Lo Naveena ಚಿತ್ರ ವಿಮರ್ಶೆ: ನವೀನ್ ಸಜ್ಜು ಅಭಿನಯದ ಭಾವನಾತ್ಮಕ ಕಥೆ ಹೇಗಿದೆ?

Published : May 16, 2026, 04:30 PM IST
Lo Naveena

ಸಾರಾಂಶ

ಹಳ್ಳಿಯಿಂದ ನಗರಕ್ಕೆ ಹೋಗುವ ತರುಣನೊಬ್ಬನ ಆತ್ಮಕತೆ ಈ ಸಿನಿಮಾ. ಮುಗ್ಧತೆ ನಿಧಾನಕ್ಕೆ ಮಾಯವಾಗಿ ಪ್ರಬುದ್ಧತೆ ಆವರಿಸಿಕೊಳ್ಳುವ ಕಥನ. ಮಂಡ್ಯ ಭಾಗದ ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಅಲ್ಲೊಬ್ಬ ತರುಣ.

ಆರ್.ಬಿ.

ಹಳ್ಳಿಯಿಂದ ನಗರಕ್ಕೆ ಹೋಗುವ ತರುಣನೊಬ್ಬನ ಆತ್ಮಕತೆ ಈ ಸಿನಿಮಾ. ಮುಗ್ಧತೆ ನಿಧಾನಕ್ಕೆ ಮಾಯವಾಗಿ ಪ್ರಬುದ್ಧತೆ ಆವರಿಸಿಕೊಳ್ಳುವ ಕಥನ. ಮಂಡ್ಯ ಭಾಗದ ಒಂದು ಹಳ್ಳಿಯಲ್ಲಿ ಕತೆ ಆರಂಭವಾಗುತ್ತದೆ. ಅಲ್ಲೊಬ್ಬ ತರುಣ. ಕೊಂಚ ಅಮಾಯಕ. ಅವನಿಗೆ ಕೆಲವು ತರ್ಲೆ ಫ್ರೆಂಡ್ಸು. ಅವನಿಗೆ ಒಬ್ಬಳು ಮಾವನ ಮಗಳು. ಅಲ್ಲೊಂದು ಸಣ್ಣ ಪ್ರೇಮ. ಯಾವುದೇ ತಲೆಭಾರವಿಲ್ಲದೆ ಆರಾಮಾಗಿ ದಿನ ಕಳೆಯುವ ನಾಯಕನ ಬದುಕಲ್ಲಿ ತಿರುವೊಂದು ಬಂದ ಮೇಲೆ ಚಿತ್ರ ಮತ್ತೊಂದು ಹಂತಕ್ಕೆ ಹೋಗುತ್ತದೆ.

ಮೊದಲಾರ್ಧ ತುಂಬಾ ಹಳ್ಳಿಯ ಕಥನಗಳು. ತಾರುಣ್ಯದ ಪ್ರಸಂಗಗಳು. ಅಲ್ಲಿ ತುಂಟಾಟಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಹಾಸ್ಯಮಯವಾಗಿ ಕತೆ ಕಟ್ಟಿದ್ದಾರೆ. ದ್ವಿತೀಯಾರ್ಧದಲ್ಲಿ ಕೊಂಚ ಗಂಭೀರತೆ ಆವರಿಸುತ್ತದೆ. ಹೊಟ್ಟೆಪಾಡು ಮತ್ತು ಸಂಬಂಧಗಳ ತಾಕಲಾಟಗಳ ಮೇಲಾಟದಲ್ಲಿ ಆತನ ಬದುಕು ಹೇಗೆ ಸಾಗುತ್ತದೆ ಎಂಬುದನ್ನು ನಿರ್ದೇಶಕರು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಲವಲವಿಕೆ ಸಹಜವಾಗಿಯೇ ಕಡಿಮೆಯಾಗಿದೆ. ಹಾಗಂತ ತುಂಬಾ ಸಂಕೀರ್ಣವಾದ ಕತೆ ಅಂತೇನೂ ಇಲ್ಲ. ತಮಾಷೆಯ ಮಧ್ಯೆ ಸ್ವಲ್ಪ ಭಾವನೆಗಳ ಏರುಪೇರು.

ಚಿತ್ರ: ಲೋ ನವೀನ
ನಿರ್ದೇಶನ: ಪವನ್ ಧನುರ್ಧಾರಿ
ತಾರಾಗಣ: ನವೀನ್ ಸಜ್ಜು, ವರ್ಷ ಗಿರಿಧರ, ಅಪೂರ್ವ, ಪ್ರಕಾಶ್ ತುಮಿನಾಡು
ರೇಟಿಂಗ್: 3

ನಿರೂಪಣೆ ಬಿಗಿಯಾಗಿದ್ದರೆ ಕತೆಯ ಬಂಧ ಮತ್ತಷ್ಟು ಗಟ್ಟಿಯಾಗುತ್ತಿತ್ತು. ಗಾಯಕ ನವೀನ್ ಸಜ್ಜು ನಾಯಕನಾಗಿ ನಟಿಸಿದ್ದಾರೆ. ಹಳ್ಳಿ ಹುಡುಗನಾಗಿ ಗಮನ ಸೆಳೆಯುತ್ತಾರೆ. ವರ್ಷ ಗಿರಿಧರ, ಅಪೂರ್ವ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪ್ರಕಾಶ್‌ ತುಮಿನಾಡು ಎಂದಿನಂತೆ ಅವರ ಪಾತ್ರ ನಿಭಾಯಿಸಿದ್ದಾರೆ. ಇದೊಂದು ಹಳ್ಳಿಯ ಹಸಿರು ಮತ್ತು ನಗರದ ತೀವ್ರತೆಯ ಹಿನ್ನೆಲೆಯಲ್ಲಿ ನಡೆಯುವ ಸುದೀರ್ಘ ನಿಟ್ಟುಸಿರಿನ ಕಥನ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Share Movie Review: 'ಕರ್ಣ' ಖ್ಯಾತಿಯ ಕಿರಣ್ ರಾಜ್‌ ನಟನೆಯ 'ಶೇರ್‌' ಸಿನಿಮಾ ಹೇಗಿದೆ?
ಧ್ರುವ ಸರ್ಜಾ ಭರ್ಜರಿ, ಪ್ರೇಮ್ ಮಚ್ಚು ಅದ್ದೂರಿ: ಕೆಡಿ ಕ್ಲೈಮ್ಯಾಕ್ಸ್ ಟ್ವಿಸ್ಟ್ ನೋಡಿದ್ರೆ ಶಾಕ್ ಆಗ್ತೀರಾ!