ಕಿಚ್ಚ ನಟನೆಯ 3ಡಿ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಎರಡನೇ ಹಾಫ್‌ನಲ್ಲಿ ಬರುವ ರುಕ್ಕಮ್ಮ ಹಾಡಿಗಂತೂ ಪ್ರೇಕ್ಷಕ ದೊರೆ ಕುಣಿದು ಕುಪ್ಪಳಿಸಿದ್ದಾನೆ.
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ವಿಕ್ರಾಂತ್ ರೋಣ ಸಿನಿಮಾ ಇಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ನಿರ್ದೇಶ, ಜಾಕ್ ಮಂಜು ನಿರ್ಮಾಣವನ್ನು ಟೀಸರ್ ಮತ್ತು ಟ್ರೈಲರ್ ನೋಡಿಯೇ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಗುಮ್ಮಾ ಬಂತು ಗುಮ್ಮಾ ಅಂತ ಹೇಳುವ ಮೂಲಕ ಸ್ಕ್ರೀನ್ ಮೇಲೆ ಎಂಟ್ರಿ ಆಗುವ ಸುದೀಪ್‌ರನ್ನು ನೋಡಿ ವೀಕ್ಷಕರು ಸಿಳ್ಳೆ ಹೊಡೆದು ಕುಣಿದಿದ್ದಾರೆ.
ಚಿತ್ರದಲ್ಲಿ ನಿರ್ದೇಶಕ ಅನೂಪ್ ಸಹೋದರ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅಭಿನಯಿಸಿದ್ದಾರೆ. ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ರಕ್ಕಮ್ಮ ಹಾಡು ಸಖತ್ ವೈರಲ್ ಆಗಿತ್ತು. ಈಗ ಆನ್ ಸ್ಕ್ರೀನ್‌ನಲ್ಲಿ ಕಿಚ್ಚ ರಕ್ಕಮ್ಮ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಬೆಳ್ಳಂಬೆಳಗ್ಗೆ ನಡೆದ ಮಾರ್ನಿಂಗ್ ಶೋಗೆ ವಿಕ್ರಾಂತ್ ರೋಣ ಸಿನಿಮಾ ನೋಡಲು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಆಗಮಿಸಿದ್ದರು. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿರುವ ಪ್ರಿಯಾ ಜೊತೆ ಅನೂಪ್ ಭಂಡಾರಿ ಕುಟುಂಬ ಕೂಡ ಆಗಮಿಸಿತ್ತು.
‘ವಿಕ್ರಾಂತ್ ರೋಣ’ ವೇದಿಕೆಯಲ್ಲಿ ರಕ್ಕಮ್ಮ ಜಾಕ್ವೆಲಿನ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿದ ಕಿಚ್ಚ-ಸಲ್ಲು!
