ನಿಗೂಢ ಪಕ್ಷಿಯ ಶಬ್ದ, ಬಳಿಕ ಒಂದೊಂದೇ ಸಾವು: 1994ರ ಕನ್ನಡದ ಥ್ರಿಲ್ಲಿಂಗ್‌ ಮಿಸ್ಟರಿ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಿ

Published : Sep 02, 2026, 06:37 PM ISTUpdated : Sep 03, 2026, 04:44 PM IST
Murder 1994 Kannada Movie

ಸಾರಾಂಶ

1994ರಲ್ಲಿ ತೆರೆಕಂಡ 'ಮರ್ಡರ್‌' ಕನ್ನಡ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಳ್ಳಿಯೊಂದರಲ್ಲಿ ನಡೆಯುವ ಸರಣಿ ಸಾವುಗಳ ಸುತ್ತ ಕಥೆ ಹೆಣೆಯಲಾಗಿದೆ. ಪ್ರತಿ ಸಾವಿಗೂ ಮುನ್ನ ಕೇಳಿಬರುವ ನಿಗೂಢ ಪಕ್ಷಿಯ ಶಬ್ದದ ರಹಸ್ಯವನ್ನು ಪೊಲೀಸರು ಹೇಗೆ ಭೇದಿಸುತ್ತಾರೆ ಎಂಬುದೇ ಚಿತ್ರದ ಹೈಲೈಟ್.

ನಿಗೂಢ ಪಕ್ಷಿಯ ಶಬ್ದ, ಅದರ ಬೆನ್ನಲ್ಲೇ ಆಗುವ ಒಂದೊಂದೇ ಸಾವುಗಳು, 1994ರಲ್ಲಿ ರಿಲೀಸ್‌ ಆದ ಕನ್ನಡದ ಸಸ್ಪೆನ್‌ ಥ್ರಿಲ್ಲರ್‌ ಸಿನಿಮಾ ಪ್ರೇಕ್ಷಕರನ್ನು ಸೀಟ್‌ನಲ್ಲಿ ತುದಿಯಲ್ಲಿ ಕೂರಿಸುವುದು ನಿಶ್ಚಿತ. ಈಗಿನ ಕಾಲಸ ಸಿನಿಮಾಗಳಂತೆ ಮಾಸ್‌ ಆಗಿ ಥ್ರಿಲ್ಲರ್‌ ಸ್ಪಸೆನ್ಸ್‌ ಮೂಡಿಬರದೇ ಇದ್ದರೂ ನೋಡುಗರನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಂಡ್ಯ ನಾಗರಾಜ್‌ ನಿರ್ದೇಶನದ ಈ ಸಿನಿಮಾದಲ್ಲಿ ಸುರೇಶ್‌ ಹೆಬ್ಳೀಕರ್‌, ಅಂಜಲಿ, ಪ್ರಕಾಶ್‌ ರಾಜ್‌, ಎಂವಿ ವಾಸುದೇವ್‌ ರಾವ್‌ ಸೇರಿದಂತೆ ಹಲವರು ನಟಿಸಿದ್ದರು. ಗುಣ ಸಿಂಗ್‌ ಸಂಗೀತ ನಿರ್ದೇಶನ ನೀಡಿದ ಈ ಸಿನಿಮಾದ ಹೆಸರು 'ಮರ್ಡರ್‌'.

