ಹರೀಶ್ ರಾಜ್, ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಅಮಿತ್, ಸಂತೋಷ್ ನಟನೆಯ ಪ್ರೇತ ಸಿನಿಮಾ ರಿಲೀಸ್ ಆಗಿದೆ.
ಆರ್.ಕೆ
ನಿರ್ದೇಶಕ, ನಿರ್ಮಾಪಕ ಹಾಗೂ ನಟ ಹರೀಶ್ ರಾಜ್ ಅವರು ತುಂಬಾ ವರ್ಷಗಳ ನಂತರ ತೆರೆ ಮೇಲೆ ದೆವ್ವದ ಜತೆ ಬಂದಿದ್ದಾರೆ. ಸಸ್ಪೆನ್ಸ್ ನೆರಳನ್ನೇ ಹೆಚ್ಚಾಗಿ ನಂಬಿಕೊಂಡಿರುವ ‘ಪ್ರೇತ’ ಚಿತ್ರದಲ್ಲಿ ಆತ್ಮವೊಂದು ಓಡಾಡುತ್ತಿದೆ. ಈ ಆತ್ಮ ಯಾರದ್ದು, ಹುಡುಗಿಯೊಬ್ಬಳು ನಾಪತ್ತೆ ಆಗಿದ್ದಾಳೆ. ಆಕೆ ಎಲ್ಲಿ ಹೋದಳು, ಬದುಕಿದ್ದಾಳೆಯೇ, ಸತ್ತಿದ್ದಾಳೆಯೇ ಎನ್ನುವ ಪ್ರಶ್ನೆಗಳ ಹುಟ್ಟಿಗೆ ಕಾರಣವಾಗುತ್ತಾ ಕೊನೆಯಲ್ಲಿ ಎಲ್ಲಾ ಪ್ರಶ್ನೆಗಳ ಗುಟ್ಟನ್ನು ರಟ್ಟು ಮಾಡುತ್ತದೆ.
ತಾರಾಗಣ: ಹರೀಶ್ ರಾಜ್
ನಿರ್ದೇಶನ: ಹರೀಶ್ ರಾಜ್, ಅಹಿರಾ ಶೆಟ್ಟಿ, ಅಮೂಲ್ಯ ಭಾರದ್ವಾಜ್, ಅಮಿತ್, ಸಂತೋಷ್
ರೇಟಿಂಗ್: 3
ಸಸ್ಪೆನ್ಸ್, ಹಾರರ್ ಚಿತ್ರಗಳು ಅಪರೂಪ ಆಗಿದೆಯಲ್ಲ ಎಂದುಕೊಳ್ಳುವವರು ನೋಡಬಹುದಾದ ಸಿನಿಮಾ ಇದು. ಹಿನ್ನೆಲೆ ಸಂಗೀತ, ಕತೆಯ ತೆರೆದುಕೊಳ್ಳುವ ಪರಿಸರ, ಚಿತ್ರೀಕರಣದ ಜಾಗಗಳು ಚಿತ್ರದ ಬೆನ್ನೆಲುಬಾಗಿ ನಿಲ್ಲುತ್ತವೆ. ಮಗನನ್ನು ಕಳೆದುಕೊಂಡಿರುವ ವೈದ್ಯ ದಂಪತಿ, ಹಳ್ಳಿಯೊಂದಕ್ಕೆ ಬರುತ್ತಾರೆ. ಕಹಿಯನ್ನು ಮರೆತು ಆರೋಗ್ಯ ಸೇವೆಯಲ್ಲಿ ತೊಡಗಿರುವ ಚಿತ್ರದ ನಾಯಕ. ಆ ಊರಿನಲ್ಲಿ ಆತ್ಮವನ್ನು ನೋಡುವ ನಾಯಕಿ ಪತ್ನಿ. ಮುಂದೆ ಮಂತ್ರವಾದಿಯ ಪ್ರವೇಶವಾಗುತ್ತದೆ. ಆತ್ಮವನ್ನು ಬಂಧಿಸುವ ಸಾಹಸ ಮಾಡುತ್ತಾರೆ. ನಾಯಕಿ ದೇಹ ಹೊಕ್ಕುವ ಆತ್ಮ ಯಾರದ್ದು ಎನ್ನುವ ಕತೆ ಶುರುವಾಗಿ ಕೊನೆಯಲ್ಲಿ ಯಾರೂ ಅಂದಾಜಿಸದ ತಿರುವಿನೊಂದಿಗೆ ಸಿನಿಮಾ ಮುಗಿಯುತ್ತದೆ.
Shakhahaari Review: ಬೆಂಕಿಬರಹದಲ್ಲಿ ಅರಳಿದ ಪ್ಯೂರ್‌ವೆಜ್ ಥ್ರಿಲ್ಲರ್
ಕತೆಗೆ ಪೂರಕವಾದ ಶಿವಶಂಕರ್ ಛಾಯಾಗ್ರಾಹಣ, ಕಿರಣ್ ಆರ್ ಹೆಮ್ಮಿಗೆ ಸಂಭಾಷಣೆ, ಹಿನ್ನೆಲೆ ಸಂಗೀತ ಹಾಗೂ ಪಾತ್ರಧಾರಿಗಳ ನಟನೆಯೊಂದಿಗೆ ‘ಪ್ರೇತ’ ಚಿತ್ರ ತಾಂತ್ರಿಕವಾಗಿ ಚೆನ್ನಾಗಿ ಮೂಡಿ ಬಂದಿದೆ.