ಕಿಚ್ಚನ ಮೊದಲ 3D ಸಿನಿಮಾ ಇದಾಗಿದ್ದು ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿರುವ ಅಭಿಮಾನಿಗಳು ಫಸ್ಟ್ ಹಾಫ್ ನೋಡಿ ಥ್ರಿಲ್ ಆಗಿದ್ದಾರೆ. ಕೋಟಿಗೊಬ್ಬ 3 ನಂತರ ಬಿಡುಗಡೆ ಆಗಿರುವ ಸಿನಿಮಾ ಇದಾಗಿದ್ದು ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ. ಎರಡನೇ ಭಾಗದಲ್ಲಿ ರಕ್ಕಮ್ಮ ಎಂಟ್ರಿ ಕೊಡುವುದು. ವಿರೇಶ್ ಚಿತ್ರಮಂದಿರದಲ್ಲಿ ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಿಸಿದ್ದಾರೆ. 2D ಹಾಗೂ 3D ನೋಡಿ ಸಕ್ಸಸ್ ವಿಮರ್ಶೆ ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿ ನಾಡು ಚಂದು ಶೈಲಿಯಲ್ಲಿ ಚಿತ್ರ ವಿಮರ್ಶೆ ಕೊಟ್ಟಿದ್ದಾರೆ. ಕಿಚ್ಚ ವಿಶೇಷ ಚೇತನ ಅಭಿಮಾನಿ ಸಹ ಮೊದಲ ದಿನವೇ ಸಿನಿಮಾ ವೀಕ್ಷಕಿಸುವ ಮೂಲಕ ತಮ್ಮ ಪ್ರೀತಿ ತೋರಿಸುತ್ತಿದ್ದಾರೆ.ಇಂಟರ್ವಲ್‌ಗೂ ಮುನ್ನ ನಿರ್ದೇಶಕರು ಸೂಪರ್ ಟ್ವಿಸ್ಟ್ ಕೊಟ್ಟಿದ್ದಾರೆ, ದಯವಿಟ್ಟು ಬ್ರೇಕ್ ಬೇಡ ಸಿನಿಮಾ ಮುಂದುವರೆಸಿ ಸ್ಟೋರಿ ಸೂಪರ್ ಆಗಿದೆ ಎಂದು ಅಭಿಮಾನಿಗಳು ಸೀಟ್ ಬಿಟ್ಟಿಲ್ಲ.'ಹೊಸ ಚಾಲೆಂಗ್ ಮತ್ತು ಹೊಸ ಪ್ರಯೋಗಳಿಗೆ ಕೈ ಹಾಕುವುದರಲ್ಲಿ ಕಿಚ್ಚ ಸುದೀಪ್ ಮೊದಲು. ಸಿನಿಮಾ ಸೂಪರ್ ಆಗಿದೆ ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳು ವಿಮರ್ಶೆ ಬರೆದುಕೊಳ್ಳುತ್ತಿದ್ದಾರೆ.
20 ಕೋಟಿ, 15 ಸೆಟ್, ಒಂದೇ ಒಂದು ಮಾಸ್ಟರ್ಮೈಂಡ್; ವಿಕ್ರಾಂತ್ ರೋಣ ಪ್ರಪಂಚದ ರೌಂಡ್ಸ್
'ಗುರು ಏನ್ ತೆಗ್ದಿದ್ಯಾ ಗುರು ಫಸ್ಟ್ ಹಾಫ್. ಬಿಜಿಎಮ್, ಸಿನಿಮಾಟೋಗ್ರಫಿ ಮತ್ತು ಸುದೀಪ್ ಆಕ್ಟಿಂಗ್ ಸೂಪರ್ ಆಗಿದೆ. ಅಸಲಿ ಆಟ ಈಗ ಶುರುವಾಗಿದೆ. ಅನೂಪ್ ಭಂಡಾರಿ ಆಟ ಶುರು ಮಾಡಿದ್ದಾರೆ. 3D ಸಿನಿಮಾ ಗುರು ಕೇಳ್ಬೇಕಾ? ಆದರೆ ಮೊದಲ ಭಾಗ ರಂಗಿತರಂಗ ರೀತಿನೇ ಇದೆ' ಕಿಚ್ಚ ಟನ್ ಟ್ವಟಿರ್ ಖಾತೆ ಫೋಸ್ಟ್ ಮಾಡಿದೆ. 'ಏನ್ ಪ್ರೋಡಕ್ಷನ್ ಡಿಸೈನ್ ಗುರು. ಯಾವ ಹಾಲಿವುಡ್ ಸಿನಿಮಾಗೂ ಕಡಿಮೆ ಇಲ್ಲ ಇದು. ಸೂಪರ್ ಆಗಿ ಅಭಿನಯಿಸಿದ್ದೀರಾ ಸುದೀಪ್ ನೀವು...ಒಳ್ಳೆ ಇಂಟರ್‌ವಲ್ ಬ್ಯಾಂಗ್ ಕೊಟ್ಟಿದ್ದಾರೆ ಸಿನಿಮಾದಲ್ಲಿ'ಎಂದಿದ್ದಾರೆ ಅಭಿಮಾನಿಗಳು.
