
ಕೆಂಡಪ್ರದಿ
ಯಶಸ್ವಿ 99 ಎಪಿಸೋಡ್ ಮಾಡಿ 100 ಎಪಿಸೋಡ್‌ಗೆ ಪ್ಲಾನ್ ಮಾಡುವಾಗ ಪವನ್ ಕುಮಾರ್ ಎಂಟ್ರಿಯಾಗುತ್ತದೆ. ಅಲ್ಲಿಗೆ ಅಂದುಕೊಂಡಿದ್ದೆಲ್ಲವೂ ತಲೆಕೆಳಗು.
ಮತ್ತೊಂದು ಮಗ್ಗುಲಲ್ಲಿ ಶೀಲಂ (ಅಶು ಬೆದ್ರ) ಅಮೃತ (ಸಂಗೀತ ಭಟ್) ಪ್ರೀತಿ ಒಂದಾಗಲು ಇದೇ ‘ಕಾರಣ’ ಎಪಿಸೋಡ್ ಹೆತ್ತವರ ಕಾರಣದಿಂದ ಅಡ್ಡಿಯಾಗಿರುತ್ತದೆ. ಪ್ರೀತಿಗಾಗಿ ಎಪಿಸೋಡ್ ಅನ್ನು 100ಕ್ಕೆ ಕೊನೆ ಮಾಡಬೇಕು ಎಂದುಕೊಂಡರೂ ಅದು ಸುಲಭಕ್ಕೆ ಕೊನೆಯಾಗುವುದಿಲ್ಲ.
ಪವನ್ ಕುಮಾರ್ ಹಾಕಿದ ಓಪನ್ ಚಾಲೆಂಜ್ ಒಪ್ಪಿ, ಅವನು ತೋರಿದ ಮನೆಗೆ ಎಪಿಸೋಡ್ ಮಾಡಲು ಹೋದ ಅಶು ಬೆದ್ರ ಸಮಸ್ಯೆಗಳ ಸುಳಿಯಲ್ಲಿ ಬಂಧಿಯಾಗುತ್ತಾನೆ. ಇದಾದ ಮೇಲೆ ಅತುಲ್ ಕುಲಕರ್ಣಿ ಎಂಟ್ರಿ. ಅಲ್ಲಿಂದ ಚಿತ್ರ ರೋಚಕವಾಗುತ್ತಾ ಸಾಗುತ್ತದೆ. ಮುಂದೇನು ಎನ್ನುವ ಕುತೂಹಲ ನೋಡುಗನ ಮನದೊಳಗೆ ಬೆಳೆಯುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕರ ಶ್ರಮ ಸಾರ್ಥಕ.
ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಅಂಶಗಳನ್ನು ಹದವಾಗಿ ಬೆರೆಸಿ, ಅದಕ್ಕೊಂದಿಷ್ಟು ರೋಚಕತೆಯನ್ನು ಸೇರಿಸಿ ಒಳ್ಳೆಯ ಚಿತ್ರ ಮಾಡಿದೆ ಅಶು ಬೆದ್ರ ಮತ್ತು ತಂಡ. ಪ್ರಸ್ತುತ ಮಾಧ್ಯಮಗಳ ನಂಬರ್ ಹಪಾಹಪಿಯನ್ನು ವಿಡಂಬನೆ ಮಾಡುತ್ತಲೇ ಸಾಗುವ ಕತೆ ಕಡೆಗೆ ಹುಡುಕಿ ಹೊರಟ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುತ್ತಾ ನೋಡುಗನ ಒಳಗೂ ಪ್ರಶ್ನೆಗಳನ್ನು ಮೂಡಿಸುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.