
ಆರ್.ಕೆ
ರೆಗ್ಯುಲರ್ ಪ್ರೇಮ ಕತೆಯ ಜತೆಗೆ ಸಾಮಾಜಿಕ ಸಂದೇಶ, ಸಂಬಂಧಗಳು, ಸ್ನೇಹದ ಮಹತ್ವ, ನೈಸರ್ಗಿಕ ಕೃಷಿಯ ಅಗತ್ಯವನ್ನು ಹೇಳುವ ಸಿನಿಮಾ ‘ಗೋಪಿಲೋಲ’. ಮೇಲ್ನೋಟಕ್ಕೆ ಜವಾಬ್ದಾರಿ ಮತ್ತು ಬೇಜವಾಬ್ದಾರಿಗಳ ನಡುವೆ ಸಾಗುವ ಪ್ರೇಮ ಕತೆಯನ್ನು ಒಳಗೊಂಡ ಸಿನಿಮಾ ಅನಿಸಿದರೂ ಒಂದು ಮಾಮೂಲಿ ಕಮರ್ಷಿಯಲ್ ಚಿತ್ರದಲ್ಲಿ ದೊಡ್ಡ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ. ಇದು ಮೆಚ್ಚುವಂತಹ ಅಂಶ.
ಜವಾಬ್ದಾರಿ ಇಲ್ಲದೆ ಓಡಾಡುತ್ತಿರುವ ನಾಯಕನ್ನು ಪ್ರೀತಿಸುವ ನಾಯಕಿ. ತನ್ನ ‘ಆಸೆ’ ಪೂರೈಸಿಕೊಂಡ ಮೇಲೆ ನಾಯಕಿಗೆ ಮೋಸ ಮಾಡಲು ಹೊರಡುವ ನಾಯಕನೇ ತನಗೆ ಬೇಕು ಎಂದು ಹಠ ಹಿಡಿದು ಕೂರುವ ನಾಯಕಿ. ಇಬ್ಬರ ನಡುವಿನ ಈ ಸಂಘರ್ಷ ಕೋರ್ಟ್ ಮೆಟ್ಟಿಲು ಹೋಗುವ ಹಂತಕ್ಕೆ ಬಂದಾಗ ಚಿತ್ರದಲ್ಲಿ ಮತ್ತೊಂದು ತಿರುವು ಬರುತ್ತದೆ. ಅದು ಫ್ಯಾಮಿಲಿ ಡ್ರಾಮಾಗೆ ಕಾರಣವಾಗಿ ಕೊನೆಗೆ ಹೀರೋ ಸಾಧನೆಗಳೇನು, ನಾಯಕಿ ಹಠದ ಹಿಂದಿನ ಗುಟ್ಟೇನೆಂದು ತಿಳಿಯುವುದು ಕತೆ ಸುಖಾಂತ್ಯವೋ, ದುಃಖಾಂತ್ಯವೋ ಎನ್ನುವ ಕುತೂಹಲಕ್ಕೆ ಸಿನಿಮಾ ನೋಡಬೇಕು.
ಚಿತ್ರ: ಗೋಪಿಲೋಲ
ತಾರಾಗಣ: ಮಂಜುನಾಥ್ ಅರಸ್, ನಿಮಿಷ, ಎಸ್ ನಾರಾಯಣ್, ಸಪ್ತಗಿರಿ, ಜೋಸೈಮನ್, ಪದ್ಮವಾಸಂತಿ, ಆರಾಧ್ಯ ಶಿವಕುಮಾರ್
ನಿರ್ದೇಶನ: ಆರ್ ರವೀಂದ್ರ
ಅನಿರೀಕ್ಷಿತ ತಿರುವುಗಳು, ಇಡೀ ಕತೆ ಹಳ್ಳಿ ಹಿನ್ನೆಲೆಯಲ್ಲಿ ಸಾಗುವುದು, ಅನುಭವಿ ಹಿರಿಯ ಮತ್ತು ಕಿರಿಯ ಕಲಾವಿದರ ಸಂಗಮ ಕೂಡ ಚಿತ್ರದ ಹೈಲೈಟ್ಸ್. ಗತ್ತು ತೋರುವ ಪಾತ್ರದಲ್ಲಿ ಎಸ್ ನಾರಾಯಣ್ ಹೊಸದಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕಿ ನಿಮಿಷ ಹಾಗೂ ಮಂಜುನಾಥ್ ಅರಸ್ ಪಾತ್ರಗಳು ಕತೆಗೆ ಪೂರಕವಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.