ಹಳ್ಳಿಯೊಂದರಲ್ಲಿ ನಡೆಯುವ ಸರಣಿ ಸಾವುಗಳು ಮತ್ತು ಅದರ ರಹಸ್ಯವನ್ನು ಪತ್ತೆ ಹಚ್ಚುವ ಪೊಲೀಸರ ಕಥೆಯನ್ನು ಸಿನಿಮಾ ಹೊಂದಿದೆ. ಈ ಚಿತ್ರದಲ್ಲಿ ಬರುವ 'ನಿಗೂಢ ಪಕ್ಷಿಯ ಶಬ್ದ' (Mysterious Bird Song) ಇಡೀ ಕಥೆಯ ಅತ್ಯಂತ ಪ್ರಮುಖ ಮತ್ತು ರೋಮಾಂಚಕ ತಿರುವುಗಳಲ್ಲಿ ಒಂದಾಗಿದೆ. ಚಿತ್ರದ ಸಸ್ಪೆನ್ಸ್ ಕಾಯ್ದುಕೊಳ್ಳಲು ಈ ಶಬ್ದವನ್ನು ಅದ್ಭುತವಾಗಿ ಬಳಸಿಕೊಳ್ಳಲಾಗಿತ್ತು.

ಹಳ್ಳಿಯಲ್ಲಿ ಯಾರಾದರೂ ಕೊಲೆಯಾಗುವ ಮುನ್ನ ಅಥವಾ ಯಾವುದೇ ಅಹಿತಕರ ಘಟನೆ ನಡೆಯುವ ಮೊದಲು ಈ ವಿಚಿತ್ರ ಹಾಗೂ ಭಯಾನಕ ಪಕ್ಷಿಯ ಧ್ವನಿ ಕೇಳಿಬರುತ್ತದೆ. ಹೀಗಾಗಿ, ಗ್ರಾಮಸ್ಥರಲ್ಲಿ ಈ ಹಕ್ಕಿಯ ಶಬ್ದ ಕೇಳಿಸಿದರೆ ಯಾರೋ ಒಬ್ಬರು ಸಾಯುತ್ತಾರೆ ಎಂಬ ಮೂಢನಂಬಿಕೆ ಮತ್ತು ತೀವ್ರ ಭಯ ಸೃಷ್ಟಿಯಾಗುತ್ತದೆ. ಚಿತ್ರದಲ್ಲಿ ನಟ ಮನ್‌ದೀಪ್ ರಾಯ್ ಅವರು ಫಾರೆಸ್ಟ್ ಗಾರ್ಡ್ (ಅರಣ್ಯ ರಕ್ಷಕ) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ಬರುವ ಇಂತಹ ವಿಚಿತ್ರ ಶಬ್ದಗಳು ಮತ್ತು ಹಳ್ಳಿಯಲ್ಲಿ ನಡೆಯುತ್ತಿರುವ ನಿಗೂಢ ಸಾವುಗಳ ನಡುವೆ ಏನೋ ಲಿಂಕ್ ಇದೆ ಎಂಬುದನ್ನು ಇವರು ಮತ್ತು ಪೊಲೀಸ್‌ ಅಧಿಕಾರಿಗಳಾದ ಸುರೇಶ್ ಹೆಬ್ಳೀಕರ್ ಮತ್ತು ಪ್ರಕಾಶ್ ರೈ ಪತ್ತೆಹಚ್ಚಲು ಹೊರಡುತ್ತಾರೆ. ಚಿತ್ರದ ಕ್ಲೈಮ್ಯಾಕ್ಸ್ ಹತ್ತಿರವಾಗುತ್ತಿದ್ದಂತೆ ಈ ಶಬ್ದದ ರಸಹ್ಯವೇನು ಅನ್ನೋದು ಪ್ರೇಕ್ಷಕರಿಗೆ ಗೊತ್ತಾಗುತ್ತದೆ. ಈ ಶಬ್ದವೇ ಚಿತ್ರಕ್ಕೆ ಸೂಪರ್ ನ್ಯಾಚುರಲ್ ಅಥವಾ ಸೈಕೋ-ಥ್ರಿಲ್ಲರ್ ಶೈಲಿಯ ಕಳೆ ನೀಡಿದೆ.

