Pranayam Review ಪ್ರೇಮ, ಪ್ರಣಯ ಮದುವೆ ಆಘಾತ

By Kannadaprabha News  |  First Published Feb 10, 2024, 12:52 PM IST

ರಾಜವರ್ಧನ್‌, ನೈನಾ ಗಂಗೂಲಿ, ಪವನ್ ಸೂರ್ಯ, ರಾಘವ ನಾಯಕ್ ನಟನೆಯ ಪ್ರಣಯಂ ಸಿನಿಮಾ ರಿಲೀಸ್ ಆಗಿದೆ....


ಆರ್‌.ಎಸ್‌.

ಶಾಕ್‌ ಒದಗಿಸುವ ಥ್ರಿಲ್ಲರ್‌ ಕತೆಗಳ ಪ್ರಕಾರವೇ ಇದೆ. ಅವು ತಣ್ಣಗೆ ಸಾಗುತ್ತಾ ಇದ್ದಕ್ಕಿದ್ದಂತೆ ಯಾವುದೋ ಒಂದು ತಿರುವಲ್ಲಿ ಆಘಾತ ಉಂಟು ಮಾಡುತ್ತದೆ. ಇದು ಅಂಥದ್ದೇ ಒಂದು ಕತೆ. ಹಸಿರು ಕಾಫಿ ತೋಟದ ಮಧ್ಯೆ ಹುಡುಗ, ಹುಡುಗಿ ಕಣ್ಣುಮುಚ್ಚಾಲೆಯಾಡುತ್ತಿರುವ ಸಂದರ್ಭದಲ್ಲಿ ಸೌಮ್ಯವಾಗಿ, ರಮ್ಯವಾಗಿ ಕತೆ ಸಾಗುತ್ತಿರುತ್ತದೆ. ಧುತ್ತನೆ ಆಘಾತವೊಂದು ಎದುರಾದಾಗ ಕತೆಯ ದಾರಿಯೇ ಬದಲಾಗುತ್ತದೆ.

Tap to resize

Latest Videos

ಕೆಲವು ಹಾಡುಗಳು, ಒಂದೆರಡು ಫೈಟು, ರೊಮ್ಯಾಂಟಿಕ್ ಆಗುಹೋಗುಗಳು ಇವೆಲ್ಲವೂ ಕಳೆದು ಕಥೆ ಒಂದು ಹಂತಕ್ಕೆ ಬರುವ ವೇಳೆಗೆ ನಿರ್ದೇಶಕರು ಕತೆಗೊಂದು ಟ್ವಿಸ್ಟು ಕೊಡುತ್ತಾರೆ. ಅನಂತರದ್ದು ಕುತೂಹಲದ ದಾರಿ. ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯಾಣ.

JUNI REVIEW ಬದುಕು ಡಿಸಾರ್ಡರ್‌, ಪ್ರೇಮ ಪ್ರೀ- ಆರ್ಡರ್‌

ನಿರ್ದೇಶನ: ಎಸ್. ದತ್ತಾತ್ರೇಯ

ತಾರಾಗಣ: ರಾಜವರ್ಧನ್‌, ನೈನಾ ಗಂಗೂಲಿ, ಪವನ್ ಸೂರ್ಯ, ರಾಘವ ನಾಯಕ್

ಇದೊಂದು ಯುವ ದಂಪತಿಯೇ ಕೇಂದ್ರದಲ್ಲಿರುವ ಸಿನಿಮಾ. ರೊಮ್ಯಾಂಟಿಕ್ ಕಥಾ ಹಂದರದ ಸಿನಿಮಾ. ಅದಕ್ಕೆ ಪೂರಕವಾಗಿ ರಾಜವರ್ಧನ್ ಮತ್ತು ನೈನಾ ಗಂಗೂಲಿ ಸುಂದರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಸೊಗಸಾದ ವಾತಾವರಣದಲ್ಲಿ ಕತೆ ನಡೆಯುತ್ತದೆ. ಆ ಸೊಬಗಿನ ದೃಶ್ಯಗಳನ್ನು ಛಾಯಾಗ್ರಾಹಕ ನಾಗೇಶ್‌ ಆಚಾರ್ಯ ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ರಾಜವರ್ಧನ್ ತನ್ನ ನಿಲುವಿನಿಂದಲೇ ಗಮನ ಸೆಳೆದರೆ. ನೈನಾ ಗಂಗೂಲಿ ಚೆಲುವಿನಿಂದಲೇ ತೆರೆ ಮೇಲಿನ ಬೆಳಕಾಗಿದ್ದಾರೆ.

Ondu Sarala Prema Kathe Review ಆಹ್ಲಾದಕರ ಅನುಭವ ಉಳಿಸುವ ಪ್ರೀತಿ ಕತೆ

ಈ ಚಿತ್ರದ ಮೊದಲಾರ್ಧ ಪೂರ್ತಿ ತರ್ಲೆ, ತುಂಟತನ, ಕೊಂಚ ಅನುಮಾನದಿಂದ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ಹೊಸತೊಂದು ಕತೆ ತೆರೆದುಕೊಂಡು ಭಿನ್ನವಾಗಿ ಸಾಗುತ್ತದೆ. ಕೊನೆಗೂ ಕುತೂಹಲಕರವಾಗಿ ಸಿನಿಮಾ ಮುಗಿಯುತ್ತದೆ. ಆದ್ದರಿಂದ ಇದೊಂದು ಮನಸ್ಸಲ್ಲಿ ಮುಗಿಯದ ಕತೆ. ಸಿನಿಮಾ ಮುಗಿದ ಬಳಿಕವೂ ಹುಡುಕಾಟ ಮುಂದುವರಿಯುವ ಕತೆ.

click me!