
ಥ್ರಿಲ್ಲರ್ ಸಿನಿಮಾಗಳಿಗೆ ಚಿತ್ರರಂಗದಲ್ಲಿ ಸದಾ ಬೇಡಿಕೆ ಇರುತ್ತದೆ. ಈಗಾಗಲೇ ಈ ಜಾನರ್‌ನಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿದ್ದು, ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸಿವೆ. ಅದೇ ರೀತಿ ಓಟಿಟಿಯಲ್ಲೂ ಥ್ರಿಲ್ಲರ್ ಸಿನಿಮಾಗಳು ಸದ್ದು ಮಾಡುತ್ತಿವೆ. ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗಾಗಲೇ ಹಲವು ಬಗೆಯ ಸಿನಿಮಾಗಳು ಲಭ್ಯವಿದ್ದು, ಅನೇಕ ಚಿತ್ರಗಳು ಟ್ರೆಂಡಿಂಗ್‌ನಲ್ಲಿವೆ.
ವಿಶೇಷವಾಗಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಪ್ರೇಕ್ಷಕರ ಕ್ರೇಜ್ ಎಂದಿಗೂ ಕಡಿಮೆಯಾಗುವುದಿಲ್ಲ. ಥಿಯೇಟರ್‌ಗಳಲ್ಲಷ್ಟೇ ಅಲ್ಲ, ಓಟಿಟಿಯಲ್ಲೂ ಥ್ರಿಲ್ಲರ್ ಸಿನಿಮಾಗಳನ್ನು ವೀಕ್ಷಿಸಲು ಸಿನಿಪ್ರಿಯರು ಹೆಚ್ಚು ಆಸಕ್ತಿ ತೋರುತ್ತಾರೆ. ಮಿಸ್ಟರಿ ಕಥೆಗಳು, ಊಹಿಸಲಾಗದ ಟ್ವಿಸ್ಟ್‌ಗಳು ಮತ್ತು ಸಸ್ಪೆನ್ಸ್‌ನೊಂದಿಗೆ ಸಾಗುವ ಸಿನಿಮಾಗಳಿಗೆ ಪ್ರೇಕ್ಷಕರು ಸದಾ ಉತ್ತಮ ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಕೂಡ ಇಂತಹ ಕಥೆಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಈಗಾಗಲೇ ಓಟಿಟಿಯಲ್ಲಿ ಹಲವು ಸಿನಿಮಾಗಳು ಟ್ರೆಂಡ್ ಆಗುತ್ತಿದ್ದು, ವಿಶೇಷವಾಗಿ ಹಾರರ್, ಥ್ರಿಲ್ಲರ್, ಕ್ರೈಂ ಹಾಗೂ ರೊಮ್ಯಾಂಟಿಕ್ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇದೀಗ ನಾವು ಹೇಳುತ್ತಿರುವ ಸಿನಿಮಾವೊಂದು ಕೂಡ ಸಸ್ಪೆನ್ಸ್ ಥ್ರಿಲ್ಲರ್. ಈ ಸಿನಿಮಾ ಸದ್ಯ ಓಟಿಟಿಯಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಉತ್ತಮ ರೇಟಿಂಗ್ ಜೊತೆಗೆ ಗಮನಾರ್ಹ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ.
ಈ ಸಿನಿಮಾದ ಟ್ವಿಸ್ಟ್‌ಗಳು ತಲೆ ತಿರುಗಿಸುತ್ತವೆ!
ಈ ಸಿನಿಮಾದಲ್ಲಿ ಬರುವ ಒಂದೊಂದು ಸೀನ್ ಕೂಡ ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಕೂರಿಸುತ್ತದೆ. ಮುಂದಿನ ಸೀನ್‌ನಲ್ಲಿ ಏನಾಗಲಿದೆ? ಯಾವ ಟ್ವಿಸ್ಟ್ ಎದುರಾಗಲಿದೆ? ಎಂಬುದನ್ನು ಊಹಿಸುವುದೇ ಕಷ್ಟ. ಅಷ್ಟರಮಟ್ಟಿಗೆ ಸಿನಿಮಾ ಸಸ್ಪೆನ್ಸ್‌ನಿಂದ ಕೂಡಿದೆ. ಸದ್ಯ ಓಟಿಟಿಯಲ್ಲಿ ಉತ್ತಮ ರೇಟಿಂಗ್‌ನೊಂದಿಗೆ ಮುನ್ನುಗ್ಗುತ್ತಿರುವ ಈ ಸಿನಿಮಾ ಯಾವುದು ಎಂಬ ಕುತೂಹಲ ಸಹಜ.
