ಪ್ರಿಯಾ ಕೆರ್ವಾಶೆ

ರೂಮ್‌ ಲಾಕ್‌ ಆಗಿದೆ. ಅರ್ಧ ಗಂಟೆ ಓಪನ್‌ ಆಗಲ್ಲ. ಒಬ್ಬ ಜನಪ್ರಿಯ ಚಾನೆಲ್‌ ವ್ಯಕ್ತಿ ಮತ್ತು ಒಬ್ಬ ಪ್ರೊಫೆಸರ್‌ ಕೋಣೆಯಲ್ಲಿ ಬಂಧಿಯಾಗಿದ್ದಾರೆ. ಪ್ರೊಫೆಸರ್‌ ಮುಖದಲ್ಲಿ ವ್ಯಂಗ್ಯ, ವಿಷಾದವಿದೆ. ಕೈಯಲ್ಲೊಂದು ಗನ್‌ ಸಹ. ಆ ಚಾನೆಲ್‌ ವ್ಯಕ್ತಿಗೆ ಪ್ರೊಫೆಸರ್‌ ಒಂದು ಕತೆ ಹೇಳ್ತಾನೆ, ಅದೊಂಥರಾ ನಮ್ಮೆಲ್ಲರ ಕಥೆಯೂ. ಆ ಗನ್‌ನ ಗುರಿ ನಮ್ಮತ್ತಲೂ ಫೋಕಸ್‌ ಆಗುತ್ತೆ..

ಪುಟ್ಟಣ್ಣ ಕಣಗಾಲ್ ಕುಟುಂಬದಿಂದ ರಿಷಬ್ ಶೆಟ್ರಿಗೆ ಸ್ಪೆಷಲ್ ಗಿಫ್ಟ್!

ಮಂಗಳೂರಿನ ಕಡಲ ಬದಿಯ ಒಂದೂರು. ಅಲ್ಲೊಬ್ಬ ಯುವಕ, ಅವನ ಹುಡುಗಿ. ದೊಗಲೆ ಚಡ್ಡಿ ಹಾಕಿ ಗಿರಗಿಟ್ಲೆ ಹಿಡಿದು ನಗುವ ಪುಟಾಣಿ. ಇಡೀ ದಿನದ ಅದದೇ ಘಟನೆ, ನಾಳೆಯೂ ನಾಡಿದ್ದೂ ರಿಪೀಟ್‌ ಆದ್ರೆ ಬುದ್ಧಿವಂತನೊಬ್ಬ ಏನು ಮಾಡಬಹುದು, ಅವನ ಕೈ ತಪ್ಪಿದ ಒಂದು ಘಟನೆ ಹೇಗೆ ಇಡೀ ಕಥೆಗೆ ಟರ್ನ್‌ ಕೊಡಬಹುದು.. ‘ಗಿರ್‌ಗಿಟ್‌’ ಮ್ಯಾಜಿಕಲ್‌ ರಿಯಲಿಸಂನ ಪೀಸ್‌ನಂತಿರುವ ಸಿನಿಮಾ. ಇದರಲ್ಲಿ ಮ್ಯಾಜಿಕ್‌ ಕಾಣುತ್ತೆ.

ಬ್ರಿಟಿಷರ ಕಾಲದ ಪಡುವಾರ ಹಳ್ಳಿ. ತನ್ನಿಡೀ ಕುಟುಂಬವನ್ನು ಕೊಂದ ಆ ಪೊಲೀಸ್‌ ಅಧಿಕಾರಿ ಕ್ಷೌರಿಕನ ಬಳಿ ಕ್ಷೌರ ಮಾಡಿಸಲು ಬರುತ್ತಾನೆ. ಇನ್ನೊಂದೆಡೆ ಕಾಮನ ಬಿಲ್ಲಿಗೆ ಕೈಚಾಚುವ ಮಗಳಿದ್ದಾಳೆ. ಕಡಲ ದಂಡೆಯಲ್ಲಿ ಹುಚ್ಚನಂಥಾ ವ್ಯಕ್ತಿಯ ಕೈಗೆ ಸಿಕ್ಕಿಬಿದ್ದು ಭಯದಲ್ಲಿ ತತ್ತರಿಸುವ ಚೆಲುವೆಯಿದ್ದಾಳೆ.

ಚಿತ್ರ ವಿಮರ್ಶೆ : ಬ್ರಹ್ಮಚಾರಿ

‘ಕಥಾ ಸಂಗಮ’ ಹೆಸರಿಗೆ ಇದು ಶಾರ್ಟ್‌ ಫಿಲಂ. ಆದರೆ ಅನುಭವದಲ್ಲಿ ಏಕಕಾಲದಲ್ಲಿ ಏಳು ಸಿನಿಮಾ ನೋಡಿದ ಅನುಭವ. ಅದು ಗುಂಗಿ ಹುಳುವಿನಂತೆ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ತಾಂತ್ರಿಕತೆ, ಬಿಗಿ ಕತೆ, ನಿರೂಪಣೆಯಲ್ಲಿ ನಿಖರತೆ. ಜೊತೆಗೆ ಸಿನಿಮಟೋಗ್ರಫಿ, ಕಾಡುವ ಹಾಡುಗಳು. ಒಂದೆರಡು ಚಿತ್ರಗಳಲ್ಲಿ ತುಸು ಎಳೆದಂತೆ ಕಾಣುತ್ತದೆ, ಉದಾ: ರಿಷಬ್‌ ಅವರ ಸಾಗರ ಸಂಗಮ. ಇಲ್ಲಿ ಒಂದು ಹಂತದ ಬಳಿಕ ಭಯವೂ ಕಾಮನ್‌ ಆಗಿ ಪ್ರೇಕ್ಷಕ ನಿರಾಳನಾಗುತ್ತಾನೆ. ‘ಉತ್ತರ’ ಸಿನಿಮಾದಲ್ಲಿ ಒಂದಿಷ್ಟುನಾಟಕೀಯತೆಯನ್ನು ತಂದಿದ್ದು ಸಹಜತೆ ಭಂಗ ತಂದಂತನಿಸುತ್ತದೆ. ಇಂಥಾ ಸಣ್ಣ ಪುಟ್ಟಮಿತಿಗಳನ್ನು ಬಿಟ್ಟರೆ ಎರಡೂವರೆ ಗಂಟೆಯಲ್ಲಿ ಏಳು ಒಳ್ಳೆಯ ಸಿನಿಮಾ ನೋಡಿದ ತೃಪ್ತಿ ಸಿಗೋದರಲ್ಲಿ ಅನುಮಾನ ಇಲ್ಲ.

ಅಮಾಯಕತೆಯೇ ಮೂರ್ತಿವೆತ್ತಂತಿರುವ ಲಚ್ಚವ್ವ ಪಾತ್ರಧಾರಿ ಪಾರವ್ವ, ರಾಜ್‌. ಬಿ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಕಿಶೋರ್‌, ಪ್ರದೀಪ್‌ ಬೆಳವಾಡಿ, ಅವಿನಾಶ್‌ ಮೊದಲಾದರು ಪಾತ್ರವೇ ಆಗಿ ಹೋಗಿದ್ದಾರೆ. ಕತೆ, ತಾಂತ್ರಿಕತೆ ಎರಡರಲ್ಲೂ ಪಾರಮ್ಯವಿದೆ.