ವಸಿಷ್ಠ ಸಿಂಹ, ಹರಿಪ್ರಿಯಾ, ಅವಿನಾಶ್, ಸ್ವಾತಿ, ಮಂಜು ಪಾವಗಡ ಆಭಿನಯಿಸಿರುವ ಯದಾ ಯದಾಹಿ ಸಿನಿಮಾ ರಿಲೀಸ್ ಆಗಿದೆ...ಸಿನಿಮಾ ಹೇಗಿದೆ?
ರಾಜೇಶ್ ಶೆಟ್ಟಿ
ಹತ್ತಿರದಲ್ಲಿದ್ದೇ ಇನ್ನೊಬ್ಬರನ್ನು ಹಣಿಯುವ, ಗೊತ್ತೇ ಆಗದಂತೆ ಆಪ್ತರಾಗಿರುವವರನ್ನು ಸೋಲಿಸುವ ತಣ್ಣಗಿನ ದ್ರೋಹದ ಕತೆಗಳು ಆಘಾತ ಉಂಟು ಮಾಡುತ್ತವೆ. ಬುದ್ಧಿವಂತಿಕೆಯಿಂದಲೇ ತಮಗೆ ಬೇಕಾದಂತೆ ಯಾವ ರೀತಿ ಬೇಕಾದರೂ ಕತೆ ಹೆಣೆಯಬಲ್ಲವರ ವಂಚನೆಯ ಕತೆಗಳು ದಿಗ್ಭ್ರಮೆ ಹುಟ್ಟಿಸುತ್ತವೆ. ಇದು ಅಂಥಾ ಒಂದು ಕತೆ. ದ್ರೋಹದ ಕತೆ. ವಂಚನೆಯ ಕತೆ.
ಚಿತ್ರದ ಮೊದಲ ದೃಶ್ಯದಲ್ಲಿಯೇ ಒಂದು ಕೊಲೆ ನಡೆಯುತ್ತದೆ. ಒಬ್ಬ ಹುಡುಗಿ ತನ್ನನ್ನು ರೇಪ್ ಮಾಡಲೆಂದು ಬಂದ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದಾಳೆ ಎಂಬಲ್ಲಿಂದ ಕತೆ ಶುರುವಾಗುತ್ತದೆ. ಆ ಘಟನೆಯ ತನಿಖೆಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಬರುತ್ತಾನೆ. ಈ ಮೂರು ಪಾತ್ರಗಳು ಮುಂದೆ ಸಿನಿಮಾವನ್ನು ಕೈಹಿಡಿದು ನಡೆಸುತ್ತವೆ.
Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್ ಕಥನ
ನಿರ್ದೇಶನ: ಅಶೋಕ್ ತೇಜ
ತಾರಾಗಣ: ವಸಿಷ್ಠ ಸಿಂಹ, ಹರಿಪ್ರಿಯಾ, ಅವಿನಾಶ್, ಸ್ವಾತಿ, ಮಂಜು ಪಾವಗಡ
ರೇಟಿಂಗ್: 3
ಮೇಲ್ನೋಟಕ್ಕೆ ಕಂಡಿದ್ದು ಸತ್ಯವಾಗಿರಬೇಕಾಗಿಲ್ಲ. ಯಾರೋ ಒಬ್ಬರು ಹೇಳಿದ ವಿಚಾರವೇ ಅಂತಿಮವಾಗಿರಬೇಕಾಗಿಲ್ಲ. ಅಗೆಯುತ್ತಾ ಬಗೆಯುತ್ತಾ ಹೋದಾಗ ಹೊಸದೇನೋ ಸಿಗುತ್ತದೆ. ಬಗೆಯದೇ ಹೋದರೆ ಆ ಸತ್ಯ ಮಣ್ಣಾಗುತ್ತದೆ. ಆದರೆ ಇಲ್ಲಿ ಸತ್ಯ ಮಣ್ಣಾಗುವುದಿಲ್ಲ. ದ್ರೋಹದ ಕತೆ ಬಯಲಾಗುತ್ತದೆ. ದ್ರೋಹ ಮಾಡಿದ್ದು ಯಾರು ಎಂದು ತಿಳಿದಾಗ ಅಚ್ಚರಿ ಎನ್ನಿಸುತ್ತದೆ.ಇದೊಂದು ಥ್ರಿಲ್ಲರ್ ಜಾನರ್‌ನ ಸಿನಿಮಾ. ಚಿತ್ರಕತೆಯೇ ಈ ಸಿನಿಮಾದ ಆಧಾರ ಸ್ತಂಭ. ಚಿತ್ರಕತೆ ಮತ್ತು ಮಾತಿನ ಮೂಲಕವೇ ಸಿನಿಮಾ ಕಟ್ಟಲಾಗಿದೆ. ಈ ಪ್ರಕ್ರಿಯೆಯಲ್ಲಿ ಕೊಂಚ ವೇಗ ನಿಧಾನವಾಗಬಹುದು. ಆದರೆ ಇಂಟರ್ವಲ್ ಹೊತ್ತಿಗೆ ಕುತೂಹಲಕರ ಘಟ್ಟಕ್ಕೆ ಬಂದು ನಿಲ್ಲುವ ಸಿನಿಮಾ ಕ್ಲೈಮ್ಯಾಕ್ಸ್ ಮುಗಿಯುವಾಗ ಬೆರಗನ್ನು ಉಳಿಸಿಹೋಗುತ್ತದೆ.