ಅಷ್ಟಕ್ಕೂ ಈ ಸಿನಿಮಾ ಯಾವುದು ಗೊತ್ತಾ?
ಈ ಸಿನಿಮಾದ ಕಥೆ ಆಳವಾಗಿ ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆಯ ಹೆಸರು ಆರಿಕಾ. ಆಕೆಯ ಪತಿ ಏಕಾಏಕಿ ಕಾಣೆಯಾಗುತ್ತಿದ್ದಂತೆ ಆರಿಕಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತಾಳೆ. ಅನುಭವಿ ಪೊಲೀಸ್ ಇನ್‌ಸ್ಪೆಕ್ಟರ್ ಅರವಿಂದ್ ಅಶ್ವತ್ಥಾಮ ಈ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ತನಿಖೆ ಮುಂದುವರಿದಂತೆ ಆರಿಕಾ ಮನೆಯ ಬೇಸ್‌ಮೆಂಟ್‌ನಲ್ಲಿ ಆಕೆಯ ಪತಿಯ ಶವ ಪತ್ತೆಯಾಗುತ್ತದೆ. ಹೀಗಾಗಿ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ತಿರುವು ಪಡೆಯುತ್ತದೆ.
ಇಲ್ಲಿಂದ ಶುರುವಾಗುತ್ತದೆ ಅಸಲಿ ಟ್ವಿಸ್ಟ್!
ಪತಿಯ ಸಾವಿನ ಪ್ರಕರಣದಲ್ಲಿ ಆರಿಕಾಳೇ ಪ್ರಮುಖ ಆರೋಪಿ ಎಂಬ ಅನುಮಾನ ಮೂಡುತ್ತದೆ. ಇದರ ಬೆನ್ನಲ್ಲೇ ತನಿಖೆಯಲ್ಲಿ ಒಂದೊಂದೇ ಶಾಕಿಂಗ್ ರಹಸ್ಯಗಳು ಬಯಲಾಗುತ್ತವೆ. ಪತಿ ನಿಜವಾಗಿ ಹೇಗೆ ಸಾವನ್ನಪ್ಪಿದ? ಆತನನ್ನು ಕೊಂದವರು ಯಾರು? ಕೊಲೆಯ ಹಿಂದಿನ ಅಸಲಿ ಕಾರಣವೇನು? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯಬೇಕಾದರೆ ಸಿನಿಮಾ ನೋಡಲೇಬೇಕು. ಸಿನಿಮಾದಲ್ಲಿನ ಒಂದರ ಹಿಂದೆ ಮತ್ತೊಂದು ಬರುವ ಅನಿರೀಕ್ಷಿತ ಟ್ವಿಸ್ಟ್‌ಗಳು ಪ್ರೇಕ್ಷಕರನ್ನು ಎಡ್ಜ್ ಆಫ್ ದಿ ಸೀಟ್‌ನಲ್ಲಿ ಕೂರಿಸುವಂತಿವೆ.
ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಹೆಸರು ‘ತತ್ಸಮ ತದ್ಭವ’. ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ನವ ನಿರ್ದೇಶಕ ವಿಶಾಲ್ ಆತ್ರೇಯ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ.
ಸದ್ಯ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ವಿಶೇಷವೆಂದರೆ, ‘ತತ್ಸಮ ತದ್ಭವ’ ಸಿನಿಮಾ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಲಭ್ಯವಿದೆ. ಇನ್ನು ಸಸ್ಪೆನ್ಸ್, ಮಿಸ್ಟರಿ ಮತ್ತು ಒಂದರ ಹಿಂದೆ ಮತ್ತೊಂದು ಬರುವ ಟ್ವಿಸ್ಟ್‌ಗಳನ್ನು ಇಷ್ಟಪಡುವವರು ಈ ಸಿನಿಮಾವನ್ನು ಖಂಡಿತವಾಗಿಯೂ ತಮ್ಮ ವಾಚ್‌ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.