ಸಪ್ತಾ ಕಾವೂರು, ರಾಜೇಶ್ ನಟರಂಗ, ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಯಡಿಯೂರಪ್ಪ, ಡಾ. ಕೆ. ಸುಧಾಕರ್ ಅಭಿನಯಿಸಿರುವ ತನುಜಾ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ ನೋಡಿ...
ರಾಜೇಶ್ ಶೆಟ್ಟಿ
ವೈದ್ಯೆಯಾಗಬೇಕು, ಅದಕ್ಕಾಗಿ ನೀಟ್ ಪರೀಕ್ಷೆ ಬರೆಯಬೇಕು ಅನ್ನುವುದು ಶಿವಮೊಗ್ಗ ಶಿಕಾರಿಪುರ ಮಲ್ಲೇನಹಳ್ಳಿಯ ತನುಜಾ ಎಂಬ ಹುಡುಗಿಯ ಆಸೆ. ಆದರೆ ಕೊರೋನಾ ಸಂದರ್ಭದಲ್ಲಿದ್ದ ಕೆಲವು ನೀತಿ ನಿಯಮಗಳಿಂದ ಆಕೆಗೆ ಪರೀಕ್ಷೆ ಬರೆಯುವ ಅವಕಾಶ ನಿರಾಕರಿಸಲಾಗುತ್ತದೆ ಎಂಬಲ್ಲಿಂದ ಕತೆ ಶುರು. ಈ ಕತೆಯನ್ನು ತಮ್ಮ ಅಂಕಣದಲ್ಲಿ ಮೊದಲು ಬರೆದಿದ್ದು ಪತ್ರಕರ್ತ ವಿಶ್ವೇಶ್ವರ ಭಟ್. ಆ ಕತೆಯನ್ನು ಮೂಲಕ್ಕೆ ಚ್ಯುತಿ ಬರದಂತೆ ಎನ್ನುವ ಹಾಗೆ ಸಿನಿಮಾ ರೂಪಕ್ಕೆ ತಂದಿರುವುದು ನಿರ್ದೇಶಕರು.
undefined
ಇದೊಂದು ಸಾಕ್ಷ್ಯಚಿತ್ರ ಮಾದರಿಯ, ಆದರೆ ಆ ಮಾದರಿಯನ್ನು ಮೀರಲು ಯತ್ನಿಸಿದ ಸಿನಿಮಾ. ಮೂಲಕತೆ ಎಷ್ಟಿತ್ತೋ ಅಷ್ಟನ್ನೇ ಎಷ್ಟುರೋಚಕವಾಗಿ ಹೇಳಲು ಸಾಧ್ಯವೋ ಅಷ್ಟುರೋಚಕವಾಗಿ ಹೇಳಲು ಯತ್ನಿಸಿದ್ದಾರೆ. ನಿಜ ಪಾತ್ರಗಳನ್ನೇ ಸಿನಿಮಾದಲ್ಲಿ ತಂದಿದ್ದಾರೆ. ಸ್ಫೂರ್ತಿ ಕತೆ ಅಂತ ಕರೆಸಿಕೊಳ್ಳಲು ಏನೆಲ್ಲಾ ಬೇಕೋ ಅದನ್ನೆಲ್ಲಾ ಮಾಡಿದ್ದಾರೆ. ಅಷ್ಟರ ಮಟ್ಟಿಗೆ ಅವರಿಗೆ ನಿಖರತೆ ಇದೆ. ಆದರೆ ಚಿತ್ರಕತೆ ಬರೆಯುವಾಗ ಅವರ ಮನಸ್ಸು ಧಾರಾಳ.