ಕುತೂಹಲಕಾರಿ ಟ್ವಿಸ್ಟ್‌-ಟರ್ನ್‌ ಹೊಂದಿರುವ ಸಿನಿಮಾ

ಒಂದು ಸಣ್ಣ ಹಳ್ಳಿಯಲ್ಲಿ ಆರಂಭವಾಗುವ ಕಥೆ ಇದು. ಆ ಊರಿನಲ್ಲಿ ಹಠಾತ್ತಾಗಿ ಕೆಲವು ನಿಗೂಢ ಸಾವುಗಳು ಸಂಭವಿಸಲು ಪ್ರಾರಂಭಿಸುತ್ತವೆ. ಈ ಸಾವುಗಳು ಇಡೀ ಗ್ರಾಮದಲ್ಲಿ ಭಯದ ವಾತಾವರಣ ಹಾಗೂ ಮೂಢನಂಬಿಕೆ ಸೃಷ್ಟಿಯಾಗಲು ಆರಂಭವಾಗುತ್ತದೆ. ತನಿಖೆ ಮುಂದುವರಿದಂತೆ, ಹಳ್ಳಿಯ ಪ್ರಮುಖ ವ್ಯಕ್ತಿಗಳು ಮತ್ತು ಕೆಲವು ವಿಚಿತ್ರ ನಡವಳಿಕೆಯುಳ್ಳ ಪಾತ್ರಗಳ ಮೇಲೆ ಪೊಲೀಸರಿಗೆ ಅನುಮಾನ ಬರುತ್ತದೆ. ಪ್ರತಿಯೊಬ್ಬ ಪಾತ್ರಕ್ಕೂ ಕೊಲೆ ಮಾಡಲು ತಮ್ಮದೇ ಆದ ರಹಸ್ಯ ಕಾರಣಗಳಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ.

ಹಂತಕ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಹಾದಿಯಲ್ಲಿ ಸಿನಿಮಾವು ಹಲವು ಕುತೂಹಲಕಾರಿ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಅಂತಿಮವಾಗಿ ಕ್ಲೈಮ್ಯಾಕ್ಸ್‌ನಲ್ಲಿ ಕೊಲೆಗಾರ ಯಾರು ಮತ್ತು ಆತ ಈ ಕೊಲೆಗಳನ್ನು ಏಕೆ ಮಾಡಿದ ಎಂಬ ಆಘಾತಕಾರಿ ಸತ್ಯ ಹೊರಬರುತ್ತದೆ.

ಯೂಟ್ಯೂಬ್‌ನಲ್ಲಿ ಫ್ರೀಯಾಗಿ ನೋಡಿ..

ಸಖತ್‌ ಥ್ರಿಲ್ಲರ್‌ ಅಂಶವನ್ನು ಹೊಂದಿರುವ ಈ ಸಿನಿಮಾ ಕಳೆದ 11 ವರ್ಷಗಳಿಂದ ಯೂಟ್ಯೂಬ್‌ನಲ್ಲಿದೆ. ಎಸ್‌ಆರ್‌ಎಸ್‌ ಮೀಡಿಯಾ ವಿಷನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಸಿನಿಮಾ ಇದ್ದು ಇಲ್ಲಿಯವರೆಗೂ 1.4 ಮಿಲಿಯನ್‌ ವೀಕ್ಷಣೆ ಕಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಥ್ರಿಲ್ಲರ್ ಪ್ರಿಯರೇ.. OTTಯಲ್ಲಿ ಸದ್ದು ಮಾಡ್ತಿದೆ ಮೇಘನಾ ರಾಜ್ ಸಿನಿಮಾ: ಸೀನ್‌ ಸೀನ್‌ಗೂ ಊಹಿಸಲಾಗದ ಟ್ವಿಸ್ಟ್!
Sardar 2 Review: ಸ್ಪೈ ಮಿಷನ್‌ನಲ್ಲಿ ಆಶಿಕಾ-ಕಾರ್ತಿ ಅಬ್ಬರ: ಇಲ್ಲಿದೆ ಪ್ಲಸ್-ಮೈನಸ್ ರಿವ್ಯೂ