ನೇಹಿತೆಯ ಮನೆಯಲ್ಲಿ ಪರಿಚಯ ಆಗುತ್ತಾನೆ. ಲಾಂಗ್‌ ಡ್ರೈವ್‌, ವಿಕೇಂಡ್‌ ಸುತ್ತಾಟ ಇತ್ಯಾದಿಗಳು ನಡೆಯುತ್ತವೆ. ಒಬ್ಬಳಿಗೆ ನಾಯಕನ ಜತೆ ಪ್ರೀತಿ ಹುಟ್ಟುವ ಹೊತ್ತಿಗೆ ಇನ್ನೊಬ್ಬಳ ಜತೆ ನಾಯಕ ಮೈಮರೆತದ್ದು ಗೊತ್ತಾಗುತ್ತದೆ. ಈಗ ಇಬ್ಬರಿಗೂ ಪಶ್ಚಾತಾಪ ಕಾಡುತ್ತದೆ. ಇದರಲ್ಲಿ ತಪ್ಪು ಯಾರದ್ದು? ಈಗ ಇಬ್ಬರು ನಾಯಕಿಯರ ತಂದೆಯರೂ ನಾಯಕ ತನ್ನ ಮಗಳ ಅಳಿಯನಾಗಬೇಕು ಎಂದುಕೊಳ್ಳುತ್ತಾರೆ. ದೇಹ ಹಂಚಿಕೊಂಡವನ ಜತೆಗೆ ಈಕೆ ಮದುವೆಗೆ ರೆಡಿ ಇಲ್ಲ, ಮತ್ತೊಬ್ಬಳ ಜತೆಗಿದ್ದವನ ಜತೆ ಮದುವೆ ಆಗಲು ಆಕೆಗೆ ಇಷ್ಟವಿಲ್ಲ.

ನಟನೆಯ ದುಡ್ಡಿನಲ್ಲಿ ಮಾಡಿರುವ ಚಿತ್ರ ಚೌಕಾಬಾರ: ವಿಕ್ರಮ್‌ ಸೂರಿ

ಮುಂದೇನು ಎಂಬುದು ಚಿತ್ರದ ಕತೆಯೆಂದು ನಂಬಿಕೊಂಡು ಸಿನಿಮಾ ನೋಡಿ.

 

click me!