ಮೊದಲಾರ್ಧದಲ್ಲಿ ಕತೆಗೊಂದು ವೇಗ ಇದೆ. ದ್ವಿತೀಯಾರ್ಧದಲ್ಲೂ ವೇಗ ಇದೆ, ಆದರೆ ಅದು ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ಒಂದು ಪ್ರಯಾಣದ ದೃಶ್ಯ ಕಾರು, ಟಾರು ನೋಡುತ್ತಲೇ ಮುಗಿಯುತ್ತದೆ. ಪ್ರೇಕ್ಷಕನಿಗೂ ಮನಸ್ಸಲ್ಲೇ ಪ್ರಯಾಣ ಮಾಡಿದ ಸುಸ್ತು ಆವರಿಸುತ್ತದೆ. ತನುಜಾ ಗುರಿ ಮುಟ್ಟಿದಾಗ ನೋಡುವವರಿಗೂ ನೆಮ್ಮದಿ.
NATA BHAYANKARA REVIEW ಒಳ್ಳೆ ಹುಡುಗ ಪ್ರಥಮನ ಭಯಂಕರ ಆಟಗಳು
ತಾರಾಗಣ: ಸಪ್ತಾ ಕಾವೂರು, ರಾಜೇಶ್ ನಟರಂಗ, ವಿಶ್ವೇಶ್ವರ ಭಟ್, ಸಂಧ್ಯಾ ಅರಕೆರೆ, ಯಡಿಯೂರಪ್ಪ, ಡಾ. ಕೆ. ಸುಧಾಕರ್
ನಿರ್ದೇಶನ: ಹರೀಶ್ ಎಂ.ಡಿ. ಹಳ್ಳಿ
ರೇಟಿಂಗ್: 3
ಪ್ರಯತ್ನ ಮುಖ್ಯ ಅನ್ನುವುದು ಈ ಚಿತ್ರದ ಮೂಲ ಉದ್ದೇಶ. ಪ್ರಾಮಾಣಿಕ ಪ್ರಯತ್ನಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ ಅನ್ನುವುದು ನೀತಿ ಪಾಠ. ಸಪ್ತಾ ಕಾವೂರು, ಸಂಧ್ಯಾ ಅರಕೆರೆ ಭಾವಪೂರ್ಣ ಅಭಿನಯದಿಂದ ಗಮನ ಸೆಳೆಯುತ್ತಾರೆ. ರಾಜೇಶ್ ನಟರಂಗ ಪಾತ್ರ ನಿರ್ವಹಣೆ ಎಷ್ಟುಸೊಗಸಾಗಿದೆ ಎಂದರೆ ಆ ಪಾತ್ರದ ಕುರಿತು ಗೌರವ ಮೂಡಿಸುತ್ತದೆ. ಸಚಿವ ಡಾ.ಕೆ. ಸುಧಾಕರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿಜ ಜೀವನದ ಪಾತ್ರ ನಿರ್ವಹಿಸಿದ್ದಾರೆ. ವಿಶ್ವೇಶ್ವರ್ ಭಟ್ ಅವರದಂತೂ ಪ್ರಮುಖ ಪಾತ್ರ. ಅವರ ಮಾತುಗಾರಿಕೆ, ಆಫೀಸು, ಮನೆ, ಗೃಹ ಕಚೇರಿಯ ಗೇಮ್ ಆಫ್ ಥ್ರೋನ್ಸ್ ಚೇರು, ಅವರ ಕಾರ್ಯವೈಖರಿ ಎಲ್ಲವನ್ನೂ ಅಗಾಧವಾಗಿ ಬೆರಗಾಗುವಂತೆ ತೋರಿಸಿರುವುದು ಈ ಚಿತ್ರದ ವಿಶೇಷತೆ.
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಬಳಿಕ ಎಲ್ಲೋಗಿದ್ರಿ? ಇಂಟ್ರಸ್ಟಿಂಗ್ ವಿಚಾರ ಬಿಚ್ಚಿಟ್ಟ 'ತನುಜಾ' ನಟಿ ಸಪ್ತಾ
ನೈಜ ಘಟನೆ ಆಧರಿತ ಸಿನಿಮಾದಲ್ಲಿ ಪಾಠ ಅಥವಾ ಸ್ಫೂರ್ತಿ ಸಿಗುತ್ತದೆ. ಇಲ್ಲಿ ಪಾಠ ಮತ್ತು ಸ್ಫೂರ್ತಿ ಎರಡೂ ಉಂಟು.