The Kerala Story Review: ಬರಿ ಸಿನಿಮಾವಲ್ಲ, ಹೆಣ್ಣು ಮಕ್ಕಳ ಬದುಕು ಬದಲಿಸೋ ನೈಜಕಥೆ!
ಒಬ್ಬ ಕತೆ, ಚಿತ್ರಕತೆಗಾರನ ಶಕ್ತಿ ಏನು ಎಂಬುದು ನಿರೂಪಿಸುವ ಸಿನಿಮಾ ಇದು. ಎಲ್ಲೂ ಸಡಿಲು ಬಿಟ್ಟಿಲ್ಲ. ಎಲ್ಲಾ ಸೂತ್ರವನ್ನು ಬಿಗಿದು ಕಟ್ಟಿ ಕೊನೆಗೊಂದು ಚಂದದ ರೂಪ ಕೊಡುತ್ತಾರೆ. ಕೆಲವು ಕಡೆ ಸೂತ್ರ ಸಡಿಲಾಗಿದೆ ಅನ್ನಿಸಿದರೂ ಅದು ಕತೆಗೆ ಅವಶ್ಯವೇ ಆಗಿರುತ್ತದೆ.
ಇದು ತೆಲುಗಿನ ಎವರು ಚಿತ್ರದ ರೀಮೇಕ್. ಆದರೆ ಕನ್ನಡಕ್ಕೆ ಬರುವಾಗ ಕನ್ನಡದ ನೆಲಕ್ಕೆ ತಕ್ಕಂತೆ ಸಿನಿಮಾ ರೂಪಿಸಿದ್ದಾರೆ. ಮುಂಗೋಪಿಯಾಗಿ, ನಿಷ್ಠುರ ಅಧಿಕಾರಿಯಾಗಿ, ಅಮರ ಪ್ರೇಮಿಯಾಗಿ ವಸಿಷ್ಠ ಸಿಂಹ ನಟನೆ ಅಮೋಘ. ಒಂದೊಂದು ಗಳಿಗೆಯಲ್ಲಿ ಒಂದೊಂದು ಥರ ಬದಲಾಗುತ್ತಾ ಹೋಗುವ ಪಾತ್ರವನ್ನು ಹರಿಪ್ರಿಯಾ ಜೀವಿಸಿದ್ದಾರೆ ಅನ್ನುವುದೇ ಸರಿಯಾದದ್ದು. ಥ್ರಿಲ್ಲರ್ ಸಿನಿಮಾ ನೋಡಲು ಇಷ್ಟ ಪಡುವವರಿಗೆ, ತಣ್ಣಗಿನ ದ್ರೋಹದ ಕತೆಯನ್ನು ಎದುರುಗೊಳ್ಳುವ ಮನಸ್ಸಿರುವವರಿಗೆ, ಮರ್ಡರ್ ಮಿಸ್ಟ್ರಿ ಸಿನಿಮಾಗಳ ಅಭಿಮಾನಿಗಳಿಗೆ ಯದಾ ಯದಾ ಹಿ ಹತ್ತಿರ ಮತ್ತು ಆಪ್ತ.