ಕರ್ನಾಟಕದಲ್ಲಿ ವಿಕ್ರಾಂತ್ ರೋಣ ದರ್ಬಾರ್
ಕರುನಾಡಿನಲ್ಲಿಯೂ ವಿಕ್ರಾಂತ್ ರೋಣ ಅಬ್ಬರ ಜೋರಾಗಿದೆ. ಮೊದಲ ದಿನ 325 ಸಿಂಗಲ್ ಸ್ಕ್ರೀನ್, 65 ಮಲ್ಟಿಪ್ಲೆಕ್ಸ್ನಲ್ಲಿ ಕಿಚ್ಚನ ಸಿನಿಮಾ ಬಿಡುಗಡೆಯಾಗುತ್ತಿದೆ. ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋಗಳನ್ನು ನಡೆಸುವ ಸಾಧ್ಯತೆ ಇದೆ. ಸುಮಾರು 900 ಸ್ಕ್ರೀನ್ 3ಡಿ ಹಾಗೂ 1600 ಸ್ಕ್ರೀನ್‌ನಲ್ಲಿ 2ಡಿ ವರ್ಷನ್ ಬಿಡುಗಡೆಯಾಗುತ್ತಿದೆ.
ಬೆಂಗಳೂರಿನಲ್ಲಿ ಕಿಚ್ಚನ ಖರಾಮತ್
ಬೆಂಗಳೂರಿನಲ್ಲಿ ಮೊದಲ ದಿನ ಸಾವಿರಕ್ಕೂ ಹೆಚ್ಚು ಶೋಗಳು ಇವೆ. ಬೆಂಗಳೂರಿನ 40 ಮಲ್ಟಿಪ್ಲೆಕ್ಸ್ನಲ್ಲಿ 800 ಶೋನಲ್ಲಿ ವಿಕ್ರಾಂತ್ ರೋಣ ಅಬ್ಬರಿಸುತ್ತಿದೆ. ಒಟ್ಟು 70 ಸಿಂಗಲ್ ಸ್ಕ್ರೀನ್‌ನಲ್ಲಿ 400 ಶೋ ಆಗಲಿದೆ. ಬೆಳಗ್ಗೆಯಿಂದ 6 ಗಂಟೆಗೆಯಿಂದ 'ವಿಕ್ರಾಂತ್ ರೋಣ' ಶೋ ಆರಂಭವಾಗುತ್ತಿದೆ. ಶಂಕರ್ ನಾಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ ಪ್ರಾರಭವಾಗುತ್ತಿದೆ. ಅಂದಹಾಗೆ ದೇಶದಲ್ಲೇ ಶಂಕರ್ ನಾಗ್ ಚಿತ್ರಮಂದಿರದಲ್ಲೆೇ ಮೊದಲ ಶೋ ಆಗಲಿದೆ.
ವಿಕ್ರಾಂತ್ ರೋಣಗೆ ಮೇನ್ ಥಿಯೇಟರ್ ಕಾನ್ಸೆಪ್ಟ್ ಇರುವುದಿಲ್ಲ. ಊರ್ವಶಿ ಚಿತ್ರಮಂದಿರಕ್ಕೆ ಬೆಳಗ್ಗೆ 7 ಗಂಟೆಗೆ ಅನೂಪ್ ಭಂಡಾರಿ ಮತ್ತು ಟೀಮ್ ಬರಲಿದ್ದಾರೆ. ವೀರೇಶ್ ಥಿಯೇಟರ್ ನಲ್ಲಿಯೂ ಸಹ ದೊಡ್ಡ ಮಟ್ಟದ ಸೆಲೆಬ್ರೇಷನ್ ಮಾಡಲು ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ.