Film Review: ಸಖತ್‌

By Kannadaprabha News  |  First Published Nov 27, 2021, 10:00 AM IST

ಭರ್ಜರಿ ಕಾಮಿಡಿ, ಅಲ್ಲಲ್ಲಿ ಕಿಲಾಡಿತನ, ಒಂದು ಭಗ್ನ ಪ್ರೇಮ, ಮತ್ತೊಂದು ಮಳೆ ಹಾಡು, ರುಚಿಗೆ ತಕ್ಕಷ್ಟುಫೈಟು, ಗುಪ್ತಗಾಮಿನಿಯಾಗಿ ಹರಿವ ಮಾನವೀಯತೆ- ಇವಿಷ್ಟುಗಣೇಶ್‌ ಸಿನಿಮಾದ ಬೇಸಿಕ್‌ ಇನ್ಟ್ಸಿಂಕ್ಟ್. 


ಸಿಂಪಲ್‌ ಸುನಿ (Simple Suni) ನಿರ್ದೇಶನದ ‘ಸಖತ್‌’ (Sakat) ಈ ಎಲ್ಲ ಆಶೋತ್ತರಗಳನ್ನ ಪೂರೈಸುವ ಜೊತೆಗೆ ಬೋನಸ್‌ ಆಗಿ ಮತ್ತೂ ಮನೋರಂಜನೆ ನೀಡುತ್ತದೆ. ಸಣ್ಣ ನಗೆ, ಹಗುರಾದ ಮನಸ್ಸಿನೊಂದಿಗೆ ಥೇಟರ್‌ನಿಂದ ಆಚೆ ಬಂದರೆ ಕೊಟ್ಟದುಡ್ಡಿಗೆ ಮೋಸ ಇಲ್ಲ.

ಆರ್ಕೆಸ್ಟ್ರಾದಲ್ಲಿ (Orchestra) ಹಾಡುವ ಸ್ಮಾರ್ಟ್‌ ಹುಡುಗ ಬಾಲು. ಟಿವಿಯಲ್ಲಿ ಬರೋ ಅಂತ್ಯಾಕ್ಷರಿ ರಿಯಾಲಿಟಿ ಶೋದ ಆ್ಯಂಕರ್‌ (Anchor) ಮಯೂರಿ ಮೇಲೆ ಈತನಿಗೆ ಕ್ರಶ್ಶು. ಆರ್ಕೆಸ್ಟ್ರಾದ ಮಾಲೀಕ ಸಾಧುಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸೋ ಆಸೆ. ಆದರೆ ಆ ಶೋ ನÜಡೆಸೋ ಆಯೋಜಕರಿಗೆ ಟಿಆರ್‌ಪಿ (TRP) ಕ್ರೇಜ್‌. ಬಾಲುವಿಗಿರುವ ವಿಶಿಷ್ಟಸಾಮರ್ಥ್ಯವನ್ನೇ ಬಳಸಿ ರಿಯಾಲಿಟಿ ಶೋದಲ್ಲಿ (Reality Show) ಭಾಗವಹಿಸೋ ಪ್ಲಾನ್‌ ಸಾಧುವಿನದು. ಆದರೆ ಪ್ಲಾನ್‌ ಉಲ್ಟಾಹೊಡೆದು ಬಾಲು ಅಂಧನಾಗಿ ರಿಯಾಲಿಟಿ ಶೋದಲ್ಲಿ ಭಾಗವಹಿಸೋದು ಸಿನಿಮಾ ಕೊಡೋ ಮೊದಲ ಚಮಕ್‌.

Tap to resize

Latest Videos

ಫಸ್ಟ್‌ಹಾಫ್‌ ತುಂಬಾ ಬಾಲು ಪಾತ್ರದಲ್ಲಿ ಗಣೇಶ್‌ ಸಿಡಿಸೋ ಕಾಮಿಡಿ ಬಾಂಬ್‌ಗಳು ಒಂದೆರಡಲ್ಲ. ಹಾಡು, ಕಾಮಿಡಿಗಳೇ (Comedy) ಗಲಗಲ ಅನ್ನುತ್ತಾ ಮನಸ್ಸನ್ನು ಕಥೆಗೆ ಸಜ್ಜು ಮಾಡುತ್ತದೆ. ಸೆಕೆಂಡ್‌ ಹಾಫ್‌ನಲ್ಲಿ ಕಥೆಯ ಓಟ ಶುರು. ಆಗ ಫಸ್ಟ್‌ ಹಾಫ್‌ ತುಂಬ ತುಂಬಿಕೊಂಡಿರುವ ರಿಯಾಲಿಟಿ ಶೋ ಸೀನ್‌ ನಿಮಿತ್ತ ಮಾತ್ರ ಅನ್ನುವ ಜ್ಞಾನೋದಯವಾಗುತ್ತೆ. ಸಿನಿಮಾದುದ್ದಕ್ಕೂ ನಿರ್ದೇಶಕ ಸುನಿ ಇಂಥಾ ಜ್ಞಾನೋದಯಗಳನ್ನು ಮಾಡಿಸುತ್ತಲೇ ಹೋಗುತ್ತಾರೆ. ಈ ನಡುವೆ ಅಂಧ ಪಾತ್ರದಲ್ಲಿರುವಾಗಲೇ ಬಾಲು ಒಂದು ಕೊಲೆಗೂ ಸಾಕ್ಷಿಯಾಗುತ್ತಾನೆ. ಜಗತ್ತಿನ ಪಾಲಿಗೆ ಅಂಧನಾದ ಬಾಲು ಕೊಲೆಗೆ ಮುಖ್ಯ ಸಾಕ್ಷಿಯಾಗಿ ಆ ರಹಸ್ಯವನ್ನು ಹೇಗೆ ರಿವೀಲ್‌ ಮಾಡ್ತಾನೆ ಅನ್ನೋದು ಕಥೆಯ ಮುಖ್ಯ ಪಾಯಿಂಟ್‌.

Sakath: ಬೆಳ್ಳಿ ಪರದೆ ಮೇಲೆ ನಕ್ಕು ನಗಿಸಲಿದ್ದಾನೆ ಗೋಲ್ಡನ್​ ಸ್ಟಾರ್​ ಗಣೇಶ್

ಒಂದಾನೊಂದು ಕಾಲದಲ್ಲಿ ಸಿಂಪಲ್ಲಾಗೊಂದು ಲವ್‌ಸ್ಟೋರಿಯಂಥಾ ಸೂಕ್ಷ್ಮ ಕಥೆ ಹೇಳಿದ ಸುನಿ ಇಲ್ಲಿ ಭರ್ಜರಿ ಮನರಂಜನೆಯ ರಸದೌತಣವನ್ನೇ ಉಣಬಡಿಸಿದ್ದಾರೆ. ಅಂಧ ಮಕ್ಕಳ ಜಗತ್ತನ್ನು ಅವರು ಕಟ್ಟಿಕೊಟ್ಟರೀತಿಯೂ ಪರಿಣಾಮಕಾರಿ. ಕಥೆಗೆ ಪೂರಕವಲ್ಲದ ಸಾಕಷ್ಟುಸಂಗತಿಗಳು ಬರುತ್ತವೆ. ಆದರೆ ಅವೂ ನಗಿಸುವ, ಕುಣಿಸುವ ಕಾರಣ ಮಾಫಿ ಇದೆ. ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ಕೈಚಳಕ ಸಿನಿಮಾದುದ್ದಕ್ಕೂ ಗೋಚರಿಸುತ್ತದೆ. ಅದರಲ್ಲೂ ‘ಪ್ರೇಮಕ್ಕೆ ಕಣ್ಣಿಲ್ಲ’ ಹಾಡಿನ ಲೈಟಿಂಗ್‌, ದೃಶ್ಯ ಬಲು ಸೊಗಸು. ಇಡೀ ಸಿನಿಮಾದಲ್ಲಿ ಗಣೇಶ್‌ ಸಖತ್ತಾಗಿ ಮಿಂಚಿದ್ದಾರೆ. ಮುಂಜಾವದ ಮಲ್ಲಿಗೆಯಂತೆ ಬರುವ ನಿಶ್ವಿಕಾ ಅವರದು ಗಮನ ಸೆಳೆಯುವ ಅಭಿನಯ. ಉಳಿದವರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

Sakath: ಗಣೇಶ್-ಸುರಭಿ ಕಾಂಬಿನೇಷನ್​ನ 'ಶುರುವಾಗಿದೆ' ಸಾಂಗ್ ರಿಲೀಸ್

ತರ್ಕ ಇಲ್ಲ, ಕ್ಲೀಷೆ ಹೆಚ್ಚು, ಹೊಸತನ ಇರಬೇಕಿತ್ತು, ಎಳೆದಾಟ ಬೇಡಿತ್ತು ಅನ್ನೋ ಗೊಣಗಾಟಗಳನ್ನ ಪಕ್ಕಕ್ಕಿಟ್ಟು ವೀಕೆಂಡಲ್ಲಿ ಮಜವಾಗಿ ಒಂದು ಸಿನಿಮಾ ನೋಡ್ಬೇಕು ಅನ್ನೋರು ‘ಸಖತ್‌’ಅನ್ನು ಮಿಸ್‌ ಮಾಡೋ ಹಾಗಿಲ್ಲ.

click me!